ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ನಿಲ್ಲಿಸಿ: Cannes ಚಿತ್ರೋತ್ಸವದಲ್ಲಿ ಟಾಪ್ಲೆಸ್ ಮಹಿಳೆಯಿಂದ ಪ್ರತಿಭಟನೆ

|
Google Oneindia Kannada News

ಪ್ಯಾರಿಸ್, ಮೇ 21: ಫ್ರಾನ್ಸ್‌ನ ಕಾನ್ (Cannes City) ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉಕ್ರೇನ್ ಯುವತಿಯೊಬ್ಬಳು ಬೆತ್ತಲಾಗಿ ಪ್ರದರ್ಶನ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಹುಟ್ಟಿಸಿದ ಘಟನೆ ನಡೆದಿದೆ. ಉಕ್ರೇನ್ ದೇಶದ ಮೇಲೆ ರಷ್ಯಾ ನಡೆಸಿರುವ ಆಕ್ರಮಣವನ್ನು ಪ್ರತಿಭಟಿಸುವ ಉದ್ದೇಶದಿಂದ ಈ ಮಹಿಳೆ ವಿವಸ್ತ್ರಳಾಗಿದ್ದು ತಿಳಿದುಬಂದಿದೆ. ಅಂಡರ್‌ಪ್ಯಾಂಟ್ ಹೊರತುಪಡಿಸಿ ಈ ಮಹಿಳೆ ಸಂಪೂರ್ಣ ಬೆತ್ತಳಾಗಿದ್ದಳು. ಚಿತ್ರೋತ್ಸವ ಕಾರ್ಯಕ್ರಮದ ರೆಡ್ ಕಾರ್ಪೆಟ್ ಮೇಲೆ ಈಕೆ ಓಡುತ್ತಾ, "ಅತ್ಯಾಚಾರ ನಿಲ್ಲಿಸಿ" (Stop Raping) ಎಂದು ಘೋಷಣೆಯನ್ನೂ ಈಕೆ ಕೂಗಿದಳು.

ಜಾರ್ಜ್ ಮಿಲ್ಲರ್ ನಿರ್ದೇಶನದ "ಥ್ರೀ ಥೌಸೆಂಡ್ ಇಯರ್ಸ್ ಆಫ್ ಲಾಂಗಿಂಗ್" (Three Thousand Years of Longing) ಸಿನಿಮಾದ ಪ್ರೀಮಿಯರ್ ಶೋಗೆ ಮುನ್ನ ನಡೆದ ರೆಡ್ ಕಾರ್ಪೆಟ್ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಉಕ್ರೇನ್ ಬಾವುಟದ ಬಣ್ಣಗಳನ್ನು ಈಕೆ ಮೈಮೇಲೆ ಬಳಿದುಕೊಂಡಿದ್ದಳು. ಬೆನ್ನ ಕೆಳಗೆ 'ಸ್ಟಾಪ್ ರೇಪಿಂಗ್ ಅಸ್' (Stop Raping Us) ಎಂದು ಇಂಗ್ಲೀಷ್ ಅಕ್ಷರದಲ್ಲಿ ಬರೆದುಕೊಂಡಿದ್ದಳು. ಈಕೆಯ ಚೆಡ್ಡಿಗೆ ಕೆಂಪು ಬಣ್ಣ ಮೆತ್ತಿ, ರಕ್ತದ ಕಲೆಯಂತೆ ಕಾಣುತ್ತಿತ್ತು. ತೊಡೆಗಳಿಗೂ ಕೆಂಪು ಬಣ್ಣ ಬಳಿಯಲಾಗಿತ್ತು. ರಕ್ತಸಿಕ್ತಗೊಂಡು ಗಂಭೀರ ಗಾಯದ ಸ್ಥಿತಿಯಲ್ಲಿದ್ದಂತೆ ಕಾಣುವಂತೆ ಯುವತಿಗೆ ಪೇಂಟ್ ಮಾಡಲಾಗಿತ್ತು.

ವ್ಲಾದಿಮಿರ್ ಪುಟಿನ್ ಮತ್ತು ಸಾವಿರ ರಷ್ಯನ್ನರಿಗೆ ಕೆನಡಾ ನಿಷೇಧವ್ಲಾದಿಮಿರ್ ಪುಟಿನ್ ಮತ್ತು ಸಾವಿರ ರಷ್ಯನ್ನರಿಗೆ ಕೆನಡಾ ನಿಷೇಧ

ಸೆಲಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡುತ್ತಿರುವಂತೆಯೇ ಈ ಯುವತಿ ಅಲ್ಲಿ ನುಗ್ಗಿ ರಷ್ಯಾ ವಿರುದ್ಧ ಘೋಷಣೆಗಳನ್ನು ಕೂಗಿದಳು. ನಂತರ ಭದ್ರತಾ ಸಿಬ್ಬಂದಿ ಈಕೆಯನ್ನು ಅಲ್ಲಿಂದ ಕೂಡಲೇ ಹೊರಗೆ ಕರೆದೊಯ್ದರು.

Cannes Film Festival Sees a Woman Going Topless in Protest Against Russia

ಉಕ್ರೇನ್ ಅಧ್ಯಕ್ಷರ ಉದ್ಘಾಟನಾ ಭಾಷಣ
ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಮಂಗಳವಾರದಂದು ಕಾನ್ ಫಿಲಂ ಫೆಸ್ಟಿವಲ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕವೇ ಮಾತನಾಡಿದ್ದರು. ತಮ್ಮ ದೇಶಕ್ಕೆ ನೆರವು ಒದಗಿಸುವಂತೆ ಅವರು ಮನವಿ ಮಾಡಿದ್ದರು.

ಇಂದು ಶನಿವಾರ ಉಕ್ರೇನ್ ದೇಶದ ಚಿತ್ರ ತಯಾರಕರಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಸೆರ್ಗೇ ಲೋನಿಟ್ಸಾ ಎಂಬ ನಿರ್ದೇಶಕರ "ದಿ ನ್ಯಾಚುರಲ್ ಹಿಸ್ಟರಿ ಆಫ್ ಡಿಸ್ಟ್ರಕ್ಷನ್" (The Natural History of Destruction) ಸಿನಿಮಾ ಪ್ರದರ್ಶನವಾಗಲಿದೆ. ಇದು ಎರಡನೇ ಮಹಾಯುದ್ಧದಲ್ಲಿ ಜರ್ಮನ್ ದೇಶದ ನಗರಗಳ ಮೇಲೆ ನಡೆದ ಬಾಂಬ್ ದಾಳಿ ಘಟನೆಗಳ ಕಥೆ ಇರುವ ಚಿತ್ರವಾಗಿದೆ. ಉಕ್ರೇನ್ ದೇಶದ ಇತರರ ಸಿನಿಮಾಗಳೂ ಇಂದು ವಿಶೇಷ ಸ್ಕ್ರೀನಿಂಗ್‌ನ ಭಾಗವಾಗಿ ಪ್ರದರ್ಶನಗೊಳ್ಳುತ್ತಿವೆ.

Cannes Film Festival Sees a Woman Going Topless in Protest Against Russia

ಕಾನ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಈ ಬಾರಿ ಯುದ್ಧ ಮುಖ್ಯ ವಿಷಯ ವಸ್ತುವಾಗಿದೆ. ಮೊನ್ನೆ ಗುರುವಾರದಂದು 'ಮರಿಯೂಪೊಲಿಸ್ 2' (Mariupolis 2) ಎಂಬ ಸಾಕ್ಷ್ಯಚಿತ್ರದ ಪ್ರದರ್ಶನವಾಗಿದೆ. ದುರಂತ ಎಂದರೆ ಈ ಡಾಕ್ಯುಮೆಂಟರಿ ನಿರ್ದೇಶನ ಮಾಡಿದ್ದ ಮ್ಯಾಂಟಸ್ ಕೆಡರಾವಿಷಿಯಸ್ (Mantas Kvedaravicius) ಅವರನ್ನು ರಷ್ಯಾದ ಸೈನಿಕರು ಕಳೆದ ತಿಂಗಳು ಹತ್ಯೆಗೈದಿದ್ದರು. ಅವರ ಗೌರವಾರ್ಥವಾಗಿ ಮರಿಯೂಪೊಲಿಸ್2 ಸಾಕ್ಷ್ಯಚಿತ್ರವನ್ನು ಕಾನ್ ಚಿತ್ರೋತ್ಸವದಲ್ಲಿ ಗುರುವಾರ ಪ್ರದರ್ಶನ ಮಾಡಲಾಗಿತ್ತು.

(ಒನ್ಇಂಡಿಯಾ ಸುದ್ದಿ)

English summary
A woman stripped off on the red carpet at the Cannes Film Festival to reveal her body painted in the colours of the Ukrainian flag with the words "Stop Raping Us" in a solo protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X