ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಸೇನೆಗೆ ಐತಿಹಾಸಿಕ ದಿನ: ಇಂದು ಭಾರತೀಯ ಸೇನೆ ಸೇರಲಿರುವ ರಫೇಲ್

|
Google Oneindia Kannada News

Recommended Video

India Welcomes Rafale RB - 01 : ವಾಯುಸೇನೆಗೆ ಐತಿಹಾಸಿಕ ದಿನ | Oneindia Kannada

ನವದೆಹಲಿ, ಅಕ್ಟೋಬರ್ 08: ಭಾರತದ ಎರಡು ದಶಕಗಳ ಕನಸು ನನಸಾಗುವುದಕ್ಕೆ ಇಂದು ಮುಹೂರ್ತ ಕೂಡಿಬಂದಿದೆ. ವಿವಾದದ ಕೇಂದ್ರಬಿಂದುವಾಗಿದ್ದ ರಫೇಲ್ ಫೈಟರ್ ಜೆಟ್ ಇಂದು ಅಧಿಕೃತವಾಗಿ ಭಾರತೀಯ ಸೇನೆ ಸೇರಲಿದ್ದು, ವಾಯುಸೇನೆ ನೂರಾನೆ ಬಲ ನೀಡಲಿದೆ. ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಗೆ ತೆರಳಿದ್ದು, ಅದ್ಧೂರಿ ಕಾರ್ಯಕ್ರಮದಲ್ಲಿ ಯುದ್ಧ ವಿಮಾನಗಳನ್ನು ಸ್ವೀಕರಿಸಲಿದ್ದಾರೆ.

ದಸರಾ ಮತ್ತು 87ನೇ ವಾಯುಸೇನಾ ದಿನ(ಅಕ್ಟೋಬರ್ 8)ದ ಸುಸಂದರ್ಭದಲ್ಲಿ ರಫೇಲ್ ಅನ್ನು ಭಾರತ ಸ್ವೀಕರಿಸುತ್ತಿದೆ.

RB-01 ಎಂಬ ಹೆಸರಿನ ರಫೇಲ್ ಯುದ್ಧ ವಿಮಾನ ಭಾರತ ಫ್ರಾನ್ಸ್ ನಿಂದ ಖರೀದಿ ಮಾಡುತ್ತಿರುವ 36 ಯುದ್ಧ ವಿಮಾನಗಳಲ್ಲಿ ಮೊದಲನೆಯದಾಗಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಈ ಯುದ್ಧ ವಿಮಾನ ಎದುರಾಳಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಸೋಲಿಸಲು ಅತ್ಯಂತ ಸಮರ್ಪಕವಾಗಿದೆ ಎಂಬುದು ಸೇನಾ ಮುಖ್ಯಸ್ಥರ ಮಾತು.

ಮಂಗಳವಾರ ಮೊದಲ ರಫೇಲ್ ವಿಮಾನ ಭಾರತಕ್ಕೆ: ವಿಶೇಷತೆಗಳೇನು?ಮಂಗಳವಾರ ಮೊದಲ ರಫೇಲ್ ವಿಮಾನ ಭಾರತಕ್ಕೆ: ವಿಶೇಷತೆಗಳೇನು?

RB-01 ಎಂದರೆ ಏರ್ ಮಾರ್ಶಲ್ ಆರ್ ಕೆ ಎಸ್ ಬಾದುರಿಯಾ ಅವರ ಹೆಸರಿನ ಇನಿಶಿಯಲ್ ಆಗಿದ್ದು, ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಒಪ್ಪಂದದಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದರು.

Indian Airforce To Receive Its First Rafale Fighter Jet Today

ರಫೇಲ್ ಜೆಟ್ ಎದುರಾಳಿ ಸೇನೆಯ ಬಳಿಗೆ ತೆರಳದೆ ದೋರದಿಂದಲೇ ಖರಾರುವಾಕ್ ದಾಳಿ ನಡೆಸಬಲ್ಲ ಸಂಬಂಧ ಹೊಂದಿದೆ.

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳುರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

36 ರಾಫೆಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದಕ್ಕೆ ಸೆಪ್ಟೆಂಬರ್ 23, 2016ರಂದು ಶುಕ್ರವಾರ ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದ್ದರು. ಸುಮಾರು 7.8 ಬಿಲಿಯನ್ ಯುರೋ (ಸುಮಾರು 780 ಕೋಟಿ) ವ್ಯವಹಾರಿಕ ಮೊತ್ತ ಇದಾಗಿದೆ. ಅಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ಅವರು ದೆಹಲಿಯಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದರು.

ರಫೇಲ್ ಉತ್ಪಾದನಾ ನೆಲೆಗೆ ನುಗ್ಗಲು ಅಪರಿಚಿತರ ಪ್ರಯತ್ನರಫೇಲ್ ಉತ್ಪಾದನಾ ನೆಲೆಗೆ ನುಗ್ಗಲು ಅಪರಿಚಿತರ ಪ್ರಯತ್ನ

ಈ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಹಗರಣ ನಡೆದೆ ಎಂಬ ದೂರು ಎನ್ ಡಿಎ 1 ಸರ್ಕಾರದ ವಿರುದ್ಧ ಕೇಳಿಬಂದಿತ್ತು. ಕಳೆದ ಲೋಕಸಭೆ ಚುನಾವಣೆಯ ಸಮಯದಲ್ಲೂ ವಿಪಕ್ಷಗಳು ಇದನ್ನೇ ಪ್ರಚಾರದ ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿದ್ದರು.

English summary
Indian Airforce on Airforce Day and on Auspicious Dasara will receive its first Rafale Fighter jet. Defence minister Rajnath Singh Reached Paris, France to receive the jets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X