ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಗೆ ಒಳ್ಳೆಯ ಪಾಠ: ಪರಿಕ್ಕರ್ ಮಗ ವಾಗ್ದಾಳಿ

|
Google Oneindia Kannada News

ಪಣಜಿ, ನವೆಂಬರ್ 15: ರಫೇಲ್ ಯುದ್ಧ ವಿಮಾನದ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಗುರುವಾರ ಪ್ರಕಟಿಸಿದ ತೀರ್ಪು ರಾಹುಲ್ ಗಾಂಧಿ ಅವರಿಗೆ ಒಳ್ಳೆಯ ಪಾಠ ಎಂದು ಗೋವಾದ ಮಾಜಿ ಮುಖ್ಯಮಂತ್ರಿ, ದಿ. ಮನೋಹರ್ ಪರಿಕ್ಕರ್ ಅವರ ಮಗ ಉತ್ಪಲ್ ಪರಿಕ್ಕರ್ ಹೇಳಿದ್ದಾರೆ.

ರಫೇಲ್ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಮತ್ತೆ ಕ್ಲೀನ್ ಚಿಟ್ರಫೇಲ್ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಮತ್ತೆ ಕ್ಲೀನ್ ಚಿಟ್

ರಫೇಲ್ ಯುದ್ಧ ವಿಮಾನದ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ರಾಹುಲ್ ಗಾಂಧಿ ಮತ್ತು ವಿರೋಧಪಕ್ಷದ ಇತರರು ಆರೋಪಿಸಿದ್ದರು. ಈ ಕುರಿತಾದ ಮರುಪರಿಶೀಲನಾ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಉತ್ಪಲ್ ಪರಿಕ್ಕರ್ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಚೌಕಿದಾರ್ ಚೋರ್ ಹೇಳಿಕೆ: ರಾಹುಲ್ ಗಾಂಧಿಗೆ ಸುಪ್ರೀಂ ತರಾಟೆಚೌಕಿದಾರ್ ಚೋರ್ ಹೇಳಿಕೆ: ರಾಹುಲ್ ಗಾಂಧಿಗೆ ಸುಪ್ರೀಂ ತರಾಟೆ

'ರಫೇಲ್ ತೀರ್ಪು ಹೊರಬಿದ್ದಿದೆ. ಇದು ರಾಹುಲ್ ಗಾಂಧಿ ಅವರಿಗೆ ಉತ್ತಮ ಕಲಿಕೆಯ ಅನುಭವ ಎಂದು ನಾನು ಭಾವಿಸುತ್ತೇನೆ. ಈ ವಿಚಾರದಲ್ಲಿ ಅವರು ಎಲ್ಲ ರೀತಿಯ ಕೆಟ್ಟ ರಾಜಕೀಯ ಆಟವನ್ನು ಆಡಿದ್ದರು. ಅದೇ ರೀತಿ ರಾಜಕೀಯಕ್ಕಾಗಿಯೇ ಅನಾರೋಗ್ಯಪೀಡಿತರಾಗಿದ್ದ ನನ್ನ ತಂದೆಯನ್ನು ನೋಡಲು ಬಂದಿದ್ದ ಭೇಟಿಯನ್ನು ಬಳಸಿಕೊಂಡಿದ್ದರು' ಎಂದು ಉತ್ಪಲ್ ಆರೋಪಿಸಿದ್ದಾರೆ.

Utpal Parrikar Slams Rahul Gandhi After Rafale Deal Case Judgement

ರಫೇಲ್ ಯುದ್ಧವಿಮಾನ ಒಪ್ಪಂದದ ಆಳ-ಅಗಲದ ಸಂಪೂರ್ಣ ಚಿತ್ರಣ!ರಫೇಲ್ ಯುದ್ಧವಿಮಾನ ಒಪ್ಪಂದದ ಆಳ-ಅಗಲದ ಸಂಪೂರ್ಣ ಚಿತ್ರಣ!

'ಇಂಗ್ಲೆಂಡ್ ಮೂಲದ ಆಫ್‌ಸೆಟ್ ಗುತ್ತಿಗೆದಾರರೊಬ್ಬರೊಂದಿಗೆ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದರು. ದೋಕ್ಲಾಂ ಬಿಕ್ಕಟ್ಟಿನ ವೇಳೆ ಎದುರಾಳಿ ದೇಶದ (ಚೀನಾ) ರಾಯಭಾರಿಯನ್ನು ರಹಸ್ಯವಾಗಿ ಭೇಟಿಯಾಗಿದ್ದರು ಎಂದು ಮಾಧ್ಯಮ ವರದಿಗಳು ಹೇಳಿವೆ. ಇವುಗಳನ್ನು ನಂಬುವುದಾದರೆ ಇಲ್ಲಿ ಕೈಗಾರಿಕಾ ಬೇಹುಗಾರಿಕೆ ನಡೆಸಿದ್ದ ವರದಿಗಳು ಪ್ರಕಟವಾಗಿದ್ದವು. ದೋಕ್ಲಾಂ ಬಿಕ್ಕಟ್ಟಿನ ಸಂದರ್ಭದಲ್ಲಿ ಕಡು ವಿರೋಧಿ ದೇಶದೊಂದಿಗೆ ನಡೆದಿದೆ ಎಂಬ ಅನುಮಾನ ಮೂಡುತ್ತದೆ. ಆದರೆ ಯಾವುದೇ ಪುರಾವೆಗಳು ಇಲ್ಲದ ಸಂಶಯದ ಲಾಭವನ್ನು ಅವರಿಗೆ ಬಿಟ್ಟುಬಿಡುತ್ತೇನೆ. ಇವುಗಳಿಂದ ಅವರು ಪಾಠ ಕಲಿತಿರಬಹುದು ಎಂದು ನಂಬುತ್ತೇನೆ' ಎಂಬುದಾಗಿ ಉತ್ಪಲ್ ಹೇಳಿದ್ದಾರೆ.

English summary
Former CM of Goa Manohar Parrikar's son Utpal Parrikar on Thursday slams Rahul Gandhi after Supreme Court gave clean chit to government in Rafale deal case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X