ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ 183 ಪ್ರಜೆಗಳ ವೀಸಾ ರದ್ದುಗೊಳಿಸಿದ ಫ್ರಾನ್ಸ್

|
Google Oneindia Kannada News

ಪ್ಯಾರಿಸ್, ನವೆಂಬರ್ 2: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶುಜಾ ಪಾಶಾ ಅವರ ಸಂಬಂಧಿಕರು ಸೇರಿದಂತೆ 183 ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ಫ್ರಾನ್ಸ್ ರದ್ದುಗೊಳಿಸಿದೆ.

ಫ್ರಾನ್ಸ್‌ನಲ್ಲಿ ಇಸ್ಲಾಂ ವಿರೋಧಿ ನೀತಿಗಳನ್ನು ಅನುಸರಿಸಲಾಗುತ್ತಿದೆ ಮತ್ತು ಇಸ್ಲಾಂ ವಿರುದ್ಧ ದ್ವೇಷದ ಭಾವನೆಗಳನ್ನು ಬಿತ್ತಲಾಗುತ್ತಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮಕ್ರಾನ್ ವಿರುದ್ಧ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ ಬೆನ್ನಲ್ಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಮೂಲಕ ತಾವು ಇಸ್ಲಾಮಿಕ್ ದೇಶಗಳ ಒತ್ತಡಕ್ಕೆ ಮಣಿಯುವುದಿಲ್ಲ ಎಂಬ ಸಂದೇಶವನ್ನು ಮಕ್ರಾನ್ ರವಾನಿಸಿದ್ದಾರೆ.

ಮುಸ್ಲಿಮರಿಗೆ ಶಿಕ್ಷಿಸುವ ಹಕ್ಕಿದೆ: ಮಲೇಷ್ಯಾ ಮಾಜಿ ಪ್ರಧಾನಿ ವಿವಾದಮುಸ್ಲಿಮರಿಗೆ ಶಿಕ್ಷಿಸುವ ಹಕ್ಕಿದೆ: ಮಲೇಷ್ಯಾ ಮಾಜಿ ಪ್ರಧಾನಿ ವಿವಾದ

ವೀಸಾ ರದ್ದತಿಯ ಜತೆಗೆ 118 ಪಾಕಿಸ್ತಾನಿಗಳನ್ನು ದೇಶದಿಂದ ಬಲವಂತವಾಗಿ ಗಡಿಪಾರು ಕೂಡ ಮಾಡಲಾಗಿದೆ. ಇದು ಇಮ್ರಾನ್ ಖಾನ್ ಅವರ ಫ್ರೆಂಚ್ ವಿರೋಧಿ ನಿಲುವಿಗೆ ಪ್ರತೀಕಾರವಾಗಿ ಮಾಡಲಾಗಿದೆ ಎಂದು ಹೇಳಲಾಗಿದೆ.

 France Revokes Visas Of 183 Nationals And Forcibly Deported 118 Pakistanis

ಈ ವರದಿಯನ್ನು ಖಚಿತಪಡಿಸಿರುವ ಪ್ಯಾರಿಸ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ, ಅನಾರೋಗ್ಯಪೀಡಿತ ಅತ್ತೆಯನ್ನು ನೋಡಿಕೊಳ್ಳಲು ಫ್ರಾನ್ಸ್‌ಗೆ ಬಂದಿರುವ ಅಹ್ಮದ್ ಶುಜಾ ಪಾಶಾ ಅವರ ಸಹೋದರಿಗೆ ಕೆಲವು ಸಮಯ ಅಲ್ಲಿಯೇ ಉಳಿದುಕೊಳ್ಳಲು ಅವಕಾಶ ನೀಡುವಂತೆ ಫ್ರಾನ್ಸ್‌ಗೆ ಮನವಿ ಮಾಡಿದೆ. ಅಧಿಕೃತ ದಾಖಲೆಗಳಿದ್ದಾಗಲೂ ಪಾಕಿಸ್ತಾನದ 118 ಪ್ರಜೆಗಳನ್ನು ಬಲವಂತವಾಗಿ ಗಡಿಪಾರು ಮಾಡಲಾಗಿದೆ ಎಂದು ಅದು ಹೇಳಿದೆ.

English summary
France has revoked visas of 183 Pakistan nationals and forcibly deported 118 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X