ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂವಹನ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು, GSAT-31 ಯಶಸ್ವೀ ಉಡಾವಣೆ

|
Google Oneindia Kannada News

ಪ್ಯಾರಿಸ್, ಫೆಬ್ರವರಿ 06: ಸಂವಹನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಬಲ್ಲ ಜಿಸ್ಯಾಟ್ -31 ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯು ಬುಧವಾರ ಬೆಳಿಗ್ಗೆ ಉಡಾವಣೆ ಮಾಡಿತು.

ಫ್ರಾನ್ಸ್ ನ ಜಿಯಾನಾದ ಕೌರೌ ನಲ್ಲಿರುವ ಏರಿಯನ್ ಲಾಂಚ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ ಬೆಳಗ್ಗಿನ ಜಾವ 02.31 ರ ಸಮಯಕ್ಕೆ ಉಡಾವಣೆ ಮಾಡಲಾಗಿದ್ದು, 2019 ರಲ್ಲಿ ಇಸ್ರೋ ಉಡಾವಣೆ ಮಾಡಿದ ಮೂರನೇ ಉಪಗ್ರಹ ಇದಾಗಿದೆ.

ಇಸ್ರೋದ ಕಲಾಂ ಸ್ಯಾಟ್ -V2 ವಿಶೇಷತೆ: ಚಿತ್ರ ವಿವರಇಸ್ರೋದ ಕಲಾಂ ಸ್ಯಾಟ್ -V2 ವಿಶೇಷತೆ: ಚಿತ್ರ ವಿವರ

ISROs Latest Communication Satellite GSAT-31 launched successfully

15 ವರ್ಷಗಳ ಆಯುಷ್ಯ ಹೊಂದಿರುವ ಜಿಸ್ಯಾಟ್ 31 ಉಪಗ್ರಹವು ವಿಸ್ಯಾಟ್ ನೆಟ್ ವರ್ಕ್, ಟಿವಿ, ಡಿಜಿಟಲ್ ಸೆಟಲೈಟ್ ನ್ಯೂಸ್ ಗ್ಯಾದರಿಂಗ್, ಡಿಟಿಎಚ್ ಸೇವೆಗಳಲ್ಲಿ ನೆರವಾಗಲಿದೆ.

ದ್ವೀಪ ಪ್ರದೇಶಗಳು, ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ, ಹಿಂದು ಮಹಾಸಾಗರಗಳಲ್ಲೂ ಸಂವಹನಕ್ಕೆ ನೆರವು ನೀಡಲಿದೆ.

ದೇಶದ ಮೂಲೆ ಮೂಲೆಗೂ ಇಂಟರ್ನೆಟ್... ಇದು ಜಿಸ್ಯಾಟ್-11 ಕ್ರಾಂತಿ!ದೇಶದ ಮೂಲೆ ಮೂಲೆಗೂ ಇಂಟರ್ನೆಟ್... ಇದು ಜಿಸ್ಯಾಟ್-11 ಕ್ರಾಂತಿ!

ಇತ್ತೀಚೆಗಷ್ಟೇ ಭಾರತೀಯ ವಿದ್ಯಾರ್ಥಿಗಳಿಂದ ನಿರ್ಮಿಸಲ್ಪಟ್ಟ ಕಲಾಂಸ್ಯಾಟ್ ವಿ 2 ಉಪಗ್ರಹವನ್ನು ಉಡ್ಡಯನ ಮಾಡಲಾಗಿತ್ತು. ಕೇವಲ 12 ಲಕ್ಷ ರೂ ವೆಚ್ಚದಲ್ಲಿ, ಆರೇ ದಿನಗಳಲ್ಲಿ ನಿರ್ಮಿಸಲಾದ ಈ ಉಪಗ್ರಹ ಕೇವಲ 1.26 ಕೆ ಜಿ ತೂಕವಿದ್ದು, ಅತ್ಯಂತ ಹಗುರ ಉಪಗ್ರಹ ಎಂಬ ಖ್ಯಾತಿಗೆ ಪಾತ್ರವಾಗಿದೆ.

English summary
India's latest communication satellite GSAT-31 was successfully launched by European launch services provider- Arianespace rocket from French Guiana in the early hours of Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X