ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ವಿರೋಧ; ಕ್ಯಾಸಲ್ ರಾಕ್- ತಿನೈ ಘಾಟ್ ಜೋಡಿ ಹಳಿ ಯೋಜನೆ ಸ್ಥಗಿತ

|
Google Oneindia Kannada News

ಪಣಜಿ, ನವೆಂಬರ್ 06 : ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ಕ್ಯಾಸಲ್ ರಾಕ್-ತಿನೈ ಘಾಟ್ ನಡುವಿನ ಜೋಡಿ ಹಳಿ ನಿರ್ಮಾಣ ಯೋಜನೆಯನ್ನು ಸ್ಥಗಿತಗೊಳಿಸಿದೆ. ರಾಷ್ಟ್ರೀಯ ಹೆದ್ದಾರಿ 4ರ ಅಗಲೀಕರಣಕ್ಕೂ ಗೋವಾದ ವಿರೋಧ ವ್ಯಕ್ತಪಡಿಸುತ್ತಿದೆ.

ಗೋವಾದ ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ಕೇಂದ್ರ ಮತ್ತು ತಾಜ್ಯ ಸರ್ಕಾರಗಳು ಗೋವಾ ಮೂಲಕ ಅದಿರು ಸಾಗಣೆ ಮಾಡಲು ಜೋಡಿ ಹಳಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದವು. ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದವು.

ಗೋವಾ ಚುನಾವಣೆ; ಎನ್‌ಸಿಪಿ ಪಕ್ಷದಿಂದ ಮಹತ್ವದ ಘೋಷಣೆ ಗೋವಾ ಚುನಾವಣೆ; ಎನ್‌ಸಿಪಿ ಪಕ್ಷದಿಂದ ಮಹತ್ವದ ಘೋಷಣೆ

ನೈಋತ್ಯ ರೈಲ್ವೆ ಕ್ಯಾಸಲ್ ರಾಕ್ ಮತ್ತು ತಿನೈ ಘಾಟ್ ನಿಲ್ದಾಣಗಳ ನಡುವಿನ ಜೋಡಿ ಹಳಿ ಕಾಮಗಾರಿಯನ್ನು ಮುಂದಿನ ಆದೇಶದ ತನಕ ತಡೆ ಹಿಡಿಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ಯೋಜನೆ ವಿರೋಧ ಮಾಡುತ್ತಿದ್ದವರಿಗೆ ಜಯ ಸಿಕ್ಕಿದೆ.

ಮಹದಾಯಿ; ಕರ್ನಾಟಕದ ವಿರುದ್ಧ ಸುಪ್ರೀಂಗೆ ಗೋವಾ ಅರ್ಜಿ ಮಹದಾಯಿ; ಕರ್ನಾಟಕದ ವಿರುದ್ಧ ಸುಪ್ರೀಂಗೆ ಗೋವಾ ಅರ್ಜಿ

SWR Stopped Castle Rock And Tinai Ghat Double Line Work

ದಕ್ಷಿಣ ಗೋವಾದ ಮರ್ಗೋದಲ್ಲಿ ರಾಜ್ಯದ ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದವು. ಇದನ್ನು ತಿಳಿದು ಯೋಜನೆಯ ಕಾಮಗಾರಿಗೆ ತಡೆ ನೀಡಲಾಗಿದೆ. ಈ ವಾರ ಕೆಲವು ಗಂಟೆಗಳ ತನಕ ರೈಲು ಮಾರ್ಗ ಬಂದ್ ಮಾಡಿಯೂ ಪ್ರತಿಭಟನೆ ಮಾಡಲಾಗಿತ್ತು.

ಬೆಂಗಳೂರು ಸಬ್ ಅರ್ಬನ್ ರೈಲು; ವೆಚ್ಚ ಹಂಚಿಕೆ ಲೆಕ್ಕ ಬೆಂಗಳೂರು ಸಬ್ ಅರ್ಬನ್ ರೈಲು; ವೆಚ್ಚ ಹಂಚಿಕೆ ಲೆಕ್ಕ

ಗೋವಾ ಪ್ರದೇಶ ರಾಜ್ಯಾಧ್ಯಕ್ಷ ಗಿರೀಶ್ ಚೋಡಂಕಾರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ರಾಷ್ಟ್ರೀಯ ಹೆದ್ದಾರಿ 4ರ ಅಗಲೀಕರಣ ಮತ್ತು ಜೋಡಿ ಹಳಿ ನಿರ್ಮಾಣ ವಿಚಾರದಲ್ಲಿ ಗೋವಾದ ಜನರು ಒಂದಾಗಿದ್ದಾರೆ. ಅದಿರು ಸಾಗಣೆಯಿಂದಾಗಿ ಕರ್ನಾಟಕದ ಕೆಲವು ಕಂಪನಿಗಳಿಗೆ ಉಪಯೋಗವಾಗಲಿದೆ. ಇದಕ್ಕಾಗಿ ನಮ್ಮ ರಾಜ್ಯದ ಜನರು ಏಕೆ ಕಷ್ಟ ಅನುಭವಿಸಬೇಕು?" ಎಂದು ಪ್ರಶ್ನೆ ಮಾಡಿದ್ದಾರೆ.

ಜೋಡಿ ಹಳಿ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ವಿದ್ಯುತ್ ಯೋಜನೆಗಾಗಿ ಸುಮಾರು 50 ಸಾವಿರ ಮರಗಳನ್ನು ಕಡಿಯಲಾಗುತ್ತದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಯೋಜನೆಗೆ ಈಗಾಗಲೇ ಒಪ್ಪಿಗೆ ನೀಡಿವೆ.

English summary
South western railway stopped the double line project between Castle Rock and Goa Tinai Ghat stations. Opposition party's and various organizations of Goa opposed for project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X