ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಿಸ್ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಚಾಕುವಿನಿಂದ ದಾಳಿ ನಡೆಸಿ, ನಾಲ್ವರ ಹತ್ಯೆ

|
Google Oneindia Kannada News

ಪ್ಯಾರಿಸ್, ಅಕ್ಟೋಬರ್ 3: ಪ್ಯಾರಿಸ್ ನ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಸಿಬ್ಬಂದಿಯೊಬ್ಬ ಅಧಿಕಾರಿಗಳ ಮೇಲೆ ಗುರುವಾರ ಚಾಕುವಿನಿಂದ ಹಲ್ಲೆ ನಡೆಸಿ, ಕನಿಷ್ಠ ನಾಲ್ಕು ಮಂದಿಯನ್ನು ಕೊಂದಿದ್ದಾನೆ. ದಾಳಿಕೋರನನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಫ್ರೆಂಚ್ ಪೊಲೀಸ್ ಯೂನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ದಾಳಿಯನ್ನು ದಾಳಿಕೋರ ಕಚೇರಿಯಲ್ಲಿ ಆರಂಭಿಸಿದ್ದಾನೆ. ಆ ನಂತರ ನೋಟ್ರ ಡೇಮ್ ಕೆಥೆಡ್ರಲ್ ಪ್ರದೇಶದಲ್ಲಿ ಇರುವ ಪೊಲೀಸ್ ಕೇಂದ್ರ ಕಚೇರಿಯ ದೊಡ್ಡ ಕಾಂಪೌಂಡ್ ನ ಉದ್ದಕ್ಕೂ ಮುಂದುವರಿಸಿದ್ದಾನೆ. ಸದ್ಯಕ್ಕೆ ಗಾಯಾಳುಗಳು ಎಷ್ಟು ಮಂದಿ ಎಂಬ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ.

ಫ್ರಾನ್ಸ್ ಪೊಲೀಸರ ಮೇಲೆ ವಾಹನ ದಾಳಿ, 6 ಸೈನಿಕರಿಗೆ ಗಾಯಫ್ರಾನ್ಸ್ ಪೊಲೀಸರ ಮೇಲೆ ವಾಹನ ದಾಳಿ, 6 ಸೈನಿಕರಿಗೆ ಗಾಯ

ದಾಳಿಕೋರನ ಉದ್ದೇಶ ಏನು ಎಂಬ ಬಗ್ಗೆ ತಿಳಿದುಬಂದಿಲ್ಲ. ಇಪ್ಪತ್ತು ವರ್ಷ ವಯಸ್ಸಿನ ಪೊಲೀಸ್ ಸಿಬ್ಬಂದಿ ಈ ದಾಳಿ ನಡೆಸಿದ್ದು, ಆತ ಗುಪ್ತಚರ ಇಲಾಖೆಯಲ್ಲಿ ಆಡಳಿತಗಾರ ಹುದ್ದೆಯನ್ನು ನಿರ್ವಹಿಸುತ್ತಿದ್ದ. ಗುರುವಾರ ಆತ ದಾಳಿ ನಡೆಸುವ ತನಕ ಯಾವುದೇ ಅನುಮಾನ ಮೂಡಿರಲಿಲ್ಲ. ಅಂದ ಹಾಗೆ ಈ ಹಿಂದೆ ಪೊಲೀಸ್ ಅಧಿಕಾರಿಗಳ ಮೇಲೆ ಇಂಥ ದಾಳಿ ನಡೆದಿರಲಿಲ್ಲ ಎನ್ನಲಾಗುತ್ತಿದೆ.

Paris Attack

ಪ್ಯಾರಿಸ್ ನ ಪೊಲೀಸರಿಗೆ ಕಡಿಮೆ ಸಂಬಳ, ಕೆಲಸದ ಅವಧಿ ಹೆಚ್ಚು ಹಾಗೂ ಪೊಲೀಸರಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ದೂರಿ ಸಾವಿರಾರು ಅಧಿಕಾರಿಗಳು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಅದಾದ ಮರುದಿನಕ್ಕೆ ಈ ಘಟನೆ ನಡೆದಿದೆ.

ಫಾನ್ಸ್ ನ ಪ್ರಧಾನಿ, ಆಂತರಿಕ ಸಚಿವ ಮತ್ತಿತರರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಈಚೆಗೆ ಉಗ್ರಗಾಮಿಗಳು ಫ್ರೆಂಚ್ ಪೊಲೀಸರನ್ನು ಗುರಿ ಮಾಡಿಕೊಂಡು ದಾಳಿ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

English summary
Paris police head quarters attacked with knife by employee, killed 4 officers. After that he was shot dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X