ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ತೊರೆಯುವಂತೆ ತನ್ನ ಪ್ರಜೆಗಳಿಗೆ ಫ್ರಾನ್ಸ್ ಸೂಚನೆ

|
Google Oneindia Kannada News

ಪ್ಯಾರಿಸ್, ಏಪ್ರಿಲ್ 15: ಪಾಕಿಸ್ತಾನದಲ್ಲಿ ಫ್ರಾನ್ಸ್‌ನ ಹಿತಾಸಕ್ತಿಗಳಿಗೆ ಗಂಭೀರ ಬೆದರಿಕೆಗಳು ಇರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿರುವ ತನ್ನ ಪ್ರಜೆಗಳು ಮತ್ತು ಕಂಪೆನಿಗಳು ತಾತ್ಕಾಲಿಕವಾಗಿ ದೇಶ ತೊರೆಯುವಂತೆ ಫ್ರಾನ್ಸ್ ಸಲಹೆ ನೀಡಿದೆ.

ಪಾಕಿಸ್ತಾನದ ಅನೇಕ ಭಾಗಗಳಲ್ಲಿ ಫ್ರಾನ್ಸ್ ವಿರೋಧಿ ಹಿಂಸಾಚಾರಗಳು ತೀವ್ರವಾಗಿದ್ದು, ಪಾಕ್‌ನಲ್ಲಿನ ತನ್ನ ಪ್ರಜೆಗಳ ಸುರಕ್ಷತೆ ಬಗ್ಗೆ ಫ್ರಾನ್ಸ್ ಕಳವಳ ವ್ಯಕ್ತಪಡಿಸಿದೆ.

ಪ್ರವಾದಿ ಕುರಿತ ಹೇಳಿಕೆ: ಮುಂಬೈ ರಸ್ತೆಗಳ ಮೇಲೆ ಫ್ರಾನ್ಸ್ ಅಧ್ಯಕ್ಷರ ಫೋಟೊಪ್ರವಾದಿ ಕುರಿತ ಹೇಳಿಕೆ: ಮುಂಬೈ ರಸ್ತೆಗಳ ಮೇಲೆ ಫ್ರಾನ್ಸ್ ಅಧ್ಯಕ್ಷರ ಫೋಟೊ

'ಪಾಕಿಸ್ತಾನದಲ್ಲಿನ ಫ್ರೆಂಚ್ ಹಿತಾಸಕ್ತಿಗಳಿಗೆ ಗಂಭೀರ ಬೆದರಿಕೆ ಇರುವುದರಿಂದ ಫ್ರೆಂಚ್ ಪ್ರಜೆಗಳು ಮತ್ತು ಕಂಪೆನಿಗಳು ತಾತ್ಕಾಲಿಕವಾಗಿ ದೇಶ ತೊರೆಯುವಂತೆ ಸಲಹೆ ನೀಡಲಾಗಿದೆ' ಎಂದು ಫ್ರಾನ್ಸ್ ನಾಗರಿಕರಿಗೆ ರಾಯಭಾರ ಕಚೇರಿ ಇ-ಮೇಲ್ ರವಾನಿಸಿದೆ. ಹಾಲಿ ಇರುವ ವಾಣಿಜ್ಯ ವಿಮಾನಗಳ ಮೂಲಕ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದು ಅದು ತಿಳಿಸಿದೆ.

France Advises Citizens To Leave Pakistan After Anti-French Clashes

ದೇಶದಲ್ಲಿ ನಡೆಯುತ್ತಿರುವ ಫ್ರಾನ್ಸ್ ವಿರೋಧಿ ಪ್ರತಿಭಟನೆಗಳಿಗೆ ಕಟ್ಟರ್ ಇಸ್ಲಾಮಿಸ್ಟ್ ಗುಂಪು ತೆಹ್ರೀಕ್-ಇ-ಲಾಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಕಾರಣ ಎಂದು ಪಾಕಿಸ್ತಾನದ ಆಂತರಿಕ ಸಚಿವಾಲಯ ಹೇಳಿಕೆ ನೀಡಿದ್ದು, ಈ ಸಂಘಟನೆಯನ್ನು ನಿಷೇಧಿಸುವುದಾಗಿ ತಿಳಿಸಿದೆ.

ಫ್ರಾನ್ಸ್‌ನ ಚಾರ್ಲಿ ಹೆಬ್ಡೋ ಪತ್ರಿಕೆಯಲ್ಲಿ ಪ್ರವಾದಿ ಮೊಹಮ್ಮದರ ವ್ಯಂಗ್ಯಚಿತ್ರಗಳು ಪ್ರಕಟವಾದ ಹಿನ್ನೆಲೆಯಲ್ಲಿ ಅದರ ವಿರುದ್ಧ ಖಂಡನೆಗಳು ವ್ಯಕ್ತವಾಗಿದ್ದವು. ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮಕ್ರಾನ್, ಈ ವ್ಯಂಗ್ಯಚಿತ್ರ ಪ್ರಕಟಿಸುವ ಹಕ್ಕನ್ನು ಬೆಂಬಲಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಫ್ರಾನ್ಸ್ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದು. ಹಿಂಸಾಚಾರಕ್ಕೆ ತಿರುಗಿದೆ.

ಟಿಎಲ್‌ಪಿ ಬೆಂಬಲಿಗರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದರು. ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ದಾಂದಲೆ ನಡೆಸುತ್ತಿದ್ದ ಜನರನ್ನು ಚೆದುರಿಸಲು ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಪ್ರಯೋಗಿಸಿತ್ತು. ಟಿಎಲ್‌ಪಿ ನಾಯಕ ಸಾದ್ ರಿಜ್ವಿಯನ್ನು ಬಂಧಿಸಿರುವ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿದ್ದಾರೆ.

English summary
France has advised that French citizens and companies should temporarily leave Pakistan due to serious threats in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X