ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರಮುಖ ಯಶಸ್ಸು': ಐಎಸ್‌ಐಎಸ್‌ ಮುಖ್ಯಸ್ಥನನ್ನು ಹೊಡೆದುರುಳಿಸಿದ ಫ್ರಾನ್ಸ್‌

|
Google Oneindia Kannada News

ಪ್ಯಾರಿಸ್‌, ಸೆಪ್ಟೆಂಬರ್‌ 16: ಗ್ರೇಟರ್‌ ಸಹರಾದಲ್ಲಿ ಐಎಸ್‌ಐಎಸ್‌ ಮುಖ್ಯಸ್ಥನನ್ನು ಹೊಡೆದುರುಳಿಸಲಾಗಿದೆ ಎಂದು ಫ್ರಾನ್ಸ್‌ ಪಡೆಯು ಹೇಳಿದೆ. ಐಎಸ್‌ಐಎಸ್‌ ಮುಖ್ಯಸ್ಥ ಯುಎಸ್‌ ಸೇನೆಯ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಹಾಗೂ ವಿದೇಶಿ ಸಹಾಯಕರ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದ. ಈಗ ಆತನನ್ನು ನಾವು ಹತ್ಯೆ ಮಾಡಿದ್ದೇವೆ ಎಂದು ಫ್ರಾನ್ಸ್‌ ಹೇಳಿದೆ.

ಈ ಬಗ್ಗೆ ಗುರುವಾರ ಟ್ವೀಟ್‌ ಮಾಡಿರುವ ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರಾನ್, "ಅದ್ನಾನ್ ಅಬು ವಾಲಿದ್ ಅಲ್-ಸಹ್ರಾವಿಯನ್ನು ಪ್ರೆಂಚ್‌ ಪಡೆಯು ತಟಸ್ಥಗೊಳಿಸಿದೆ," ಎಂದು ಹೇಳಿದ್ದಾರೆ.

 'ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತೆ ನಮ್ಮ ಹಿಡಿತದಲ್ಲಿದೆ, ತಾಲಿಬಾನ್‌ ಭಯ ಬೇಡ': ಸೇನೆ 'ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತೆ ನಮ್ಮ ಹಿಡಿತದಲ್ಲಿದೆ, ತಾಲಿಬಾನ್‌ ಭಯ ಬೇಡ': ಸೇನೆ

ಹಾಗೆಯೇ, "ಸಾಹೇಲ್‌ನಲ್ಲಿ ಭಯೋತ್ಪಾದಕ ಗುಂಪಿನ ವಿರುದ್ದದ ನಮ್ಮ ಹೋರಾಟದಲ್ಲಿ ಇದು ನಮ್ಮ ಇನ್ನೊಂದು ಪ್ರಮುಖ ಯಶಸ್ಸು," ಎಂದು ಹೇಳಿದ್ದಾರೆ. ಹಾಗೆಯೇ ಈ ಸಂದರ್ಭದಲ್ಲಿ ಯಾವ ಪ್ರದೇಶದಲ್ಲಿ ಈ ಹತ್ಯೆಯನ್ನು ಮಾಡಲಾಗಿದೆ ಎಂಭ ಮಾಹಿತಿಯನ್ನು ಹಾಗೂ ಈ ಕಾರ್ಯಾಚರಣೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರಾನ್ ನೀಡಿಲ್ಲ.

France Troops Kill ISIS Head Adnan Abu Walid al-Sahrawi In Greater Sahara

2020 ರಲ್ಲಿ ಫ್ರೆಂಚ್ ಸಹಾಯಕರು ಹತ್ಯೆ ಮಾಡಿದ ಪ್ರಕರಣದಲ್ಲಿ ಜಿಹಾದಿ ನಾಯಕರ ಕೈವಾಡವಿತ್ತು. ಹಾಗೆಯೇ 2017 ರಲ್ಲಿ ನೈಜರ್‌ನಲ್ಲಿ ಯುಎಸ್ ಪಡೆಗಳ ಮೇಲೆ ನಡೆದ ದಾಳಿಯಲ್ಲಿ ಐಎಸ್‌ಐಎಸ್‌ ಮುಖ್ಯಸ್ಥ ಅದ್ನಾನ್ ಅಬು ವಾಲಿದ್ ಅಲ್-ಸಹ್ರಾವಿ ಯುನೈಟೆಡ್‌ ಸ್ಟೇಟ್ಸ್‌ನ ವಾಂಟೆಡ್‌ ವ್ಯಕ್ತಿ ಆಗಿದ್ದನು ಎಂದು ಮಾಧ್ಯಮಗಳು ವರದಿ ಮಾಡಿದೆ.

ಮಾಲಿ, ನೈಜರ್‌ ಹಾಗೂ ಬುರ್ಕಿನಾ ಫಾಸೊ ಪ್ರದೇಶದಲ್ಲಿ ನಡೆದ ಹಲವಾರು ದಾಳಿಗಳನ್ನು ಗ್ರೇಟರ್‌ ಸಹಾರಾದ ಐಎಸ್‌ಐಎಸ್‌ ಭಯೋತ್ಪಾದಕರು ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ. "ಟ್ರೈ-ಬಾರ್ಡರ್" ಪ್ರದೇಶದ ಒಂದು ಸ್ಥಳವನ್ನು ಐಎಸ್‌ಜಿಎಸ್‌ (ಇಸ್ಲಾಮಿಸ್ಟ್‌ ಸ್ಟೇಟ್ಸ್‌ ಇನ್‌ ದಿ ಗ್ರೇಟರ್‌ ಸಹಾರಾ) ಹಾಗೂ ಆಲ್‌ ಖೈದಾದ ಒಂದು ಅಂಗಸಂಸ್ಥೆಯು ಗುರಿಯಾಗಿಸಿಕೊಂಡಿತ್ತು. ಇಸ್ಲಾಂ ಹಾಗೂ ಮುಸ್ಲಿಮರ ಬೆಂಬಲವಾಗಿ ಈ ಪ್ರದೇಶವನ್ನು ಗುರಿಯಾಗಿರಿಸಿಕೊಳ್ಳಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದೆ.

 ಭಾರತದ ಮೇಲೆ ದಾಳಿ ನಡೆಸಲು ಜೈಶ್‌ ಉಗ್ರರ ಸಂಚು: ವರದಿ ಭಾರತದ ಮೇಲೆ ದಾಳಿ ನಡೆಸಲು ಜೈಶ್‌ ಉಗ್ರರ ಸಂಚು: ವರದಿ

ಇನ್ನು ಮಾಲಿ, ನೈಜರ್‌ ಹಾಗೂ ಬುರ್ಕಿನಾ ಫಾಸೊದ ನಾಗರಿಕರು ಹಾಗೂ ಸೈನಿಕರನ್ನು ಗುರಿಯಾಗಿಸಿಕೊಂಡು ಇಸ್ಲಾಮಿಸ್ಟ್‌ ಸ್ಟೇಟ್ಸ್‌ ಇನ್‌ ದಿ ಗ್ರೇಟರ್‌ ಸಹಾರಾ (ಐಎಸ್‌ಜಿಎಸ್‌) ದಾಳಿ ನಡೆಸಿತ್ತು. 2017ರ ಅಕ್ಟೋಬರ್‌ 4 ರಂದು ನೈಜರ್‌ನಲ್ಲಿ ನಡೆದಿದ್ದ ದಾಳಿಯಲ್ಲಿ ನಾಲ್ವರು ಯುಎಸ್‌ ವಿಶೇಷ ಪಡೆಯ ಸದಸ್ಯರು ಹಾಗೂ ನಾಲ್ವರು ನೈಜರ್‌ ಪಡೆ ಸದಸ್ಯರು ಸಾವನ್ನಪ್ಪಿದ್ದಾರೆ. ಈ ದಾಳಿಯ ವಿಚಾರದಲ್ಲಿ ಅದ್ನಾನ್ ಅಬು ವಾಲಿದ್ ಅಲ್-ಸಹ್ರಾವಿ ಇರುವ ಸ್ಥಳದ ಮಾಹಿತಿ ನೀಡುವವರಿಗೆ ಅಮೆರಿಕವು 5 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಣೆ ಮಾಡಿತ್ತು.

2020 ರ ಆಗಸ್ಟ್‌ 9 ರಂದು ಇಸ್ಲಾಮಿಸ್ಟ್‌ ಸ್ಟೇಟ್ಸ್‌ ಇನ್‌ ದಿ ಗ್ರೇಟರ್‌ ಸಹಾರಾದ (ಐಎಸ್‌ಜಿಎಸ್‌) ಮುಖ್ಯಸ್ಥ ನೈಜರ್‌ನಲ್ಲಿ ಆರು ಪ್ರೆಂಚ್‌ ಸಹಾಯಕರು, ಅವರ ನೈಜರ್‌ ಮಾರ್ಗದರ್ಶಿಗಳು ಹಾಗೂ ಚಾಲಕರನ್ನು ಹತ್ಯೆ ಮಾಡಲು ಆದೇಶ ನೀಡಿದ್ದನು. ಅದ್ನಾನ್ ಅಬು ವಾಲಿದ್ ಅಲ್-ಸಹ್ರಾವಿ ಸ್ಲಾಮಿಕ್ ಮಾಗ್ರೆಬ್‌ನ ಅಲ್-ಕೈದಾದ ಸದಸ್ಯನಾಗಿದ್ದನು ಹಾಗೂ ಮಾಲಿಯನ್ ಇಸ್ಲಾಮಿಸ್ಟ್ ಗುಂಪು ಮುಜಾವೊ ಸಹ ನೇತೃತ್ವವನ್ನು ವಹಿಸಿದ್ದನು. 2012 ರಲ್ಲಿ ಅಲ್ಜೀರಿಯಾದಲ್ಲಿ ಸ್ಪಾನಿಷ್ ಸಹಾಯಕರನ್ನು ಮತ್ತು ಮಾಲಿಯಲ್ಲಿ ಅಲ್ಜೀರಿಯಾದ ರಾಜತಾಂತ್ರಿಕರ ಗುಂಪನ್ನು ಅಪಹರಣವನ್ನು ಈ ಮಾಲಿಯನ್ ಇಸ್ಲಾಮಿಸ್ಟ್ ಗುಂಪು ಮುಜಾವೊ ಮಾಡಿದೆ.

2013 ರಲ್ಲಿ ಮಾಲಿಯಲ್ಲಿ ಮಿಲಿಟರಿ ಹಸ್ತಕ್ಷೇಪ ಆರಂಭವಾದಾಗಿನಿಂದ ಪ್ರೆಂಚ್‌ ಸೇನೆಯು ಹಲವಾರು ಇಸ್ಲಾಮಿಸ್ಟ್‌ ಸ್ಟೇಟ್ಸ್‌ ಇನ್‌ ದಿ ಗ್ರೇಟರ್‌ ಸಹಾರಾದ (ಐಎಸ್‌ಜಿಎಸ್‌) ನಾಯಕರನ್ನು ಹತ್ಯೆ ಮಾಡಿದೆ. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಹಾಗೂ ಸ್ಥಳೀಯ ಪಡೆಗಳನ್ನು ಬೆಂಬಲಿಸುವ ಸುಮಾರು ಎಂಟು ವರ್ಷಗಳ ಮಿಲಿಟರಿ ಉಪಸ್ಥಿತಿಯ ಬಳಿಕ ಈ ವರ್ಷದ ಜೂನ್‌ನಲ್ಲಿ, ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರಾನ್ ಸಹೇಲ್‌ನಲ್ಲಿ ತನ್ನ ಪಡೆಯನ್ನು ಹಿಂದಕ್ಕೆ ಪಡೆದರು.

(ಒನ್‌ ಇಂಡಿಯಾ ಸುದ್ದಿ)

Recommended Video

AB DE Villiers ಅಭ್ಯಾಸ ಪಂದ್ಯದಲ್ಲಿ Harshal Patel ವಿರುದ್ಧ ಮಾಡಿದ್ದೇನು | Oneindia Kannada

English summary
The head of ISIS in the Greater Sahara Adnan Abu Walid al-Sahrawi has been killed in an operation by French troops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X