ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕ್ ವಿಷಯ ನಾವೇ ಬಗೆಹರಿಸಿಕೊಳ್ಳುತ್ತೇವೆ: ಮೋದಿ

|
Google Oneindia Kannada News

ಪ್ಯಾರಿಸ್, ಆಗಸ್ಟ್ 26: ಭಾರತ-ಪಾಕಿಸ್ತಾನದ ವಿಷಯ ದ್ವಿಪಕ್ಷೀಯವಾಗಿದ್ದು, ನಾವುಗಳೇ ಅದನ್ನು ಬಗೆಹರಿಸಿಕೊಳ್ಳುತ್ತೇವೆ, ಈ ವಿಷಯದಲ್ಲಿ ಮೂರನೇ ರಾಷ್ಟ್ರಕ್ಕೆ ನಾವು ತೊಂದರೆ ಕೊಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದರು.

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಮೇಲಿನಂತೆ ಹೇಳಿದರು. ಆ ಮೂಲಕ ಕಾಶ್ಮೀರ ವಿಷಯದಲ್ಲಿ ಅಮೆರಿಕ ಸೇರಿದಂತೆ ಇನ್ನಾವ ದೇಶಗಳೂ ಮಧ್ಯಪ್ರವೇಶಿಸುವುದು ಬೇಡ ಎಂದು ಸ್ಪಷ್ಟಪಡಿಸಿದರು.

ಫ್ರಾನ್ಸ್ ನಲ್ಲಿ ಕಾಶ್ಮೀರದ ಬಗ್ಗೆ ಕೇಳಿದ ಟ್ರಂಪ್ ಗೆ ಮೋದಿ ಕೊಟ್ಟ ಉತ್ತರ... ಫ್ರಾನ್ಸ್ ನಲ್ಲಿ ಕಾಶ್ಮೀರದ ಬಗ್ಗೆ ಕೇಳಿದ ಟ್ರಂಪ್ ಗೆ ಮೋದಿ ಕೊಟ್ಟ ಉತ್ತರ...

'1947 ಕ್ಕೆ ಮೊದಲು ಭಾರತ ಮತ್ತು ಪಾಕಿಸ್ತಾನಗಳು ಒಂದೇ ಆಗಿದ್ದವು ನಮ್ಮ ನಡುವಿನ ಬಿಕ್ಕಟ್ಟನ್ನು ನಾವುಗಳೇ ಬಗೆಹರಿಸಿಕೊಳ್ಳಬಲ್ಲೆವು' ಎಂದು ಮೋದಿ ಅವರು ಟ್ರಂಪ್ ಮುಂದೆ ಹೇಳಿದರು.

India-Pakistan Jammu and Kashmir Donald Trumph Narendra Modi

ಆರ್ಟಿಕಲ್ 370 ಅನ್ನು ರದ್ದು ಮಾಡಿದ ಬಳಿಕ, ಟ್ರಂಪ್ ಅವರು, ಪಾಕಿಸ್ತಾನ-ಭಾರತದ ಮಧ್ಯೆ ಮಾತುಕತೆ ನಡೆಸುವುದಾಗಿ ಹೇಳಿದ್ದರು. ಇದು ವಿವಾದ ಹುಟ್ಟುಹಾಕಿತ್ತು.

ಇಂದಿನ ಸಭೆಯಲ್ಲಿ ಮಾತನಾಡಿದ ಟ್ರಂಪ್, 'ನಿನ್ನೆ ರಾತ್ರಿ ನಾವು ಕಾಶ್ಮೀರ ವಿಷಯದ ಬಗ್ಗೆ ಮಾತನಾಡಿದ್ದೇವೆ, ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಂಡಿರುವ ಬಗ್ಗೆ ಮೋದಿ ಅವರಿಗೆ ವಿಶ್ವಾಸವಿದೆ' ಎಂದು ಟ್ರಂಪ್ ಹೇಳಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ: ಮತ್ತೆ ಮೂಗು ತೂರಿಸಿದ ಟ್ರಂಪ್ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ: ಮತ್ತೆ ಮೂಗು ತೂರಿಸಿದ ಟ್ರಂಪ್

ಮುಂದುವರೆದು ಮಾತನಾಡಿದ ಅವರು, 'ಅಮೆರಿಕವು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಜೊತೆ ಉತ್ತಮ ಬಾಂದವ್ಯ ಹೊಂದಿದ್ದು, ಈ ಎರಡೂ ದೇಶಗಳು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುತ್ತವೆ ಎಂಬ ವಿಶ್ವಾಸವಿದೆ' ಎಂದು ಹೇಳಿದರು.

ಇದರ ಹೊರತಾಗಿ ವ್ಯಾಪಾರ ಸಂಬಂಧಗಳ ಬಗ್ಗೆ ಮಾತುಕತೆ ನಡೆಸಿದ ಇಬ್ಬರೂ ನಾಯಕರು, ಎರಡೂ ದೇಶಗಳ ನಡುವೆ ವ್ಯವಾಹರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಧನಾತ್ಮಕ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಸಭೆಯ ಬಳಿಕ ಮಾತನಾಡಿದ ಟ್ರಂಪ್, 'ವ್ಯಾಪಾರದ ಬಗ್ಗೆ, ಮಿಲಿಟರಿ ಬಗ್ಗೆ, ಭದ್ರತೆ ಬಗ್ಗೆ ಮಾತನಾಡಿದೆವು, ನಿನ್ನೆ ರಾತ್ರಿ ನಾವಿಬ್ಬರೂ ಒಟ್ಟಿಗೆ ಊಟದ ಸಮಯ ಭೇಟಿ ಮಾಡಿದ್ದೆವು, ಈ ಸಮಯದಲ್ಲಿ ಭಾರತದ ಬಗ್ಗೆ ನಾನು ಇನ್ನಷ್ಟು ಹೆಚ್ಚು ತಿಳಿದುಕೊಂಡೆ' ಎಂದರು.

English summary
Prime minister Narendra Modi said Donald Trumph in G7 summit, that India-Pakistan will solve Kashmir issue no third nation need to intervene in the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X