ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಪಡೆದ ಪ್ರವಾಸಿಗರಿಗೆ ಮತ್ತೆ ಫ್ರಾನ್ಸ್‌ಗೆ ಸ್ವಾಗತ - ಭಾರತೀಯರಿಗೆ ನಿಷೇಧ ಮುಂದುವರಿಕೆ

|
Google Oneindia Kannada News

ಪ್ಯಾರಿಸ್, ಜೂ. 04: ಅತೀ ಹೆಚ್ಚು ಪಾರಂಪರಿಕ ತಾಣಗಳು ಹೊಂದಿರುವ, ವರ್ಷಕ್ಕೆ 8 ಕೊಟಿಗಿಂತಲೂ ಹೆಚ್ಚು ಪ್ರವಾಸಿಗಳನ್ನು ಸೆಳೆಯುವ ಫ್ರಾನ್ಸ್‌ ಈಗ ಮತ್ತೆ ತನ್ನ ನಾಡಿಗೆ ಪ್ರವಾಸಿಗರಿಗೆ ಆಹ್ವಾನ ನೀಡಿದೆ. ಕೊರೊನಾ ಕಾರಣದಿಂದಾಗಿ ಪ್ರವಾಸಿಗರಿಗೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆದಿರುವ ಫ್ರಾನ್ಸ್‌ ಕೆಲವೊಂದು ಷರತ್ತುಗಳ ಮೇರೆಗೆ ಪ್ರವಾಸಿಗರನ್ನು ಸ್ವಾಗತಿಸಲು ಮುಂದಾಗಿದೆ.

ಮುಖ್ಯವಾಗಿ ಕೊರೊನಾ ಲಸಿಕೆಯನ್ನು ಪಡೆದಿರುವ ಪ್ರವಾಸಿಗರಿಗೆ ಮಾತ್ರ ಆಗಮಿಸಲು ಅವಕಾಶ ನೀಡಿರುವ ಫ್ರಾನ್ಸ್‌ ಭಾರತ ಸೇರಿದಂತೆ ಕೆಲವು ದೇಶಗಳಿಗೆ ನಿಷೇಧವನ್ನು ಮುಂದುವರಿಸಿದೆ.

ಭಾರತಕ್ಕೆ ಆಕ್ಸಿಜನ್ ಸೇರಿ ವಿವಿಧ ವೈದ್ಯಕೀಯ ಉಪಕರಣ ಒದಗಿಸಲಿರುವ ಫ್ರಾನ್ಸ್‌ ಭಾರತಕ್ಕೆ ಆಕ್ಸಿಜನ್ ಸೇರಿ ವಿವಿಧ ವೈದ್ಯಕೀಯ ಉಪಕರಣ ಒದಗಿಸಲಿರುವ ಫ್ರಾನ್ಸ್‌

ಇನ್ನು ಲಸಿಕೆ ಪಡೆದ ಯುರೋಪಿಯನ್ನರು ಕೊರೊನಾ ಪರೀಕ್ಷೆ ಮಾಡಿಸಬೇಕಾಗಿಲ್ಲ ಎಂದು ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಉಳಿದಂತೆ ನೆಗೆಟಿವ್‌ ವರದಿ ಹೊಂದಿರುವ, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿಶ್ವದ ಇತರ ಭಾಗಗಳಿಂದ ಲಸಿಕೆ ಹಾಕಿದ ಪ್ರವಾಸಿಗರಿಗೆ ಫ್ರಾನ್ಸ್‌ಗೆ ಆಗಮಿಸಲು ಅವಕಾಶ ನೀಡಲಾಗಿದೆ.

France welcoming back vaccinated tourists; but ban continues for Indian visitors

ಫ್ರಾನ್ಸ್‌ನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ಈ ಹೊಸ ನಿಯಮ ಬುಧವಾರದಿಂದ ಪ್ರಾರಂಭವಾಗಲಿದೆ. ಆದಾಗ್ಯೂ, ಕೊರೊನಾ ಹೆಚ್ಚು ಇರುವ, ಆತಂಕಕಾರಿ ರೂಪಾಂತರಗಳು ಕಂಡು ಬಂದಿರುವ ದೇಶಗಳ ಪ್ರವಾಸಿಗರ ಆಗಮನಕ್ಕೆ ಫ್ರಾನ್ಸ್‌ ನಿಷೇಧ ಹೇರಿದೆ.

ಪಾಕಿಸ್ತಾನ ತೊರೆಯುವಂತೆ ತನ್ನ ಪ್ರಜೆಗಳಿಗೆ ಫ್ರಾನ್ಸ್ ಸೂಚನೆಪಾಕಿಸ್ತಾನ ತೊರೆಯುವಂತೆ ತನ್ನ ಪ್ರಜೆಗಳಿಗೆ ಫ್ರಾನ್ಸ್ ಸೂಚನೆ

ಸದ್ಯಕ್ಕೆ ಭಾರತ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ಸೇರಿದಂತೆ 16 ದೇಶಗಳು ಈ ನಿಷೇಧದ ಕೆಂಪು ಪಟ್ಟಿಯಲ್ಲಿದೆ. ಫ್ರೆಂಚ್ ಸರ್ಕಾರವು ಶುಕ್ರವಾರ ಬಿಡುಗಡೆ ಮಾಡಿದ ಹೊಸ ಪ್ರಯಾಣ ನಿಯಮದಲ್ಲಿ ಯುರೋಪಿನ ಹೊರ ಭಾಗದ ಕೆಲವು ರಾಷ್ಟ್ರಗಳನ್ನು ಕಿತ್ತಳೆ ಬಣ್ಣದ ಪಟ್ಟಿಗೆ ಸೇರಿಸಲಾಗಿದೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ಸೇರಿದಂತೆ "ಕಿತ್ತಳೆ" ಬಣ್ಣದಲ್ಲಿ ಉಲ್ಲೇಖಿಸಲಾಗಿರುವ ದೇಶಗಳಿಂದ ಲಸಿಕೆ ಪಡೆದು ಆಗಮಿಸುವ ಸಂದರ್ಶಕರ ಆಗಮನಕ್ಕೆ ಇನ್ನು ಮುಂದೆ ತಮ್ಮ ನಿರ್ಬಂಧವಿಲ್ಲ ಹಾಗೂ ಫ್ರಾನ್ಸ್ ಪ್ರವಾಸಕ್ಕೆ ಕಾರಣಗಳನ್ನು ಆ ಸಂದರ್ಶಕರು ನೀಡಬೇಕಾಗಿಲ್ಲ. ಆದರೆ ಈ ಸಂದರ್ಶಕರು 72 ಗಂಟೆಗಳ ಒಳಗಾಗಿ ಮಾಡಿಸಲಾದ ಕೊರೊನಾ ನೆಗೆಟಿವ್‌ ಪರೀಕ್ಷಾ ವರದಿಯನ್ನು ಅಥವಾ 48 ಗಂಟೆಗೂ ಮುನ್ನ ಮಾಡಿಸಲಾದ ಕೊರೊನಾ ನೆಗೆಟಿವ್‌ ವರದಿಯನ್ನು ಹೊಂದಿರಬೇಕಾಗಿದೆ.

France welcoming back vaccinated tourists; but ban continues for Indian visitors

ಇನ್ನು ಲಸಿಕೆ ಹಾಕಿರುವ ವಯಸ್ಕರೊಂದಿಗೆ ಲಸಿಕೆ ಪಡೆಯದ ಮಕ್ಕಳಿಗೆ ಆಗಮಿಸಲು ಅವಕಾಶ ನೀಡಲಾಗುತ್ತದೆ. ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಇಸ್ರೇಲ್, ಜಪಾನ್, ಲೆಬನಾನ್, ನ್ಯೂಜಿಲೆಂಡ್, ಸಿಂಗಾಪುರ ಹಾಗೂ ಯುರೋಪಿಯನ್ ಸಂದರ್ಶಕರನ್ನು ಹಸಿರು ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಹಸಿರು ಪಟ್ಟಿಯಲ್ಲಿರುವ ಒಟ್ಟು ಏಳು ದೇಶಗಳ ಸಂದರ್ಶಕರು ಲಸಿಕೆ ಹಾಕಿಸಿಕೊಂಡಿದ್ದರೆ, ಯಾವುದೇ ಕೊರೊನಾ ಪರೀಕ್ಷೆ ಮಾಡಿಸದೆಯೇ ಆಗಮಿಸಬಹುದಾಗಿದೆ.

(ಒನ್ಇಂಡಿಯಾ ಸುದ್ದಿ)

English summary
France welcoming back vaccinated tourists; but ban continues for Indian visitors,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X