• search
  • Live TV
ಪ್ಯಾರಿಸ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ರಫೇಲ್' ಖ್ಯಾತಿಯ ಬಿಲಿಯನೇರ್ ಒಲಿವರ್ ಡಸಾಲ್ಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ

|

ಪ್ಯಾರಿಸ್, ಮಾರ್ಚ್ 8: ಭಾರತಕ್ಕೆ ರಫೇಲ್ ವಿಮಾನಗಳನ್ನು ಪೂರೈಸುವ ಫ್ರೆಂಚಿನ ಡಸಾಲ್ಟ್ ವಿಮಾನ ತಯಾರಿಕಾ ಕಂಪೆನಿ ಕುಟುಂಬದ ಬಿಲಿಯನೇರ್, ರಾಜಕಾರಣಿ ಒಲಿವರ್ ಡಸಾಲ್ಟ್ ಅವರು ಭಾನುವಾರ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದಾರೆ.

ಉತ್ತರ ಫ್ರಾನ್ಸ್‌ನ ನಾರ್ಮಂಡಿ ಪ್ರದೇಶದಲ್ಲಿ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಒಲಿವರ್ ಡಸಾಲ್ಟ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಡಸಾಲ್ಟ್ ನಿಧನಕ್ಕೆ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮಕ್ರಾನ್ ಸಂತಾಪ ಸೂಚಿಸಿದ್ದಾರೆ.

'ಒಲಿವರ್ ಡಸಾಲ್ಟ್ ಫ್ರಾನ್ಸ್ ಅನ್ನು ಪ್ರೀತಿಸುತ್ತಿದ್ದರು. ಕೈಗಾರಿಕೆಯ ನಾಯಕ, ಸ್ಥಳೀಯ ಸಂಸದ, ವಾಯುಪಡೆಯ ಮೀಸಲು ಕಮಾಂಡರ್; ಅವರು ತಮ್ಮ ಜೀವನದುದ್ದಕ್ಕೂ ನಮ್ಮ ದೇಶಕ್ಕೆ ಸೇವೆ ಸಲ್ಲಿಸುವುದನ್ನು ನಿಲ್ಲಿಸಲಿಲ್ಲ' ಎಂದು ಮಕ್ರಾನ್ ಟ್ವೀಟ್ ಮಾಡಿದ್ದಾರೆ.

ಡಸಾಲ್ಟ್ ಸಮೂಹದ ಅಂಗಸಂಸ್ಥೆಯಾಗಿರುವ ಡಸಾಲ್ಟ್ ಏವಿಯೇಷನ್, ಫ್ರಾನ್ಸ್‌ನ ವಿಮಾನ ತಯಾರಕಾ ಕಂಪೆನಿಯಾಗಿದ್ದು, ಉದ್ಯಮ ಮತ್ತು ಮಿಲಿಟರಿ ಜೆಟ್‌ಗಳನ್ನು ಅದು ತಯಾರಿಸುತ್ತಿದೆ. ಭಾರತವು ತನ್ನ 36 ರಫೇಲ್ ಯುದ್ಧ ವಿಮಾನಗಳನ್ನು ಸಹ ಇದರಿಂದಲೇ ಖರೀದಿಸುತ್ತಿದೆ.

English summary
French billionaire, politician, member of Rafale fame Dassualt family, Oliver Dassault died in a helicopter crash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X