ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್‌ ನಡುವೆ ಫ್ರಾನ್ಸ್‌ನಲ್ಲಿ ಕೋವಿಡ್‌ ಹೊಸ ರೂಪಾಂತರ ಐಎಚ್‌ಯು ಪತ್ತೆ

|
Google Oneindia Kannada News

ಪ್ಯಾರಿಸ್, ಜನವರಿ 04: ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೊರೊನಾ ವೈರಸ್‌ನ ರೂಪಾಂತರ ಓಮಿಕ್ರಾನ್‌ ರೂಪಾಂತರದ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿದೆ. ಓಮಿಕ್ರಾನ್‌ ಹೆಚ್ಚು ಸಾಂಕ್ರಾಮಿಕವಾಗಿರುವ ಕಾರಣದಿಂದಾಗಿ ವಿಶ್ವದೆಲ್ಲೆಡೆ ಕೋವಿಡ್‌ನ ಹೊಸ ಅಲೆಯ ಆತಂಕ ಕಂಡು ಬಂದಿದೆ. ಈ ನಡುವೆ ಫ್ರಾನ್ಸ್‌ನಲ್ಲಿ ಹೆಚ್ಚು ರೂಪಾಂತರಿಗಳನ್ನು ಹೊಂದಿರುವ ಕೊರೊನಾವೈರಸ್‌ ಸೋಂಕಿನ ಹೊಸ ರೂಪಾಂತರ ಐಎಚ್‌ಯು ಕಾಣಿಸಿಕೊಂಡಿದೆ.

ಈ ಹೊಸ ರೂಪಾಂತರ B.1.640.2 ಕ್ಕೆ ಐಎಚ್‌ಯು ಎಂದು ಹೆಸರಿಸಲಾಗಿದೆ. ಸಂಶೋಧಕರ ಪ್ರಕಾರ ಈ ಕೊರೊನಾವೈರಸ್‌ ರೂಪಾಂತರದಲ್ಲಿ ಸುಮಾರು 46 ರೂಪಾಂತರಿಗಳು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಅಂದರೆ ಓಮಿಕ್ರಾನ್‌ ರೂಪಾಂತರದಲ್ಲಿ ಇರುವ ರೂಪಾಂತರಿಗಳಿಗೂ ಅಧಿಕ ರೂಪಾಂತರಿ ಓಮಿಕ್ರಾನ್‌ನಲ್ಲಿ ಕಾಣಿಸಿಕೊಂಡಿದೆ.

ಓಮಿಕ್ರಾನ್‌ ಆತಂಕ: ವಿವಿಧ ದೇಶಗಳ ಪ್ರಯಾಣ ಮಾರ್ಗಸೂಚಿ ಹೀಗಿದೆ..ಓಮಿಕ್ರಾನ್‌ ಆತಂಕ: ವಿವಿಧ ದೇಶಗಳ ಪ್ರಯಾಣ ಮಾರ್ಗಸೂಚಿ ಹೀಗಿದೆ..

ಆಫ್ರಿಕನ್‌ ದೇಶ ಕೆಮರೂನ್‌ಗೆ ಪ್ರಯಾಣ ಇತಿಹಾಸವನ್ನು ಹೊಂದಿರುವ ಸುಮಾರು 12 ಮಂದಿಯಲ್ಲಿ ಈ ಹೊಸ ರೂಪಾಂತರ ಐಎಚ್‌ಯು ಪತ್ತೆಯಾಗಿದೆ. ಆದರೆ ಈಗಲೂ ವಿಶ್ವದಾದ್ಯಂತ ಓಮಿಕ್ರಾನ್‌ ರೂಪಾಂತರವೇ ಅಧಿಕವಾಗಿದೆ. ಈ ನಡುವೆ ಐಎಚ್‌ಯು ರೂಪಾಂತರದ ಆತಂಕವೂ ಕೂಡಾ ಹೆಚ್ಚುತ್ತಿದೆ.

New highly mutated COVID-19 variant more infectious than Omicron detected in France

ಇನ್ನು ಈ ಹೊಸ ರೂಪಾಂತರ ಐಎಚ್‌ಯು ಅಥವಾ B.1.640.2 ಫ್ರಾನ್ಸ್‌ ಹೊರತುಪಡಿಸಿ ಬೇರೆ ಯಾವುದೇ ದೇಶದಲ್ಲಿ ಈವರೆಗೂ ಕಂಡು ಬಂದಿಲ್ಲ. ಇನ್ನು ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಕೂಡಾ ಇನ್ನಷ್ಟೇ ಹೆಚ್ಚಿನ ಮಾಹಿತಿ ನೀಡಬೇಕಾಗಿದೆ.

ಸಂಶೋಧನಾ ವರದಿ ಏನು ಹೇಳುತ್ತದೆ?

ಈ ಬಗ್ಗೆ ಮಾಹಿತಿ ನೀಡಿರುವ ಸಂಶೋಧನಾ ವರದಿಯು, "ಈ ರೂಪಾಂತರದಲ್ಲಿ 14 ಅಮಿನೋ ಆಸಿಡ್‌ ಸಬ್ಸಿಟ್ಯೂಷನ್ಸ್‌, ಹಾಗೆಯೇ N501Y, E484K ಗಳು ಈ ಕೊರೊನಾ ವೈರಸ್‌ನ ಹೊಸ ರೂಪಾಂತರದ ಸ್ಪೈಕ್‌ ಪ್ರೋಟಿನ್‌ನಲ್ಲಿ ಇದೆ," ಎಂದು ಹೇಳುತ್ತದೆ. ಇನ್ನು ಈ ರೂಪಾಂತರ ಹೆಚ್ಚು ಅಪಾಯಕಾರಿ ಎಂದು ಕೂಡಾ ವರದಿ ಆಗಿದೆ. "ಈ ರೂಪಾಂತರದಲ್ಲಿರುವ ರೂಪಾಂತರಿಗಳನ್ನು ಅಥವಾ ಮ್ಯೂಟೇಷನ್‌ಗಳನ್ನು ನೋಡಿದಾಗ ಈ ಹೊಸ ರೂಪಾಂತರ ಹೆಚ್ಚು ಸಾಂಕ್ರಾಮಿಕ ಎಂದು ಕಂಡು ಬರುತ್ತಿದೆ," ಎಂದು ಸಂಶೋಧಕರು ಹೇಳುತ್ತಾರೆ. ಈ ರೂಪಾಂತರವು ಕಾಳಜಿಯುತ ರೂಪಾಂತರ ಆಗಬಹುದು ಎಂದು ಕೂಡಾ ಸಂಶೋಧಕರು ಹೇಳಿದ್ದಾರೆ.

ಓಮಿಕ್ರಾನ್‌ ಆತಂಕ ಆರಂಭವಾದ ಆರಂಭದಲ್ಲಿ ಫ್ರಾನ್ಸ್‌ನಲ್ಲಿ ಓಮಿಕ್ರಾನ್‌ ಪ್ರಕರಣಗಳ ಏರಿಕೆಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಫ್ರಾನ್ಸ್‌ ಬ್ರಿಟನ್‌ನಿಂದ ಹಾಗೂ ಬ್ರಿಟನ್‌ಗೆ ಪ್ರಯಾಣವನ್ನು ನಿರ್ಬಂಧ ಮಾಡಲಾಗಿತ್ತು. ಇನ್ನು ಯುಕೆಯಿಂದ ಫ್ರೆಂಚ್‌ ನಾಗರಿಕರು ಹಾಗೂ ಇಯು ರಾಷ್ಟ್ರದವರು ಬರಬಹುದು ಎಂದು ಕೂಡಾ ಸರ್ಕಾರ ಹೇಳಿತ್ತು. ಆದರೆ ಪ್ರಯಾಣಿಕರು ಪ್ರಯಾಣ ಮಾಡುವ 24 ಗಂಟೆಯೊಳಗೆ ಮಾಡಿದ ಕೋವಿಡ್‌ ಪರೀಕ್ಷಾ ವರದಿಯನ್ನು ಹೊಂದಿರಬೇಕಾಗಿತ್ತು. ಹಾಗೆಯೇ ಫ್ರಾನ್ಸ್‌ಗೆ ಬರುವವರು ಕ್ವಾರಂಟೈನ್‌ ಆಗುವುದು ಕಡ್ಡಾಯವಾಗಿತ್ತು.

ಐಸೊಲೇಷನ್‌ ನಿಯಮ ಬದಲಾವಣೆ

ವಿಶ್ವದಲ್ಲಿ ಓಮಿಕ್ರಾನ್ ಪ್ರಕರಣಗಳು ಏರಿಕೆ ಆಗುತ್ತಿರುವ ಹಿನ್ನೆಲೆಯಿಂದಾಗಿ ಫ್ರಾನ್ಸ್‌ನಲ್ಲಿ ನಿರ್ಬಂಧವನ್ನು ಇನ್ನಷ್ಟು ಬಿಗಿ ಮಾಡಲಾಗಿದೆ. ಐಸೊಲೇಷನ್‌ ನಿಯಮವನ್ನು ಕೂಡಾ ಬದಲಾವಣೆ ಮಾಡಲಾಗಿದೆ. ಸದ್ಯ ಸಂಪೂರ್ಣವಾಗಿ ಕೋವಿಡ್‌ ಲಸಿಕೆಯನ್ನು ಪಡೆದ ಜನರು ಏಳು ದಿನಗಳ ಕಾಲ ಮಾತ್ರ ಐಸೊಲೇಷನ್‌ಗೆ ಒಳಗಾಗಬೇಕಾಗಿದೆ. ಆ ಬಳಿಕ ಕೆಲವು ದಿನಗಳ ಕ್ವಾರಂಟೈನ್‌ ಬಳಿಕ ನೆಗೆಟಿವ್‌ ಬಂದರೆ ಕ್ವಾರಂಟೈನ್‌ ಮುಕ್ತವಾಗಬಹುದು.

ಇನ್ನು ಕೋವಿಡ್‌ ಲಸಿಕೆಯನ್ನು ಪಡೆಯದ ಅಥವಾ ಸಂಪೂರ್ಣ ಕೋವಿಡ್‌ ಲಸಿಕೆಯನ್ನು ಪಡೆಯದವರು ಹತ್ತು ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕು. ಬಳಿಕ ನೆಗಟಿವ್‌ ವರದಿ ತೋರಿಸಿ ಕ್ವಾರಂಟೈನ್‌ ಮುಕ್ತವಾಗಬಹುದು. ಇನ್ನು ಸಂಪೂರ್ಣವಾಗಿ ಕೋವಿಡ್‌ ಲಸಿಕೆಯನ್ನು ಪಡೆದವರು ಕ್ವಾರಂಟೈನ್‌ಗೆ ಒಳಗಾಗಬೇಕಾಗಿಲ್ಲ. ಆದರೆ ಎರಡು ದಿನಕ್ಕೊಮ್ಮೆ ಕೋವಿಡ್‌ ನೆಗೆಟಿವ್‌ ವರದಿ ತೋರಿಸಬೇಕಾಗಿದೆ. (ಒನ್‌ಇಂಡಿಯಾ ಸುದ್ದಿ)

Recommended Video

ನನ್ನ ಕೊಲೆ ಮಾಡಿಸೋಕೆ ಸಂಚು - ರೆಹಮ್ ಖಾನ್ | Oneindia Kannada

English summary
Amid Omicron Threat New highly mutated COVID-19 variant more infectious than Omicron detected in France
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X