ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಕೊನೆಯ ವಾರ್ನಿಂಗ್, ಡಾರ್ಕ್ ಗ್ರೇ ಲಿಸ್ಟ್ ಶಿಕ್ಷೆ!

|
Google Oneindia Kannada News

ಪ್ಯಾರಿಸ್, ಅಕ್ಟೋಬರ್ 15: ಪಾಕಿಸ್ತಾನವನ್ನು 'ಡಾರ್ಕ್ ಗ್ರೆ' ಲಿಸ್ಟಿನಲ್ಲಿಡುವ ಮೂಲಕ ಅದಕ್ಕೆ ಕೊನೆಯ ಎಚ್ಚರಿಕೆ ನೀಡಲು Financial Action Task Force ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಸುಳ್ಳನ್ನು ಬಯಲು ಮಾಡಿದ ಭಾರತಪಾಕಿಸ್ತಾನದ ಸುಳ್ಳನ್ನು ಬಯಲು ಮಾಡಿದ ಭಾರತ

Recommended Video

ಪಾಕಿಸ್ತಾನಕ್ಕೆ ತಿರುಗೇಟು ಕೊಡಲು ಭಾರತ ರೆಡಿ | Oneindia Kannada

ಉಗ್ರ ಚಟುವಟಿಕೆಗೆಂದು ಅಕ್ರಮವಾಗಿ ಸಾಗಣೆಯಾಗುತ್ತಿರುವ ಹಣವನ್ನು ನಿಯಂತ್ರಿಸುವ FATF ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿ ವಿಫಲವಾದ ಪಾಕಿಸ್ತಾನವನ್ನು ಗ್ರೇಪಟ್ಟಿಗೆ ಸೇರಿಸುವ ಮೂಲಕ ಅದಕ್ಕೆ ವಿಶ್ವದ ನಾನಾ ದೇಶಗಳಿಂದ ಹಣಕಾಸಿನ ಸಹಾಯ ಮತ್ತಿತರ ನೆರವು ಸಿಗದಂತೆ ಮಾಡುವ ಉದ್ದೇಶ ಹೊಂದಿತ್ತು.

ಕಪ್ಪುಪಟ್ಟಿಗೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಅಮೆರಿಕದಿಂದ ಭಾರೀ ಆಘಾತ!ಕಪ್ಪುಪಟ್ಟಿಗೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಅಮೆರಿಕದಿಂದ ಭಾರೀ ಆಘಾತ!

ಆದರೆ ಚೀನಾ, ಟರ್ಕಿ ಮತ್ತು ಮಲೇಶಿಯಾಗಳ ಸಹಾಯದಿಂದ ಕಪ್ಪುಪಟ್ಟಿಗೆ ಸೇರುವ ಸಂದರ್ಭದಿಂದ ಪಾಕಿಸ್ತಾನ ಪಾರಾದರೂ, ಅದು ಡಾರ್ಕ್ ಗ್ರೇ ಲಿಸ್ಟಿಗೆ ಸೇರಲಿದೆ. ಇದು ಕಪ್ಪು ಪಟ್ಟಿಗೆ ಸೇರುವುದಕ್ಕೂ ಮುನ್ನ ಪಾಕಿಸ್ತಾನಕ್ಕೆ ನೀಡಲಾದ ಕೊನೆಯ ಎಚ್ಚರಿಕೆಯಾಗಿದೆ.

Last Warning To Pakistan, It Will be In Dark Grey List

Financial Action Task Force (ಫಾಫ್ಟ್) ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬ ಹಲವು ದೇಶಗಳ ಬೇಡಿಕೆಗೆ ಬೆಲೆ ನೀಡದೆ ಚೀನಾ, ಮಲೇಶಿಯಾ ಮತ್ತು ಟರ್ಕಿ ದೇಶಗಳು ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರುವುದನ್ನು ತಡೆದಿವೆ. Financial Action Task Force ನ ನೇತೃತ್ವವನ್ನು ಸದ್ಯಕ್ಕೆ ಚೀನಾವೇ ವಹಿಸಿರುವುದೇ ಪಾಕಿಸ್ತಾನಕ್ಕೆ ಉಪಯೋಗವಾಗಿದೆ.

ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಭಾಷಣ: ಹರ್ಭಜನ್, ವೀಣಾ ಮಲಿಕ್ ನಡುವೆ ರಂಪ ರಾಮಾಯಣವಿಶ್ವಸಂಸ್ಥೆಯಲ್ಲಿ ಇಮ್ರಾನ್ ಭಾಷಣ: ಹರ್ಭಜನ್, ವೀಣಾ ಮಲಿಕ್ ನಡುವೆ ರಂಪ ರಾಮಾಯಣ

ಆದರೆ ಪಾಕಿಸ್ತಾನ ಕಪ್ಪು ಪಟ್ಟಿಗೆ ಸೇರುವುದರಿಂದ ಪಾರಾದರೂ, ಅದಕ್ಕೆ ಅಮೆರಿಕದ ಕಡೆಯಿಂದ ಸಿಗಬೇಕಿದ್ದ 10 ಬಿಲಿಯನ್ ಅಮೆರಿಕ ಡಾಲರ್ ಧನ ಸಹಾಯ ಇನ್ನು ಮುಂದೆ ಸಿಗುವದಿಲ್ಲ. ಗ್ರೇ ಪಟ್ಟಿಯಿಂದ ಆಚೆಬರುವುದಕ್ಕೆ ಪಾಕಿಸ್ತಾನಕ್ಕೆ 36 ಫ್ಯಾಫ್ಟ್ ಸದಸ್ಯರಲ್ಲಿ ಕನಿಷ್ಠ 15 ಸದಸ್ಯರ ಮತವಾದರೂ ಬೇಕು.

ನವಾಜ್ ಷರೀಫ್ ಮೇಲೆ ಮತ್ತೊಂದು ಆರೋಪ; ಜೈಲಿನಿಂದ NAB ವಶಕ್ಕೆನವಾಜ್ ಷರೀಫ್ ಮೇಲೆ ಮತ್ತೊಂದು ಆರೋಪ; ಜೈಲಿನಿಂದ NAB ವಶಕ್ಕೆ

ಭಯೋತ್ಪಾದನೆಯ ನಿರ್ಮೂಲನೆಗೆ ವಿಶ್ವಸಂಸ್ಥೆ ಪಾಕಿಸ್ತಾನಕ್ಕೆ ಹಾಕಿರುವ ತಾಕೀತುಗಳನ್ನು ಪಾಲಿಸದೆ ಇದ್ದಲ್ಲಿ ಮತ್ತು ಜಾಗತಿಕ ಉಗ್ರರಿಗೆ ಶಿಕ್ಷೆ ನೀಡದೆ, ಭಯೋತ್ಪಾದನೆಗೆ ಬೆಂಬಲ ನೀಡಿದಲ್ಲಿ ಪಾಕಿಸ್ತಾನ ಡಾರ್ಕ್ ಗ್ರೇ ಲಿಸ್ಟ್ ನಲ್ಲೇ ಉಳಿಯಲಿದೆ. ಅದು ಮತ್ತೆ ಸುಧಾರಣೆ ಕಾಣದೆ ಇದ್ದಲ್ಲಿ ಕಪ್ಪುಪಟ್ಟಿಗೆ ಸೇರಲಿದ್ದು, ಜಗತ್ತಿನ ಯಾವ ರಾಷ್ಟ್ರಗಳೂ ಅದಕ್ಕೆ ಹಣಕಾಸಿನ, ಅಥವಾ ಇನ್ಯಾವುದೇ ನೆರವು ನೀಡಲಾರವು.

English summary
Last Warning To Pakistan, It Will be In Dark Grey List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X