ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನಷ್ಟು ಪರಿಣಾಮಕಾರಿ ಫಲಿತಾಂಶಕ್ಕೆ ಎರಡು ಲಸಿಕೆಗಳ ಸಂಯೋಜನೆ

|
Google Oneindia Kannada News

ಪ್ಯಾರಿಸ್, ಡಿಸೆಂಬರ್ 12: ಕೊರೊನಾ ವೈರಸ್ ನಿವಾರಣೆಯ ಲಸಿಕೆಗಳ ಅಭಿವೃದ್ಧಿ ಹಾದಿಯಲ್ಲಿ ಹೊಸ ಪ್ರಯೋಗಕ್ಕೆ ಆಸ್ಟ್ರಾಜೆನೆಕಾ ಮುಂದಾಗಿದೆ. ಎರಡು ಭಿನ್ನ ಲಸಿಕೆಗಳನ್ನು ಸಂಯೋಜಿಸುವ ಮೂಲಕ ಇನ್ನಷ್ಟು ಪರಿಣಾಮಕಾರಿ ಫಲಿತಾಂಶವನ್ನು ಪಡೆಯುವ ಪ್ರಯೋಗವನ್ನು ನಡೆಸಲಾಗುತ್ತಿದೆ.

ಫಾರ್ಮಾಸ್ಯುಟಿಕಲ್ ಸಂಸ್ಥೆ ಆಸ್ಟ್ರಾಜೆನೆಕಾ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಇನ್ನಷ್ಟು ವೈದ್ಯಕೀಯ ಪ್ರಯೋಗಗಳಿಗೆ ಬಳಸಿಕೊಳ್ಳುವುದಾಗಿ ತಿಳಿಸಿದೆ. ಭಿನ್ನ ಲಸಿಕೆಗಳ ಮಿಶ್ರಣದಿಂದ ರೋಗನಿರೋಧಕ ಶಕ್ತಿಯ ಅಂಶವೂ ಹೆಚ್ಚಲಿದೆ ಎನ್ನುವ ಆಲೋಚನೆ ಈ ಪ್ರಯೋಗದ ಹಿಂದಿದೆ.

AstraZeneca And Sputnik Vaccines To Be Combined To Effective Result

ಈ ಮುನ್ನ ಸ್ಪುಟ್ನಿಕ್ ವಿ ಲಸಿಕೆಯ ಪ್ರಯೋಗದಿಂದ ಲಸಿಕೆಯು 70% ಪರಿಣಾಮಕಾರಿ ಎನ್ನಲಾಗಿತ್ತು. ಇದೇ ನಿಟ್ಟಿನಲ್ಲಿ ಕಳೆದ ವಾರದಿಂದ ರಷ್ಯಾ, ಜನರಿಗೆ ಲಸಿಕೆಗಳನ್ನು ನೀಡುತ್ತಿದೆ.

ಕೋವಿಡ್ ಗಂಭೀರವಾಗಲು ಈ 5 ಜೀನ್ಸ್‌ಗಳು ಕಾರಣ: ಮಹತ್ವದ ಸಂಶೋಧನೆಕೋವಿಡ್ ಗಂಭೀರವಾಗಲು ಈ 5 ಜೀನ್ಸ್‌ಗಳು ಕಾರಣ: ಮಹತ್ವದ ಸಂಶೋಧನೆ

ಶನಿವಾರ, ಆಸ್ಟ್ರಾಜೆನೆಕ ಹಾಗೂ ಆಕ್ಸ್‌ ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ AZD1222 ಹಾಗೂ ರಷ್ಯಾದ ಗಮಾಲೆಯ ರಿಸರ್ಚ್ ಇನ್ ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಸಂಯೋಜನೆಯಲ್ಲಿ ವೈದ್ಯಕೀಯ ಪ್ರಯೋಗ ನಡೆಸುವ ಘೋಷಣೆ ಮಾಡಲಾಗಿದೆ.

ಈ ಪ್ರಯೋಗವನ್ನು 18ರ ವಯಸ್ಸಿನವರ ಮೇಲೆ ನಡೆಸುತ್ತಿದ್ದು, ಈ ವರ್ಷದ ಕೊನೆಯಲ್ಲಿ ಪ್ರಯೋಗ ಪೂರ್ಣಗೊಳಿಸುವುದಾಗಿ ತಿಳಿದುಬಂದಿದೆ. ಎರಡೂ ಲಸಿಕೆಗಳ ಸಂಯೋಜನೆಯ ಎರಡು ಡೋಸ್ ಅನ್ನು ಪ್ರತಿ ವ್ಯಕ್ತಿಗೆ ನೀಡಲಾಗುವುದು ಎಂದು ತಿಳಿದುಬಂದಿದೆ. ಈ ಪ್ರಯೋಗದ ಬಗ್ಗೆ ಲಸಿಕೆ ಅಭಿವೃದ್ಧಿ ಸಂಸ್ಥೆಗಳಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತಗೊಂಡಿದೆ.

English summary
AstraZeneca's Russian branch announced to combine AstraZeneca And Sputnik Vaccines to get effective result
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X