ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಚುನಾವಣೆ: ಟೆನ್ನಿಸ್‌ ತಾರೆ ಲಿಯಾಂಡರ್‌ ಪೇಸ್‌ ಟಿಎಂಸಿ ಸೇರ್ಪಡೆ

|
Google Oneindia Kannada News

ಪಣಜಿ, ಅಕ್ಟೋಬರ್‌ 29: ಪಂಚರಾಜ್ಯಗಳಲ್ಲಿ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಗೋವಾದಲ್ಲಿಯೂ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ನಡುವೆ ಹಿರಿಯ ಟೆನಿಸ್‌ ತಾರೆ ಲಿಯಾಂಡರ್‌ ಪೇಸ್‌ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಶುಕ್ರವಾರ ಸೇರ್ಪಡೆ ಆಗಿದ್ದಾರೆ.

ಗೋವಾ ರಾಜ್ಯಕ್ಕೆ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿದ್ದು, ದೀದಿ ಸಮ್ಮುಖದಲ್ಲೇ ಟೆನಿಸ್‌ ತಾರೆ ಲಿಯಾಂಡರ್‌ ಪೇಸ್‌, ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದಾರೆ. ಇನ್ನು ಇಂದು ಬಾಲಿವುಡ್ ​ ನಟಿ ನಫೀಸಾ ಅಲಿ ಮತ್ತು ಮೃಣಾಲಿನಿ ದೇಶಪ್ರಭು ಕೂಡಾ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ.

'ಗೋವಾ ಚುನಾವಣೆಯಲ್ಲಿ ಟಿಎಂಸಿ ಉತ್ತಮವಾಗಿ ಸ್ಪರ್ಧಿಸಲಿದೆ': ಬಾಬುಲ್‌'ಗೋವಾ ಚುನಾವಣೆಯಲ್ಲಿ ಟಿಎಂಸಿ ಉತ್ತಮವಾಗಿ ಸ್ಪರ್ಧಿಸಲಿದೆ': ಬಾಬುಲ್‌

ಲಿಯಾಂಡರ್‌ ಪೇಸ್‌ 48 ವರ್ಷ ವಯಸ್ಸಾಗಿದ್ದು, 2020ರಲ್ಲಿ ಟೆನ್ನಿಸ್​​ನಿಂದ ನಿವೃತ್ತಿ ಹೊಂದಿದ್ದಾರೆ. ಇನ್ನು ಟಿಎಂಸಿಗೆ ಸೇರ್ಪಡೆ ಆದ ನಂತರ ಮಾತನಾಡಿದ ಲಿಯಾಂಡರ್‌ ಪೇಸ್‌, "ನಾನು ಟೆನ್ನಿಸ್‌ನಿಂದ ನಿವೃತ್ತಿ ಹೊಂದಿದ್ದೇನೆ. ಆದ್ದರಿಂದ ಇನ್ನು ಮುಂದೆ ರಾಜಕೀಯ ಎಂಬ ವಾಹನವನ್ನು ಏರಿ ನಾನು ಮುಂದೆ ಜನರ ಸೇವೆಯನ್ನು ಮಾಡಲು ಮುಂದಾಗಿದ್ದೇನೆ. ಮಮತಾ ಬ್ಯಾನರ್ಜಿ ನಿಜಕ್ಕೂ ಚಾಂಪಿಯನ್‌," ಎಂದು ಹೇಳಿದ್ದಾರೆ.

Tennis star Leander Paes joins TMC in Goa Ahead of 2022 elections

ಗೋವಾದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಗೋವಾದಲ್ಲಿ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿದೆ. ಗೋವಾದಲ್ಲಿ ಮುಂದಿನ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯ ಟಿಎಂಸಿ ಕೂಡಾ ಸ್ಪರ್ಧಿಸಲು ಸಜ್ಜಾಗಿದೆ. ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಟಿಎಂಸಿಯು ಎಲ್ಲಾ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಗುರುವಾರದಿಂದ ಗೋವಾದಲ್ಲಿ ಪ್ರವಾಸವನ್ನು ಆರಂಭ ಮಾಡಿದ್ದಾರೆ. ಶನಿವಾರ ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.

ಎಎಪಿ, ಟಿಎಂಸಿ ಗೋವಾ ಚುನಾವಣೆಯಲ್ಲಿ ಬರೀ 'ಕನಿಷ್ಠ ಆಟಗಾರರು'ಎಎಪಿ, ಟಿಎಂಸಿ ಗೋವಾ ಚುನಾವಣೆಯಲ್ಲಿ ಬರೀ 'ಕನಿಷ್ಠ ಆಟಗಾರರು'

ಶುಕ್ರವಾರ ಗೋವಾ ರಾಜಧಾನಿ ಪಣಜಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ನನಗೆ ಗೋವಾದಲ್ಲಿ ಅಧಿಕಾರ ಬೇಡ. ಇಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ನಾನು ಇಲ್ಲಿಗೆ ಬಂದಿಲ್ಲ. ಆದರೆ ನಾವು ಇಲ್ಲಿ ಬಿಜೆಪಿ ಸರ್ಕಾರ ದಾದಾಗಿರಿ ನಡೆಸಲು ಮಾತ್ರ ಬಿಡುವುದಿಲ್ಲ. ನಾನು ಇಲ್ಲಿನ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇಲ್ಲಿಗೆ ಬಂದಿದ್ದೇನೆ," ಎಂದು ತಿಳಿಸಿದರು.

ಗೋವಾದಲ್ಲಿ ಕಬಂದ ಬಾಹು ಚಾಚುತ್ತಿರುವ ಟಿಎಂಸಿ

ಅಕ್ಟೋಬರ್‌ 24 ರಂದು ಗೋವಾದಲ್ಲಿ ಸುಮಾರು 300 ಜನರು ತೃಣಮೂಲ ಕಾಂಗ್ರೆಸ್‌ ಅನ್ನು ಸೇರ್ಪಡೆಗೊಂಡಿದ್ದಾರೆ. ಪಣಜಿ, ನಾವೆಲಿಮ್ ಮತ್ತು ಸಾಂಗೇಮ್‌ನಲ್ಲಿ ಕಾರ್ಯಕ್ರಮಗಳು ನಡೆದಿದ್ದು 300 ರಷ್ಟು ಜನರು ತೃಣಮೂಲ ಕಾಂಗ್ರೆಸ್‌ ಜೊತೆಯಾಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶನಿವಾರ ನವೆಲಿಮ್‌ನಲ್ಲಿ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ ಲುಯಿಜಿನ್ಹೊ ಫಲೈರೊ ಸಮ್ಮುಖದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಕಾನ್ಸಿಕಾವೊ ಪೀಕ್ಸೊಟ್ ಮತ್ತು 170 ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದಂತೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬ್ಲಾಕ್ ಮಟ್ಟದ ನಾಯಕತ್ವವು ಗೋವಾ ಟಿಎಂಸಿ ಅನ್ನು ಸೇರ್ಪಡೆಗೊಂಡಿದೆ," ಎಂದು ಕೂಡಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ನಡುವೆ ರಾಜ್ಯಸಭೆಯ ಟಿಎಂಸಿ ಸಂಸದೀಯ ನಾಯಕ ಡೆರೆಕ್ ಒ'ಬ್ರೇನ್ ಮತ್ತು ಸಾಂಗುಮ್‌ನ ಶಾಸಕ ಪ್ರಸಾದ್ ಗಾಂವ್ಕರ್ ಉಪಸ್ಥಿತಿಯಲ್ಲಿ 150 ಕ್ಕೂ ಹೆಚ್ಚು ಜನರು ಮೊಲ್ಕಾರ್ನೆಮ್ ಪಂಚಾಯತ್‌ನ ಸರ್ಪಂಚ್ ಮತ್ತು ನಾಲ್ಕು ಪಂಚ್‌ಗಳು ಸೇರಿದಂತೆ ಪಕ್ಷಕ್ಕೆ ಸೇರಿದರು.

2022 ರ ಚುನಾವಣೆ: ಉತ್ತರಾಖಂಡ, ಗೋವಾ, ಮಣಿಪುರದ ಆಡಳಿತ ಉಳಿಸಿಕೊಳ್ಳುವತ್ತ ಬಿಜೆಪಿ ಚಿತ್ತ2022 ರ ಚುನಾವಣೆ: ಉತ್ತರಾಖಂಡ, ಗೋವಾ, ಮಣಿಪುರದ ಆಡಳಿತ ಉಳಿಸಿಕೊಳ್ಳುವತ್ತ ಬಿಜೆಪಿ ಚಿತ್ತ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಹೊಗಳಿದ್ದ ಅನುಭವಿ ಗೋವಾ ಕಾಂಗ್ರೆಸ್‌ ನಾಯಕ, ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೆರೊ ಈಗಾಗಲೇ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದು, ಪ್ರಸ್ತುತ ಟಿಎಂಸಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Tennis star Leander Paes joins TMC in Goa Ahead of 2022 Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X