ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ಪಲ್ ಪರಿಕ್ಕರ್ ಎದುರು ಶಿವಸೇನೆ ಅಭ್ಯರ್ಥಿ ಇಲ್ಲ!

|
Google Oneindia Kannada News

ಪಣಜಿ, ಜನವರಿ 23; ಗೋವಾ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಶಿವಸೇನೆ ಪಕ್ಷ 7 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ. ಫೆಬ್ರವರಿ 14ರ ಚುನಾವಣೆಗೆ ಎನ್‌ಪಿಸಿ ಜೊತೆ ಮೈತ್ರಿ ಮಾಡಿಕೊಂಡು ಶಿವಸೇನೆ ಕಣಕ್ಕಿಳಿಯುತ್ತಿದೆ.

ಪಣಜಿ ಕ್ಷೇತ್ರಕ್ಕೆ ಪಕ್ಷ ಶೈಲೇಂದ್ರ ವೆಲಿಂಗ್ಕರ್ ಅಭ್ಯರ್ಥಿ ಎಂದು ಶಿವಸೇನೆ ಘೋಷಣೆ ಮಾಡಿದೆ. ಅಲ್ಲದೇ ಗೋವಾ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಬಯಸಿದರೆ ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ ಎಂದು ಶಿವಸೇನೆ ಹೇಳಿದೆ.

ಗೋವಾ; 36 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಗೋವಾ; 36 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

ಈ ಕುರಿತು ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್, "ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದ ಕಣಕ್ಕಿಳಿಯುವುದಾದರೆ ಶಿವಸೇನೆ ತನ್ನ ಅಭ್ಯರ್ಥಿಯನ್ನು ವಾಪಸ್ ಪಡೆಯಲಿದೆ" ಎಂದು ಹೇಳಿದ್ದಾರೆ.

ಗೋವಾ; ಬಿಜೆಪಿ ಮುಂದೆ ಒಂದು ಆಯ್ಕೆ ಇಟ್ಟ ಉತ್ಪಲ್ ಪರಿಕ್ಕರ್! ಗೋವಾ; ಬಿಜೆಪಿ ಮುಂದೆ ಒಂದು ಆಯ್ಕೆ ಇಟ್ಟ ಉತ್ಪಲ್ ಪರಿಕ್ಕರ್!

Shiv Sena Will Withdraw Candidate Against Utpal Parrikar

ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಸಂಜಯ್ ರಾವತ್, "ಉತ್ಪಲ್ ಪರಿಕ್ಕರ್ ಸ್ಪರ್ಧೆಗೆ ಗೋವಾದ ಬಿಜೆಪಿಯೇತರ ಎಲ್ಲಾ ಪಕ್ಷಗಳು ಬೆಂಬಲ ನೀಡಬೇಕು. ಅವರ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಬಾರದು" ಎಂದು ಕರೆ ನೀಡಿದ್ದರು.

ಗೋವಾ; ಮೂವರು ಬಿಜೆಪಿ ನಾಯಕರು ಪಕ್ಷೇತರರಾಗಿ ಕಣಕ್ಕೆ! ಗೋವಾ; ಮೂವರು ಬಿಜೆಪಿ ನಾಯಕರು ಪಕ್ಷೇತರರಾಗಿ ಕಣಕ್ಕೆ!

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ; ದಿ. ಮನೋಹರ್ ಪರಿಕ್ಕರ್ ಪಣಜಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆದ್ದರಿಂದ ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಕ್ಷೇತ್ರದ ಹಾಲಿ ಶಾಸಕ ಅಟನಸಿಯೋ ಮೊನ್ನೆರ್ರೇಟ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

ಶುಕ್ರವಾರ ಬಿಜೆಪಿ ತೊರೆಯುವುದಾಗಿ ಹೇಳಿಕೆ ನೀಡಿರುವ ಉತ್ಪಲ್ ಪರಿಕ್ಕರ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಗೋವಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಜನವರಿ 28ರ ತನಕ ಅವಕಾಶವಿದೆ.

ಕುತೂಹಲ ಮೂಡಿಸಿದ ಉತ್ಪಲ್ ನಡೆ; ಶುಕ್ರವಾರ ಬಿಜೆಪಿ ಬಿಟ್ಟು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಉತ್ಪಲ್ ಪರಿಕ್ಕರ್ ಘೋಷಣೆ ಮಾಡಿದ್ದರು. ಆದರೆ ಭಾನುವಾರ ಪಿಟಿಐ ಜೊತೆ ಅವರು ಆಡಿರುವ ಮಾತು ಕುತೂಹಲಕ್ಕೆ ಕಾರಣವಾಗಿದೆ.

"ಬಿಜೆಪಿ ತೊರೆಯುವುದು ನನ್ನ ಕಠಿಣ ತೀರ್ಮಾನವಾಗಿತ್ತು. ಈಗಲೂ ನಾನು ಚುನಾವಣಾ ಕಣದಿಂದ ಹಿಂದೆ ಸರಿಯಲು ಸಿದ್ಧ. ಇದಕ್ಕಾಗಿ ಬಿಜೆಪಿ ಪಣಜಿಯಲ್ಲಿ ಒಳ್ಳೆಯ ಅಭ್ಯರ್ಥಿ ಹಾಕಬೇಕು" ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ಪಣಜಿಗೆ ಹಾಲಿ ಶಾಸಕ ಅಟನಸಿಯೋ ಮೊನ್ನೆರ್ರೇಟ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

ಅಟನಸಿಯೋ ಮೊನ್ನೆರ್ರೇಟ್ 2019ರಲ್ಲಿ ನಡೆದ ಪಣಜಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಗೆದ್ದಿದ್ದರು. ಬಳಿಕ ಬಿಜೆಪಿ ಸೇರಿದ್ದಾರೆ. ಅವರ ಮೇಲೆ ಅಪ್ತಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಸೇರಿ ಹಲವು ಕ್ರಿಮಿನಲ್ ಪ್ರಕರಣಗಳಿವೆ ಎಂಬುದು ಉತ್ಪಲ್ ಪರಿಕ್ಕರ್ ವಿರೋಧಕ್ಕೆ ಕಾರಣವಾಗಿದೆ.

ಟಿಎಂಸಿ ಮಾತಿಗೆ ಒಪ್ಪಿದ ರಾವತ್; ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, "ಗೋವಾದಲ್ಲಿ ಬಿಜೆಪಿ ಗೆಲುವು ಸಾಧಿಸಿ ಮತ್ತೆ ಅಧಿಕಾರ ಪಡೆದರೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ" ಎಂದು ಹೇಳಿಕೆ ನೀಡಿದ್ದರು.

ಶಿವಸೇನೆ ನಾಯಕ ಸಂಜಯ್ ರಾವತ್ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. "ಶಿವಸೇನೆ ಮತ್ತು ಎನ್‌ಸಿಪಿ ಕಾಂಗ್ರೆಸ್ ಮುಂದೆ ಚುನಾವಣಾ ಪೂರ್ವ ಮೈತ್ರಿಯ ಆಹ್ವಾನ ಇಟ್ಟಿದ್ದೆವು. ಕಾಂಗ್ರೆಸ್ ಪಕ್ಷ ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ" ಎಂದು ಹೇಳಿದರು.

Recommended Video

Anushka ಜೊತೆ ಮದುವೆಯಾಗಿ ಕ್ರಿಕೆಟ್ ಬದುಕು ಹಾಳುಮಾಡಿಕೊಂಡ Virat Kohli | Oneindia Kannada

"ಕಾಂಗ್ರೆಸ್ ನಾಯಕರಾದ ದಿನೇಶ್ ಗುಂಡೂರಾವ್, ದಿಗಂಬರ್ ಕಾಮತ್ ಭೇಟಿಯಾಗಿ ಕಾಂಗ್ರೆಸ್, ಎನ್‌ಸಿಪಿ, ಜಿಎಫ್‌ಪಿ ಮತ್ತು ಶಿವಸೇನೆ ಮೈತ್ರಿಯ ಪ್ರಸ್ತಾಪ ಮುಂದಿಟ್ಟೆವು. ಪಕ್ಷ ಯಾವುದೇ ಪ್ರತಿಕ್ರಿಯೆ ನೀಡಿಲಿಲ್ಲ. ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ಮಾತನ್ನು ನಾನು ಒಪ್ಪುತ್ತೇನೆ" ಎಂದು ಸಂಜಯ್ ರಾವತ್ ತಿಳಿಸಿದರು.

English summary
Shiv Sena MP Sanjay Raut said that party would withdraw its candidate from Panji seat if Utpal Parrikar decided to contest from the same seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X