ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಚಿನಲ್ಲಿ ರಾತ್ರಿ ನೀರಿಗಿಳಿದವರ ನೋಡಿ ಸಂತಸಪಟ್ಟ ಸಿಎಂ

|
Google Oneindia Kannada News

ಪಣಜಿ, ಮೇ 13: ಕೊರೊನಾವೈರಸ್ ಸೋಂಕಿನ ದೆಸೆಯಿಂದ ಪ್ರವಾಸಿಗರನ್ನು ಮಿಸ್ ಮಾಡಿಕೊಳ್ಳುತ್ತಿರುವ ಗೋವಾದಲ್ಲಿ ಕಳೆದ ರಾತ್ರಿ ನಡೆದ ಘಟನೆಯನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಂಚಿಕೊಂಡಿದ್ದಾರೆ.

ರಾತ್ರಿ ವೇಳೆ ಮೊರ್ಜಿಂ ಬೀಚಿನಲ್ಲಿ ನೀರಿಗಿಳಿದವರನ್ನು ನೋಡಿದ ಸಿಎಂ, ವಿಡಿಯೋವನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಬೀಚಿನಲ್ಲಿ ಓಡಾಡಲು ನಿರ್ಬಂಧವಿದೆ. ಆದರೆ ಇದು ಅಲ್ಲಿರುವ ಪುಟಾಣಿ ಆಮೆಗಳಿಗೆ ವರವಾಗಿ ಪರಿಣಮಿಸಿದೆ.

7 ದಿನಗಳಲ್ಲಿ 6000 ಕಿ.ಮೀ ಕ್ರಮಿಸಿದ ಈತ ಅಸಾಮಾನ್ಯ!7 ದಿನಗಳಲ್ಲಿ 6000 ಕಿ.ಮೀ ಕ್ರಮಿಸಿದ ಈತ ಅಸಾಮಾನ್ಯ!

ಇದು ಆಮೆ ಮರಿಗಳು ಕಡಲು ಸೇರುವ ಋತುವಾಗಿದ್ದು, ಆಮೆಗಳನ್ನು ಸಂರಕ್ಷಿಸಲು ಡಾ. ಪ್ರಮೋದ್ ಸಾವಂತ್ ಸೂಚನೆ ನೀಡಿದ್ದರು.

Watch: Turtles emerge from next at Goa beach

ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕೆಲವು ಪ್ರದೇಶಗಳನ್ನು ಸಂರಕ್ಷಿತ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ್ದಾರೆ. ಉತ್ತರ ಗೋವಾ ಜಿಲ್ಲೆಯ ಮಾಂಡ್ರೆಮ್, ದಕ್ಷಿಣ ಗೋವಾದ ಗಲ್ಜಿಬಾಗ್, ಅಗೋಂಡಾ ಪ್ರದೇಶಗಳಲ್ಲಿ ಹೆಚ್ಚಾಗಿ ಪುಟ್ಟ ಆಮೆ ಮರಿಗಳು ಸಮುದ್ರ ಸೇರುವ ದೃಶ್ಯ ಕಂಡು ಬಂದಿದೆ.

ಮಾಸ್ಕ್‌ ಹಾಕದಿದ್ದರೆ, ದಿನಸಿ, ಪೆಟ್ರೋಲ್ ನೀಡುವುದಿಲ್ಲ!ಮಾಸ್ಕ್‌ ಹಾಕದಿದ್ದರೆ, ದಿನಸಿ, ಪೆಟ್ರೋಲ್ ನೀಡುವುದಿಲ್ಲ!

ಸೂರ್ಯಾಸ್ತದ ನಂತರ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಈ ಆಮೆಗಳು ಸಮುದ್ರ ಸೇರಿ ಈಜಿಕೊಂಡು ತಮ್ಮ ಉಭಯವಾಸಿ ಪ್ರಕೃತಿಗೆ ತಕ್ಕಂತೆ ಬದುಕುತ್ತವೆ. ಆದರೆ, ಎಷ್ಟೋ ಸಮಯ ಸಮುದ್ರ ಸೇರುವುದರೊಳಗೆ ಮನುಷ್ಯ, ನಾಯಿ ಇತರೆ ಪ್ರಾಣಿಗಳ ಕಣ್ಣಿಗೆ ಬಿದ್ದು, ಪ್ರಾಣ ಕಳೆದುಕೊಳ್ಳುವುದು ಮಾಮೂಲಿಯಾಗಿತ್ತು. ಆದರೆ, ಈಗ ಲಾಕ್ಡೌನ್ ವರದಾನವಾಗಿದ್ದು, ಜೊತೆಗೆ ಸಿಎಂ ಮಾರ್ಗದರ್ಶನದಂತೆ ಸಂರಕ್ಷಣೆಯೂ ಸಾಂಗವಾಗಿ ಸಾಗಿದೆ.

ಗೋವಾದ ಮೋರ್ಜಿಂ, ಮಾಂಡ್ರೆಂ, ಅಗೊಂಡಾ, ಗಲ್ಜಿ ಬಾಗ್ ಬೀಚ್ ಗಳಲ್ಲಿ ಈಗ ಈ ಪ್ರಕೃತಿಯ ಅದ್ಭುತ ದೃಶ್ಯ ಕಂಡು ಬಂದಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಕಳೆದ ವಾರ ನೇತ್ರಾವಳಿ ವನ್ಯಜೀವಿ ರಕ್ಷಿತಾರಣ್ಯದಲ್ಲಿ ಕಪ್ಪು ಚಿರತೆ ಕಾಣಿಸಿದ್ದನ್ನು ಟ್ವೀಟ್ ಮಾಡಿ ಸಿಎಂ ಸಂಭ್ರಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Goa Chief Minister Pramod Sawant posted a video clip of Olive Ridley turtle hatchlings running on the state's Morjim beach after emerging from their nest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X