• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಬುಲೆನ್ಸ್‌ನಲ್ಲಿ ಹೆರಿಗೆ: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

|
Google Oneindia Kannada News

ಪಣಜಿ, ಏಪ್ರಿಲ್ 27: ಗೋವಾದಲ್ಲಿ 108 ಆಂಬುಲೆನ್ಸ್‌ನಲ್ಲಿ ಹೆರಿಗೆಯಾಗಿದ್ದು, ಅವಳಿ ಮಕ್ಕಳಿಗೆ ತಾಯಿ ಜನ್ಮ ನೀಡಿದ್ದಾರೆ. ಗೋವಾ ಮುಖ್ಯಮಂತ್ರಿ ವೈದ್ಯಕೀಯ ಸಿಬ್ಬಂದಿ ಕೆಲಸವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೋವಾದ Assonora ಎಂಬಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರನ್ನು ಹೆರಿಗೆಗೆಂದು ಆಸ್ಪತ್ರೆಗೆ 108 ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಮಹಿಳೆಗೆ ಹೆರಿಗೆ ನೋವು ಹೆಚ್ಚಾಗಿದೆ. ಅಲ್ಲಿದ್ದ ಸ್ಟಾಫ್ ನರ್ಸ್ ನಿಲಿಮಾ ಸವಂತ್ ಆಂಬುಲೆನ್ಸ್‌ನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಅವರ ಸಹಾಯಕ್ಕೆ ಸೀಮಾ ಹಾಗೂ ಶ್ರೀತಾನ್ ಬಂದಿದ್ದಾರೆ.

ತನ್ನೂರಿನ ಜನರಿಗೆ ಕೊರೊನಾ ಬರಬಾರದು: ಬಾಲಕಿಯ ದೊಡ್ಡತನ ತನ್ನೂರಿನ ಜನರಿಗೆ ಕೊರೊನಾ ಬರಬಾರದು: ಬಾಲಕಿಯ ದೊಡ್ಡತನ

ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಕ್ಕಳು ತಾಯಿ ಇಬ್ಬರು ಆರೋಗ್ಯವಾಗಿ ಇದ್ದಾರೆ. ಮಗು ಮುಖ ನೋಡಿ ತಾಯಿ ಹಾಗೂ ಆಂಬುಲೆನ್ಸ್‌ನಲ್ಲಿ ಇದ್ದ ಸಿಬ್ಬಂದಿ ಖುಷಿಯಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ''108 ಆಂಬ್ಯುಲೆನ್ಸ್‌ಗಳು ಪ್ರಾರಂಭದಿಂದಲೂ ರಾಜ್ಯದಲ್ಲಿ ಆರೋಗ್ಯ ರಕ್ಷಣೆಯನ್ನು ಬಲಪಡಿಸುತ್ತಿವೆ. ಅವರ ವೃತ್ತಿಪರ ಚಿಕಿತ್ಸೆ ಮತ್ತು ಸಮರ್ಪಣೆ ಶ್ರೇಷ್ಠವಾಗಿದೆ. ಈ ಯಶಸ್ವಿ ಹೆರಿಗೆಯಲ್ಲಿ 108 ಸಿಬ್ಬಂದಿಗೆ ನಾನು ಧನ್ಯವಾದ ಮತ್ತು ಅಭಿನಂದನೆ ಸಲ್ಲಿಸುತ್ತೇನೆ.'' ಎಂದು ಬರೆದುಕೊಂಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಸಾಕಷ್ಟು ಸಂಖ್ಯೆಯ ಜನರು ಟ್ವೀಟ್ ಮಾಡಿ ವೈದ್ಯಕೀಯ ಸಿಬ್ಬಂದಿಯ ವೃತ್ತಿಪರತೆಗೆ ಚಪ್ಪಾಳೆ ಹೊಡೆದಿದ್ದಾರೆ.

English summary
Twins were successfully delivered in 108 ambulance by Valpoi staff nurse in Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X