• search
  • Live TV
ಪ್ಯಾರಿಸ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

5 ಕೋಟಿ ರುಪಾಯಿ ವಾಚ್ ಕದ್ದೊಯ್ದ ಕಳ್ಳ, ಮೊಬೈಲ್ ಬೀಳಿಸಿಕೊಂಡ

|
Google Oneindia Kannada News

ಪ್ಯಾರಿಸ್, ಅಕ್ಟೋಬರ್ 10: "ಕಳ್ಳನೊಬ್ಬ ವಾಚ್ ಕದ್ದುಕೊಂಡು ಹೋದ" ಅಂತ ಪೊಲೀಸರಿಗೆ ದೂರು ನೀಡಿದರೆ ಹೇಗೆ ಪ್ರತಿಕ್ರಿಯೆ ನೀಡಬಹುದು? ಎಷ್ಟು ಅದರ ಬೆಲೆ ಅಂತಲೇ ಶುರು ಮಾಡ್ತಾರೆ ಅಲ್ವಾ! ಪ್ಯಾರಿಸ್ ನಲ್ಲಿ ಹೋಟೆಲ್ ನಿಂದ ಆಚೆ ಬರುತ್ತಾ ಸಿಗರೇಟ್ ಸೇದುತ್ತಿದ್ದ ಜಪಾನ್ ನಾಗರಿಕನಿಂದ $ 8,40,000 ಬೆಲೆಯ ವಾಚ್ ಕಸಿದು, ಕಳ್ಳ ಓಡಿಹೋಗಿದ್ದಾನೆ.

ಕಳೆದ ಸೋಮವಾರ ಪ್ಯಾರಿಸ್ ನ ಫೈವ್ ಸ್ಟಾರ್ ಹೋಟೆಲ್ ನಿಂದ ಮೂವತ್ತು ವರ್ಷದ ಸಂತ್ರಸ್ತ ಹೊರಗೆ ಬಂದಿದ್ದಾನೆ. ಆತನ ಬಳಿ ಸಿಗರೇಟು ಕೇಳಿಕೊಂಡು ಬಂದ ವ್ಯಕ್ತಿ, ವಾಚ್ ಕಸಿದು ಓಡಿದ್ದಾನೆ. ಅದು ಅಪರೂಪದ ರಿಚರ್ಡ್ ಮಿಲೆ ವಾಚ್. ಅದರಲ್ಲಿನ ವಜ್ರದ ಬೆಲೆಯೇ ಹತ್ತಿರ ಹತ್ತಿರ ಏಳು ಲಕ್ಷದ ಎಪ್ಪತ್ತು ಸಾವಿರ ಯುರೋ ಆಗುತ್ತದೆ.

ಭೀಕರ ಅಪಘಾತಕ್ಕೀಡಾದ ವ್ಯಕ್ತಿಯ ಜೀವ ಉಳಿಸಿದ 'ವಾಯಾವಿ' ವಾಚ್!ಭೀಕರ ಅಪಘಾತಕ್ಕೀಡಾದ ವ್ಯಕ್ತಿಯ ಜೀವ ಉಳಿಸಿದ 'ವಾಯಾವಿ' ವಾಚ್!

ಈ ವಾಚ್ ನ ನೋಡುತ್ತಿದ್ದ ಹಾಗೇ ದುಬಾರಿಯದೇ ಎಂದು ಗೊತ್ತಾಗುವಂಥದ್ದು ಮಿಲೆ ವಾಚ್ ಗಳು. ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ ಮಧ್ಯೆ ಪ್ಯಾರಿಸ್ ನಲ್ಲಿ ಇಂಥ ಎಪ್ಪತ್ತೊಂದು ದರೋಡೆ ಪ್ರಕರಣ ವರದಿ ಆಗಿವೆಯಂತೆ. ಅದರಲ್ಲಿ ಕನಿಷ್ಠ ಒಂದು ಲಕ್ಷ ಯುರೋ ಬೆಲೆಯ ರಿಚರ್ಡ್ ಮಿಲೆ ವಾಚ್ ಗಳು ಹೆಚ್ಚಿನ ಸಂಖ್ಯೆಯವಂತೆ.

5 Crore Watch Theft By Thieve In Paris

ಆದರೆ, ಈಗ ವಾಚ್ ಕಳೆದುಕೊಂಡಿರುವ ಜಪಾನ್ ನಾಗರಿಕ ಅದೃಷ್ಟವಂತ ಎನ್ನುತ್ತಿದ್ದಾರೆ ಪೊಲೀಸರು. ಏಕೆಂದರೆ, ವಾಚ್ ಕದ್ದವನು ಓಡಿಹೋಗುತ್ತಾ ತನ್ನ ಮೊಬೈಲ್ ಫೋನ್ ಬೀಳಿಸಿಕೊಂಡಿದ್ದಾನೆ. ಈಗ ಅದರ ಆಧಾರದಲ್ಲಿ ತನಿಖೆಯನ್ನು ಆರಂಭಿಸಲಾಗಿದೆ.

English summary
Japan national watch worth Rs 5 crore theft by thieve in Paris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X