ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ DNA ಯಲ್ಲೇ ಭಯೋತ್ಪಾದನೆ: ಯುನೆಸ್ಕೋದಲ್ಲೂ ಮುಖಭಂಗ

|
Google Oneindia Kannada News

ಪ್ಯಾರಿಸ್, ನವೆಂಬರ್ 15: "ಪಾಕಿಸ್ತಾನದ ಡಿಎನ್ ಎ(ವಂಶವಾಹಿ) ಯಲ್ಲೇ ಭಯೋತ್ಪಾದನೆ ಆಳವಾಗಿ ಬೇರೂರಿದೆ" ಎನ್ನುವ ಮೂಲಕ ಭಾರತ ಪಾಕಿಸ್ತಾನಕ್ಕೆ ಯುನೆಸ್ಕೋ ಸಾಮಾನ್ಯ ಸಭೆಯಲ್ಲಿ ತಕ್ಕ ಉತ್ತರ ಕೊಟ್ಟಿದೆ.

ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ನಡೆದ ಯುನೆಸ್ಕೋ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ನಿಯೋಗದ ನೇತೃತ್ವ ವಹಿಸಿದ ಅನನ್ಯಾ ಅಗರ್ವಾಲ್ ಮಾತನಾಡಿ, "ಪಾಕಿಸ್ತಾನದಲ್ಲಿ ಕತ್ತಲಲ್ಲದೆ ಬೇರೆ ಏನೂ ಇಲ್ಲ" ಎಂದಿದ್ದಾರೆ.

ಲ್ಯಾಡೆನ್ ಪಾಕಿಸ್ತಾನದ ಹೀರೋ: ಪರ್ವೇಜ್ ಮುಷರಫ್ಲ್ಯಾಡೆನ್ ಪಾಕಿಸ್ತಾನದ ಹೀರೋ: ಪರ್ವೇಜ್ ಮುಷರಫ್

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ ೩೭೦ ನೇ ವಿಧಿಯನ್ನು ರದ್ದುಗೊಳಿಸಿ, ಕಣಿವೆ ರಾಜ್ಯಕ್ಕೆ ನೀದಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ಹಿಂಪಡೆದ ನಂತರ ಪಾಕಿಸ್ತಾನ ಭಾರತದ ವಿರುದ್ಧ ವಿಶ್ವಸಂಸ್ಥೆಯ ಬಾಗಿಲು ತಟ್ಟಿತ್ತು. ಆದರೆ ಕಾಶ್ಮೀರ ಭಾರತದ ಆಂತರಿಕ ವಿಷಯ ಎನ್ನುವ ಮೂಲಕ ಹಲವು ದೇಶಗಳು ಪಾಕಿಸ್ತಾನದ ನಡೆಗೆ ಮುಖಭಂಗವಾಗುವಂಥ ಹೇಳಲಿಕೆ ನೀಡಿದ್ದವು. ಇದೀಗ ಯುನೆಸ್ಕೋ ಸಭೆಯಲ್ಲೂ ಭಾರತ ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವುದನ್ನು ನೇರವಾಗಿ ಆರೋಪಿಸಿದ್ದು, ಮತ್ತೆ ಪಾಕಿಸ್ತಾನ ಮುಖಭಂಗ ಅನುಭವಿಸುವಂತಾಗಿದೆ.

ಎಲ್ಲ ದುಷ್ಟಶಕ್ತಿಗಳಿಗೂ ಪಾಕಿಸ್ತಾನದಲ್ಲಿ ನೆಲೆ!

ಎಲ್ಲ ದುಷ್ಟಶಕ್ತಿಗಳಿಗೂ ಪಾಕಿಸ್ತಾನದಲ್ಲಿ ನೆಲೆ!

ದೌರ್ಭಾಗ್ಯ ಎಂದರೆ ಭಯೋತ್ಪಾದಕರು, ಉಗ್ರವಾದದ ಪ್ರತಿಪಾದಕರು ಮುಂತಾದ ಎಲ್ಲ ದುಷ್ಟಶಕ್ತಿಗಳಿಗೂ ಪಾಕಿಸ್ತಾನ ನೆಲೆ ನೀಡುತ್ತಿದೆ. ಭಯೋತ್ಪಾದನೆಯ ಪ್ರತಿಪಾದನೆಯ ಕೆಲಸ ಮಾಡುತ್ತಿದೆ ಎಂದು ಭಾರತ ದೂರಿದೆ.

ಯುನೆಸ್ಕೋ ವೇದಿಕೆ ದುರುಪಯೋಗ

ಯುನೆಸ್ಕೋ ವೇದಿಕೆ ದುರುಪಯೋಗ

ಪಾಕಿಸ್ತಾನವು ಭಾರತದ ವಿರುದ್ಧ ವಿಷ ಕಾರಲು ಮತ್ತು ಅದನ್ನು ರಾಜಕೀಯಗೊಳಿಸಲು ಯುನೆಸ್ಕೋ(The United Nations Educational, Scientific and Cultural Organization)ದಂಥ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ವಿಷಾದಕರ ಸಂಗತಿ ಎಂದು ಭಾರತ ಬೇಸರ ವ್ಯಕ್ತಪಡಿಸಿದೆ.

ಅಯೋಧ್ಯೆ ತೀರ್ಪು: ಪಾಕಿಸ್ತಾನದ ಪ್ರತಿಕ್ರಿಯೆ ಹೀಗಿತ್ತುಅಯೋಧ್ಯೆ ತೀರ್ಪು: ಪಾಕಿಸ್ತಾನದ ಪ್ರತಿಕ್ರಿಯೆ ಹೀಗಿತ್ತು

ವಿಶ್ವಸಂಸ್ಥೆ ವೇದಿಕೆಯಲ್ಲೇ ಅಣುದಾಳಿಯ ಬೆದರಿಕೆ!

ವಿಶ್ವಸಂಸ್ಥೆ ವೇದಿಕೆಯಲ್ಲೇ ಅಣುದಾಳಿಯ ಬೆದರಿಕೆ!

"ವಿಶ್ವಸಂಸಥೆಯ ವೇದಿಕೆಯಲ್ಲಿ ನಿಂತು ಒಂದು ದೇಶದ ಅಧ್ಯಕ್ಷರೇ ಅಣುಬಾಂಬ್ ದಾಳಿಯ ಬೆದರಿಕೆ ಒಡ್ಡುತ್ತಾರೆಂದರೆ ಅಂಥ ಕೆಲಸ ಮಾಡುವುದಕ್ಕೆ ಪಾಕಿಸ್ತಾನಕ್ಕೆ ಮಾತ್ರ ಸಾಧ್ಯ" ಎಂದ ಅನನ್ಯಾ ಅಗರ್ವಾಲ್, ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್ ಅವರ ಭಾಷಣವನ್ನು ಸ್ಮರಿಸಿದರು. "ಅಕಸ್ಮಾತ್ ಎರಡು ನೆರೆ ದೇಶಗಳ ನಡುವೆ ಪರಸ್ಪರ ಅಣು ಯುದ್ಧವಾದರೆ ಪರಿಸ್ಥಿತಿ ತೀರಾ ಹದಗೆಡುತ್ತದೆ" ಎಮದು ಇಮ್ರಾನ್ ಖಾನ್ ಆ ಭಾಷಣದಲ್ಲಿ ಹೇಳಿದ್ದರು.

ಲ್ಯಾಡೆನ್ ನನ್ನು ಹೀರೋ ಎಂದ ಮುಷರಫ್!

ಲ್ಯಾಡೆನ್ ನನ್ನು ಹೀರೋ ಎಂದ ಮುಷರಫ್!

"ಅಷ್ಟೇ ಅಲ್ಲ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್, ಆಲ್ ಖೈದಾ ಉಗ್ರ ಓಸಾಮಾ ಬಿನ್ ಲ್ಯಾಡೆನ್ ನನ್ನು ಪಾಕಿಸ್ತಾನದ ಹೀರೋ ಎಂದು ಕರೆದಿದ್ದು ಸಹ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಅದರ ನಡೆಗೆ ಸಾಕ್ಷಿ" ಎಂದು ಅಗರ್ವಾಲ್ ಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸ್ತಾನದ 'ಬಂಡವಾಳ' ಬಟಾಬಯಲು; ಹೇಳುವುದು ಒಂದು ಮಾಡುವುದು ಇನ್ನೊಂದು!ಪಾಕಿಸ್ತಾನದ 'ಬಂಡವಾಳ' ಬಟಾಬಯಲು; ಹೇಳುವುದು ಒಂದು ಮಾಡುವುದು ಇನ್ನೊಂದು!

English summary
India On Pakistan In UNESCO General Conference in Paris, France Said, Pakistan Has DNA of Terrorism,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X