ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹತ್ಯೆ, ಈವರೆಗೆ ಐವರ ಬಂಧನ

|
Google Oneindia Kannada News

ಪಣಜಿ, ಆಗಸ್ಟ್ 28: ನಟಿ ಹಾಗೂ ಹರ್ಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದಲ್ಲಿ ಮತ್ತೊಬ್ಬ ಡ್ರಗ್ ಸರಬರಾಜು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ ಐವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ

ನಟಿ ಸೋನಾಲಿ ಫೋಗಟ್ ಅವರ ಸಹಚರರಿಗೆ ಡ್ರಗ್ಸ್ ಸರಬರಾಜು ಮಾಡಿದ ಆರೋಪ ಹೊತ್ತಿರುವ ಮತ್ತೊಬ್ಬ ಡೀಲರ್‌ಗೆ ಡ್ರಗ್ಸ್ ಸರಬರಾಜು ಮಾಡಿದ ಆರೋಪದ ಮೇಲೆ ಡ್ರಗ್ ಡೀಲರ್ ಅನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Breaking: ಸೋನಾಲಿ ಫೋಗಟ್‌ರಿಂದ ಬಲವಂತದ ಡ್ರಗ್ಸ್ ಸೇವನೆ-ಪೊಲೀಸರುBreaking: ಸೋನಾಲಿ ಫೋಗಟ್‌ರಿಂದ ಬಲವಂತದ ಡ್ರಗ್ಸ್ ಸೇವನೆ-ಪೊಲೀಸರು

ಫೋಗಟ್‌ನ ಆಪ್ತ ಸಹಾಯಕರು ಮತ್ತು ಪ್ರಮುಖ ಆರೋಪಿಗಳಾದ ಸುಧೀರ್ ಸಗ್ವಾನ್ ಮತ್ತು ಸುಖ್ವಿಂದರ್ ಸಿಂಗ್‌ಗೆ ಡ್ರಗ್ಸ್ ಸರಬರಾಜು ಮಾಡಿದ ಶಂಕೆಯ ಮೇಲೆ ಈಗಾಗಲೇ ಮತ್ತೊಬ್ಬ ಪೆಡ್ಲರ್ ದತ್ತಪ್ರಸಾದ್ ಗಾಂವ್ಕರ್ ಬಂಧನದಲ್ಲಿದ್ದಾನೆ. ಇತನಿಗೆ ರಾಮ, ಅಲಿಯಾಸ್ ರಾಮದಾಸ್ ಮಾಂಡ್ರೇಕರ್ ಡ್ರಗ್ಸ್ ಸರಬರಾಜು ಮಾಡಿದ್ದಾನೆ ಎಂದು ಅಂಜುನಾದ ಉತ್ತರ ಗೋವಾ ಜಿಲ್ಲೆಯ ಪೊಲೀಸರು ಹೇಳಿದ್ದಾರೆ.

Sonali Phogat case :Goa Police arrested a fifth Accused

ಸೋನಾಲಿ ಫೋಗಾಟ್ ಸಾವಿನ ಹಿಂದಿನ ರಾತ್ರಿ ಪಾರ್ಟಿ ಮಾಡುತ್ತಿದ್ದ ರೆಸ್ಟೋರೆಂಟ್‌ನ ಮಾಲೀಕ ಮತ್ತು ಮಾದಕ ವಸ್ತುಗಳ ವ್ಯಾಪಾರಿಯನ್ನು ಶನಿವಾರ ಬಂಧಿಸಲಾಗಿತ್ತು.

ಗುರುವಾರ ಬಂಧಿಸಲಾಗಿರುವ ಹರಿಯಾಣ ಬಿಜೆಪಿ ನಾಯಕಿಯ ಸಹಚರರಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಪ್ರಮುಖ ಆರೋಪಿಗಳಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ವಿರುದ್ಧ ಕೊಲೆ ಆರೋಪ ಹೊರಿಸಿದ್ದರೆ, ರೆಸ್ಟೋರೆಂಟ್ ಮಾಲೀಕರು ಮತ್ತು ಡ್ರಗ್ ಡೀಲರ್ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Sonali Phogat case :Goa Police arrested a fifth Accused

ರೆಸ್ಟೋರೆಂಟ್‌ನ ಸಿಬ್ಬಂದಿ, ಸೋನಾಲಿ ಫೋಗಟ್ ತಂಗಿದ್ದ ರೆಸಾರ್ಟ್, ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ ಆಸ್ಪತ್ರೆ ಮತ್ತು ಆಕೆಯ ಚಾಲಕ ಸೇರಿದಂತೆ ಇದುವರೆಗೆ 25 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸೋಮವಾರದಂದು ಅಂಜುನಾ ಬೀಚ್‌ನಲ್ಲಿರುವ ಪ್ರಸಿದ್ಧ ರೆಸ್ಟೊರೆಂಟ್-ಕಮ್-ನೈಟ್‌ಕ್ಲಬ್ ಕರ್ಲಿಯಲ್ಲಿ ಆರೋಪಿಗಳು ಮೆಥಾಂಫೆಟಮೈನ್ ಡ್ರಗ್ಸ್ (ಮೆಥ್) ಕುಡಿಯುವಂತೆ ಸೋನಾಲಿ ಫೋಗಟ್ ಅವರಿಗೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ಭದ್ರತಾ ಕ್ಯಾಮರಾ ದೃಶ್ಯಗಳು ಮತ್ತು ತಪ್ಪೊಪ್ಪಿಗೆಗಳನ್ನು ಉಲ್ಲೇಖಿಸಿ ಮಾಹಿತಿ ನೀಡಿದ್ದಾರೆ.

ಅದನ್ನು ಕುಡಿದ ನಂತರ ಆಕೆಗೆ ನಡೆಯಲು ಕೂಡ ಸಾಧ್ಯವಾಗಲಿಲ್ಲ. ಹೀಗಾಗಿ ಅವರು ತಂಗಿದ್ದ ಗ್ರ್ಯಾಂಡ್ ಲಿಯೋನಿ ಎಂಬ ಹೋಟೆಲ್‌ಗೆ ಅವರ ಸಹಚರರು ಕರೆದೊಯ್ದರು. ಮರುದಿನ ಬೆಳಿಗ್ಗೆ ಬಿಜೆಪಿ ನಾಯಕಿಯನ್ನು ಸೇಂಟ್ ಆಂಥೋನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಸೋನಾಲಿ ಫೋಗಟ್ ಅವರ ಸಾವನ್ನು ಆರಂಭದಲ್ಲಿ ಹೃದಯಾಘಾತ ಎಂದು ಪರಿಗಣಿಸಲಾಗಿದ್ದರೂ, ಆಕೆಯ ಕುಟುಂಬ ಅದನ್ನು ಒಪ್ಪಲಿಲ್ಲ. ಹೀಗಾಗಿ ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಜೊತೆಗೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಪ್ರಕರಣದಲ್ಲಿ ಒತ್ತಡ ಹಾಕಿದ ನಂತರ ಗೋವಾ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸುವಂತೆ ಕೋರಿ ಗೋವಾಕ್ಕೆ ಪತ್ರ ಬರೆಯುವುದಾಗಿ ಹರ್ಯಾಣ ಸರ್ಕಾರ ಹೇಳಿದೆ. ಚಂಡೀಗಢದಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಫೋಗಟ್ ಕುಟುಂಬ ಭೇಟಿ ಮಾಡಿದ ನಂತರ ಈ ಘೋಷಣೆ ಮಾಡಲಾಗಿದೆ.

2008 ರಿಂದ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಸೋನಾಲಿ ಫೋಗಟ್ 2019 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋಲು ಕಂಡಿದ್ದರು. ಸೋನಾಲಿ ಫೋಗಟ್ ಅವರು ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು.

English summary
Sonali Phogat case : Goa Police arrested a another drug peddler, five people arrested in the case so far. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X