ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾದ ಮಾಂಸ ತಿನ್ನುವ ಹಸುಗಳಿಗೆ ಸೂಕ್ತ ಚಿಕಿತ್ಸೆ: ಮೈಕಲ್ ಲೊಬೊ

|
Google Oneindia Kannada News

ಪಣಜಿ, ಅಕ್ಟೋಬರ್ 21: ಗೋವಾದ ಬೀದಿ ದನಗಳು ಮಾಂಸಾಹಾರ ಸೇವಿಸುವ ಸುದ್ದಿ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಮಾಂಸಾಹಾರಿಗಳಾಗಿ ಪರಿವರ್ತನೆಗೊಂಡಿರುವ ಹಸುಗಳ ಬಗ್ಗೆ ತ್ಯಾಜ್ಯ ನಿರ್ವಹಣಾ ಸಚಿವ ಮೈಕಲ್ ಲೊಬೊ ಪ್ರತಿಕ್ರಿಯಿಸಿದ್ದಾರೆ.

ಕಲಂಗೂಟ್, ಕಾಂಡೊಲಿಮ್ ಪ್ರದೇಶದಲ್ಲಿ ರಸ್ತೆ ಬದಿ ಎಸೆಯಲಾಗಿದ್ದ ಚಿಕನ್, ಮೀನು ತ್ಯಾಜ್ಯಗಳನ್ನು ಅಲ್ಲಿನ ಬೀದಿ ದನಗಳು ತಿನ್ನುತ್ತಿರುವ ಬಗ್ಗೆ ವರದಿಗಳು ಬಂದಿವೆ ಎಂದು ಲೊಬೊ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ, ವಿಚಾರಣೆಗೆ ಆದೇಶಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ, ವಿಚಾರಣೆಗೆ ಆದೇಶ

ಕಲಂಗೂಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರೂ ಆಗಿರುವ ಸಚಿವ ಲೊಬೊ ಮಾತನಾಡಿ, ಆ ಪ್ರದೇಶದಲ್ಲಿ ಸುಮಾರು 76 ಬಿಡಾಡಿ ದನಗಳಿವೆ, ಅವುಗಳನ್ನು ಹತ್ತಿರದ ಗೋಶಾಲೆಗೆ ಸೇರಿಸಲಾಗಿತ್ತು. ಆದರೆ, ಹಿಂಡಿ, ಬೂಸಾ, ಹುಲ್ಲು ತಿನ್ನುವುದನ್ನು ಬಿಟ್ಟು ಮಾಂಸಾಹಾರದ ತ್ಯಾಜ್ಯವನ್ನು ಸೇವಿಸತೊಡಗಿವೆ. ಈ ಬಗ್ಗೆ ಪಶುವೈದ್ಯರ ಬಳಿ ಮಾತನಾಡಿದ್ದೇನೆ, ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದಿದ್ದಾರೆ.

Stray Cattle In Goa Turning Non-Vegetarian, Says Minister Michael Lobo

ಮಾಯೇಂ ಗ್ರಾಮದಲ್ಲಿರುವ ಗೋಮಾಂತಕ್ ಗೋಸೇವಕ್ ಮಹಾಸಂಗ್ ನಡೆಸುವ ಗೋಶಾಲೆಯಲ್ಲಿದ್ದ ದನಗಳು ಈ ರೀತಿ ತಮ್ಮ ಆಹಾರ ಪದ್ಧತಿ ಬದಲಾಯಿಸುವುದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬೀಚ್ ಗಳಿಗೆ ಹೆಸರುವಾಸಿಯಾಗಿರುವ ಗೋವಾದಲ್ಲಿ ಕಲಂಗೂಟ್ ಬೀಚ್ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ದೇಶ-ವಿದೇಶಗಳಿಂದ ಅಸಂಖ್ಯಾತ ಪ್ರವಾಸಿಗರು ಈ ಪ್ರದೇಶಕ್ಕೆ ಬರುತ್ತಾರೆ. ಈ ಪ್ರದೇಶದಲ್ಲಿ ಬೀದಿ ದನಗಳ ಸಂಖ್ಯೆ ಅಧಿಕವಾಗಿದ್ದು, 2013ರಲ್ಲಿ ಇಲ್ಲಿನ ಸರ್ಕಾರ ವಿಶೇಷ ಯೋಜನೆ ರೂಪಿಸಿ, ದನಗಳ ರಕ್ಷಣೆ ಹಾಗೂ ಗ್ರಾಮ ಪಂಚಾಯಿತಿಗೆ ದಂಡ ವಿಧಿಸುವ ಪದ್ಧತಿ ಅಳವಡಿಸಿಕೊಂಡಿದೆ.

English summary
Stray cattle in Goa's tourism savvy coastal belt, which includes popular beach villages like Calangute and Candolim, have "turned non-vegetarian" and only eat scraps of chicken and fried fish, claims the state's Garbage Management Minister Michael Lobo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X