• search
  • Live TV
ಪ್ಯಾರಿಸ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಲ್ವಾಮಾ ದಾಳಿ: ಜಾಗತಿಕ ಮಟ್ಟದಲ್ಲಿ ಮರ್ಯಾದೆ ಕಳೆದುಕೊಂಡ ಪಾಕಿಸ್ತಾನ

|

ಪ್ಯಾರಿಸ್, ಫೆಬ್ರವರಿ 22: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೂ ತನಗೂ ಸಂಬಂಧವಿಲ್ಲ. ಅದಕ್ಕೆ ಸಾಕ್ಷ್ಯ ಕೊಡಿ ಎಂದು ಅಮಾಯಕನಂತೆ ಭಾರತಕ್ಕೆ ಕೇಳಿದ್ದ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಮರ್ಯಾದೆ ಕಳೆದುಕೊಂಡಿದೆ.

ಜಾಗತಿಕ ಭಯೋತ್ಪಾದನಾ ಆರ್ಥಿಕತೆಯ ಕಾವಲುನಾಯಿ ಆರ್ಥಿಕ ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್) ಶುಕ್ರವಾರ ಪ್ಯಾರಿಸ್‌ನಲ್ಲಿ ನಡೆಸಿದ ಸರ್ವ ಸದಸ್ಯರ ಸಭೆಯಲ್ಲಿ ಪುಲ್ವಾಮಾ ದಾಳಿಯನ್ನು ಕಟುವಾಗಿ ಖಂಡಿಸಿದೆ. ಜೈಶ್ ಎ ಮೊಹಮ್ಮದ್ ಮತ್ತು ಲಷ್ಕರ್ ಎ ತಯಬಾದಂತಹ ಉಗ್ರರ ಸಂಘಟನೆಗಳಿಗೆ ದೊರಕುವ ಹಣಕಾಸಿನ ನೆರವನ್ನು ನಿಯಂತ್ರಿಸಲು ಪಾಕಿಸ್ತಾನ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಅದು ಚಾಟಿ ಬೀಸಿದೆ.

ನದಿ ನೀರು ಹಂಚಿಕೆ ನಿಲ್ಲಿಸಿದರೂ ಅಡ್ಡಿಯಿಲ್ಲ : ಪಾಕಿಸ್ತಾನದ ಉದ್ಧಟತನ

ಇದರರ್ಥ ಪಾಕಿಸ್ತಾನವು ಎಫ್‌ಎಟಿಎಫ್‌ನ 'ಗ್ರೇ ಪಟ್ಟಿ'ಯಲ್ಲಿಯೇ ಮುಂದುವರಿಯಲಿದ್ದು, ಇದರಿಂದ ಅಂತಾರಾಷ್ಟ್ರೀಯ ಸಾಲಗಳನ್ನು ಪಡೆದುಕೊಳ್ಳುವುದು ಕಠಿಣವಾಗಲಿದೆ.

ಆರ್ಥಿಕ ನೆರವಿಲ್ಲದೆ ದಾಳಿ ಸಾಧ್ಯವಿಲ್ಲ

ಆರ್ಥಿಕ ನೆರವಿಲ್ಲದೆ ದಾಳಿ ಸಾಧ್ಯವಿಲ್ಲ

ಕಳೆದ ವಾರ ಪುಲ್ವಾಮಾದಲ್ಲಿ ಭಾರತದ ಭದ್ರತಾ ಪಡೆಯ ಮೇಲೆ ನಡೆದ ದಾಳಿಯಲ್ಲಿ 40ಕ್ಕೂ ಹೆಚ್ಚು ಸೈನಿಕರು ಬಲಿಯಾದ ಭೀಕರ ಹಿಂಸಾತ್ಮಕ ಕೃತ್ಯವನ್ನು ಎಫ್‌ಎಟಿಎಫ್ ಖಂಡಿಸುತ್ತದೆ ಮತ್ತು ಕಳವಳ ವ್ಯಕ್ತಪಡಿಸುತ್ತದೆ. ಇಂತಹ ದಾಳಿಗಳು ಹಣಕಾಸಿನ ನೆರವಿಲ್ಲದೆ ನಡೆಯುವುದು ಸಾಧ್ಯವಿಲ್ಲ. ಹಾಗೂ ಇದರ ಅರ್ಥ ಭಯೋತ್ಪಾದಕರ ಬೆಂಬಲಿಗರ ನಡುವೆ ಹಣವು ಹರಿದಾಡುತ್ತಿದೆ ಎಂದು 38 ಸದಸ್ಯರ ಕಾವಲುನಾಯಿ ಹೇಳಿಕೆ ನೀಡಿದೆ.

'ಭಯೋತ್ಪಾದನೆಗೆ ಬಂಡವಾಳ' ನೀಡುವ ದೇಶಗಳ ಪಟ್ಟಿಯಲ್ಲಿ ಪಾಕ್

ಪಾಕಿಸ್ತಾನ ಕ್ರಮ ತೆಗೆದುಕೊಂಡಿಲ್ಲ

ಪಾಕಿಸ್ತಾನ ಕ್ರಮ ತೆಗೆದುಕೊಂಡಿಲ್ಲ

ಜೆಯುಡಿ, ಎಲ್‌ಇಟಿ, ಜೆಇಎಂ ಮತ್ತು ತಾಲಿಬಾನ್‌ ಜತೆ ನಂಟುಹೊಂದಿರುವ ಜನರು ಆರ್ಥಿಕ ಭಯೋತ್ಪಾದನೆಯ ಅಪಾಯಗಳನ್ನು ತಂದೊಡ್ಡುತ್ತಿರುವುದರ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ತೆಗೆದುಕೊಂಡಿರುವುದು ಕಾಣಿಸುತ್ತಿಲ್ಲ. ತನ್ನ ಕಾರ್ಯತಂತ್ರ ಕೊರತೆಗಳನ್ನು ಸರಿಪಡಿಸಲು ಕಾರ್ಯಯೋಜನೆ ಜಾರಿಗಾಗಿ ಪಾಕಿಸ್ತಾನ ಕೆಲಸ ಮಾಡಬೇಕಿದೆ ಎಂದು ಎಫ್‌ಎಟಿಎಫ್ ಆಗ್ರಹಿಸಿದೆ.

ಪುಲ್ವಾಮಾ ದಾಳಿ ರಾಹುಲ್ ಗಾಂಧಿಗೆ ಮುಂಚೆನೇ ತಿಳಿದಿತ್ತೇ: ಬಿಜೆಪಿ ಪ್ರಶ್ನೆ

ಪಾಕಿಸ್ತಾನದ ಲಾಬಿ ವಿಫಲ

ಪಾಕಿಸ್ತಾನದ ಲಾಬಿ ವಿಫಲ

ತನ್ನ ಕಾರ್ಯಯೋಜನೆಯನ್ನು ಪೂರ್ಣಗೊಳಿಸಲು ಪಾಕಿಸ್ತಾನಕ್ಕೆ 2019ರ ಮೇ ತಿಂಗಳವರೆಗೂ ಕಾಲಾವಕಾಶವಿದೆ. ಅಕ್ಟೋಬರ್ ಒಳಗೆ ಗುರಿಯನ್ನು ತಲುಪುವಲ್ಲಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ವಿಫಲವಾದರೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.

ಪಾಕಿಸ್ತಾನವನ್ನು ಕಳೆದ ವರ್ಷದ ಜೂನ್ ತಿಂಗಳಿನಲ್ಲಿ 'ಬೂದು ಪಟ್ಟಿ'ಗೆ ಸೇರ್ಪಡೆಗೊಳಿಸಲಾಗಿತ್ತು. ಈ ಪಟ್ಟಿಯಿಂದ ಹೊರಕ್ಕೆ ಬರಲು ಸಭೆಯಲ್ಲಿ ಅದು ತೀವ್ರ ಲಾಬಿ ನಡೆಸಿತ್ತು.

ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನದ ಕೈವಾಡದ ಬಗ್ಗೆ ಪುರಾವೆಗಳಿರುವ ಕಡತಗಳನ್ನು ಎಫ್‌ಎಟಿಎಫ್‌ಗೆ ನೀಡುವುದಾಗಿ ಭಾರತದ ಗುಪ್ತಚರ ಅಧಿಕಾರಿಗಳು ಕಳೆದ ವಾರ ಮಾಹಿತಿ ನೀಡಿದ್ದರು. ಈ ಮೂಲಕ ನೆರೆಯ ದೇಶವು ಭಯೋತ್ಪಾದನೆಯೊಂದಿಗೆ ಹೊಂದಿರುವ ನಂಟನ್ನು ಬಹಿರಂಗಪಡಿಸುವುದು ಮತ್ತು ಪಾಕಿಸ್ತಾನದ ಮೇಲೆ ಒತ್ತಡ ಹೇರುವುದು ಭಾರತದ ಉದ್ದೇಶವಾಗಿತ್ತು.

ಕಪ್ಪುಪಟ್ಟಿಗೆ ಸೇರಿದರೆ ಪಾಕ್ ಕಥೆಯೇನು?

ಕಪ್ಪುಪಟ್ಟಿಗೆ ಸೇರಿದರೆ ಪಾಕ್ ಕಥೆಯೇನು?

ಪುಲ್ವಾಮಾ ದಾಳಿಯ ಹೊಣೆ ಹೊತ್ತುಕೊಂಡಿರುವ ಜೈಶ್ ಎ ಮೊಹಮ್ಮದ್ ಸಂಘಟನೆಗೆ ಪಾಕಿಸ್ತಾನದ ಸಂಸ್ಥೆಗಳು ಹೇಗೆ ಹಣಕಾಸಿನ ನೆರವು ಒದಗಿಸುತ್ತಿವೆ ಎಂಬುದರ ಬಗ್ಗೆಯೂ ಮಾಹಿತಿ ಒದಗಿಸಲಾಗಿತ್ತು. ಹಣ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಹಣಕಾಸಿನ ನೆರವಿನ ವಿರುದ್ಧದ ಜಾಗತಿಕ ಹೋರಾಟದಲ್ಲಿ ಸಹಕಾರ ತೋರುವ ದೇಶವನ್ನು ಎಫ್‌ಎಟಿಎಫ್ ಕಪ್ಪುಪಟ್ಟಿಗೆ ಸೇರಿಸುತ್ತದೆ. ಒಂದು ವೇಳೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಯುರೋಪಿಯನ್ ಯೂನಿಯನ್‌ಗಳಿಂದ ಸಾಲ ಪಡೆಯಲು ಕಷ್ಟವಾಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pakistan does not demonstrate a proper understanding of the terror financing risks posed by terrorist organisations, FATF slams Pakistan on Pulwama attack at its plenary meeting in Paris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more