ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಿಸ್‌ನಲ್ಲಿ ರಫೇಲ್ ಯುದ್ಧವಿಮಾನಕ್ಕೆ ರಾಜನಾಥ್‌ ಸಿಂಗ್ ಆಯುಧಪೂಜೆ

|
Google Oneindia Kannada News

ಪ್ಯಾರಿಸ್, ಅಕ್ಟೋಬರ್ 07: ಭಾರತದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ರಫೇಲ್ ಯುದ್ಧವಿಮಾನವು ನಾಳೆ ಭಾರತಕ್ಕೆ ಬರಲಿದೆ.

ರಫೇಲ್ ಒಪ್ಪಂದದ ಅನುಗುಣವಾಗಿ ಮೊದಲ ರಫೇಲ್ ಯುದ್ಧ ವಿಮಾನವನ್ನು ನಾಳೆ ಭಾರತಕ್ಕೆ ಫ್ಯಾನ್ಸ್‌ನ ಡಸ್ಸಾಲ್ಟ್ ಸಂಸ್ಥೆ ಹಸ್ತಾಂತರಿಸಲಿದೆ. ಖುದ್ದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೇ ಪ್ಯಾರಿಸ್‌ಗೆ ತೆರಳಿ ವಿಮಾನವನ್ನು ಸ್ವೀಕರಿಸಲಿದ್ದಾರೆ.

ಈಗಾಗಲೇ ರಾಜನಾಥ ಸಿಂಗ್ ಅವರು ಪ್ಯಾರಿಸ್ ಸೇರಿದ್ದು, ಮಂಗಳವಾರ ಪ್ಯಾರಿಸ್‌ನಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಆಯುಧ ಪೂಜೆ ನೆರವೇರಿಸಲಿದ್ದಾರೆ.

First Rafale Plane Will Come To India On Tuesday

ಅಷ್ಟೆ ಅಲ್ಲದೆ ಪ್ಯಾರಿಸ್ ವಾಯುನೆಲೆಯಿಂದ ರಫೇಲ್‌ ಹಾರಾಟದ ಮೊದಲ ಅನುಭವವನ್ನೂ ಅವರು ಪಡೆಯಲಿದ್ದಾರೆ. ನಾಳೆ ಅವರು ರಫೇಲ್‌ನಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಲಿದ್ದಾರೆ. ರಾಜನಾಥ್ ಸಿಂಗ್ ಅವರು ಸೋಮವಾರ ಪ್ಯಾರಿಸ್‌ಗೆ ಹೊರಟಿದ್ದು, ಮೂರು ದಿನ ಅವರು ಫ್ರಾನ್ಸ್‌ನಲ್ಲಿ ಇರಲಿದ್ದಾರೆ.

ಮಂಗಳವಾರ ವಾಯುಪಡೆಯ ಸಂಸ್ಥಾಪನಾ ದಿನವೂ ಇದ್ದು, ಇದೇ ದಿನ ರಫೇಲ್ ಯುದ್ಧ ವಿಮಾನ ಭಾರತದ ಕೈಸೇರಲಿದೆ. ಒಟ್ಟು 36 ರಫೇಲ್ ಯುದ್ಧವಿಮಾನಗಳನ್ನು ಭಾರತ ಖರೀದಿಸುತ್ತಿದ್ದು, ಮೊದಲ ವಿಮಾನ ಮಂಗಳವಾರ ಬರಲಿದ್ದು, ಇದೇ ಒಪ್ಪಂದದ ನಾಲ್ಕು ವಿಮಾನಗಳು ಮೇ ಅಂತ್ಯಕ್ಕೆ ಕೈ ಸೇರಲಿವೆ.

English summary
India will get first Ragale plane on Tuesday. Defence Minister Rajanath Singh will receive first plane in Paris and he will take a ride on the plane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X