• search
  • Live TV
ಪ್ಯಾರಿಸ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರವಾದಿ ಮಹಮ್ಮದ್ ಕಾರ್ಟೂನ್ ತೋರಿಸಿದ ಶಿಕ್ಷಕನ ಶಿರಚ್ಛೇದ

|
Google Oneindia Kannada News

ಪ್ಯಾರಿಸ್, ಅಕ್ಟೋಬರ್ 17: ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನ ಉಪನಗರದಲ್ಲಿ ಶುಕ್ರವಾರ ಮಧ್ಯಾಹ್ನ ಹೈಸ್ಕೂಲ್ ಶಿಕ್ಷಕರೊಬ್ಬರ ತಲೆ ಕತ್ತರಿಸಲಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವಾದಿ ಮಹಮ್ಮದ್‌ ಅವರ ಕ್ಯಾರಿಕೇಚರ್‌ಗಳನ್ನು ತೋರಿಸಿದ ಕಾರಣಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ.

ಪ್ಯಾರಿಸ್‌ನ ವಾಯವ್ಯ ಭಾಗದ ಕಾನ್‌ಫ್ಲಾಸ್ ಸೈಂಟ್-ಹೊನೊರೈನ್ ಪ್ರದೇಶದ ಶಾಲೆಯ ಸಮೀಪ ಸಂಜೆ 5 ಗಂಟೆಗೆ ಈ ದಾಳಿ ನಡೆದಿದೆ. ಕೃತ್ಯ ಎಸಗಿದ ಶಂಕಿತನ ಮೇಲೆ ಪೊಲೀಸರು ಗುಂಡು ಹಾರಿದ್ದು, ಆತ ಮೃತಪಟ್ಟಿದ್ದಾನೆ.

ಉಗ್ರರ ವಿರುದ್ಧ ಕಾದಾಡಿದ್ದ ಶೌರ್ಯ ಚಕ್ರ ಪ್ರಶಸ್ತಿ ವಿಜೇತ ಬಲ್ವಿಂದರ್ ಸಿಂಗ್ ಹತ್ಯೆಉಗ್ರರ ವಿರುದ್ಧ ಕಾದಾಡಿದ್ದ ಶೌರ್ಯ ಚಕ್ರ ಪ್ರಶಸ್ತಿ ವಿಜೇತ ಬಲ್ವಿಂದರ್ ಸಿಂಗ್ ಹತ್ಯೆ

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಈ ಘಟನೆಯನ್ನು ಇಸ್ಲಾಂ ಭಯೋತ್ಪಾದನಾ ದಾಳಿ ಎಂದು ಕರೆದಿದ್ದಾರೆ. ದಾಳಿ ನಡೆಸಿದ ಆರೋಪಿಯನ್ನು ಬಂಧಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ತೀವ್ರ ಗಾಯಗೊಂಡ ಆತ ಮೃತಪಟ್ಟಿದ್ದಾನೆ ಎಂದಿರುವ ಪೊಲೀಸರು, ಆತನ ಗುರುತು ಬಹಿರಂಗಪಡಿಸಿಲ್ಲ. ಪೊಲೀಸರು ಆತನನ್ನು ಹಿಡಿಯುವ ಪ್ರಯತ್ನ ನಡೆಸಿದಾಗ 'ಅಲ್ಲಾಹು ಅಕ್ಬರ್' ಎಂಬುದಾಗಿ ಕೂಗಿದ್ದ ಎಂದು ತಿಳಿಸಿದ್ದಾರೆ.

ಹೈಸ್ಕೂಲಿನಲ್ಲಿ ಭೂಗೋಳ ಮತ್ತು ಇತಿಹಾಸ ಶಿಕ್ಷಕರಾಗಿದ್ದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಾದ ಪಾಠದ ಭಾಗವಾಗಿ ವಿವರಿಸುವಾಗ ಪ್ರವಾದಿ ಮಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಿದ್ದರು. ಇದರ ವಿರುದ್ಧ ಅಲ್ಲಿನ ಪೋಷಕರು ದೂರು ನೀಡಿದ್ದರು. ಈ ಕಾರ್ಟೂನ್‌ಗಳನ್ನು ಪ್ರದರ್ಶಿಸುವ ಮುನ್ನ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ತರಗತಿಯಿಂದ ಹೊರಹೋಗುವಂತೆ ಹೇಳಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿತ್ತು.

ಉತ್ತರ ಪ್ರದೇಶ: ಗುಂಡು ಹಾರಿಸಿ ಬಿಜೆಪಿ ಮುಖಂಡನ ಹತ್ಯೆಉತ್ತರ ಪ್ರದೇಶ: ಗುಂಡು ಹಾರಿಸಿ ಬಿಜೆಪಿ ಮುಖಂಡನ ಹತ್ಯೆ

'ನಾನು ನಿಮ್ಮ ಭಾವನೆಗಳಿಗೆ ನೋವುಂಟು ಮಾಡಲು ಬಯಸುವುದಿಲ್ಲ. ಹೀಗಾಗಿ ನೀವು ಹೊರಗೆ ಹೋಗಬಹುದು' ಎಂದು ಮುಸ್ಲಿಂ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ವ್ಯಕ್ತಿಯೊಬ್ಬ ಅವರ ತಲೆ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
A French teacher was beheaded outside his school for allegedly showing cartoons of Prophet Mohammed to students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X