ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾದಲ್ಲಿ ಉದ್ಯೋಗ ಸೃಷ್ಟಿಗೆ 500 ಕೋಟಿ ಮೀಸಲು; ಪ್ರಿಯಾಂಕಾ ವಾದ್ರಾ

|
Google Oneindia Kannada News

ಪಣಜಿ, ಫೆಬ್ರವರಿ 07; ಗೋವಾ ವಿಧಾನಸಭೆ ಚುನಾವಣೆಯ ಪ್ರಚಾರದ ಕಾವು ಏರುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ರಾಜ್ಯದಲ್ಲಿ ಸೋಮವಾರ ಪ್ರಚಾರ ನಡೆಸಿದರು. 40 ಸದಸ್ಯ ಬಲದ ಗೋವಾ ವಿಧಾನಸಭೆ ಚುನಾವಣೆ ಫೆಬ್ರವರಿ 14ರಂದು ನಡೆಯಲಿದೆ.

ನೊಮೆಮ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ವಾದ್ರಾ, "ಗೋವಾದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಉದ್ಯೋಗ ಸೃಷ್ಟಿಗೆ ಸರ್ಕಾರದ ನಿಧಿಯಿಂದ 500 ಕೋಟಿ ರೂ. ಗಳನ್ನು ಮೀಸಲಿಡಲಾಗುವುದು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 30ರಷ್ಟು ಮೀಸಲಾತಿ ನೀಡಲಾಗುವುದು" ಎಂದು ಭರವಸೆ ನೀಡಿದರು.

ಗೋವಾ ಚುನಾವಣೆ; ಮಿಚೆಲ್ ಲೋಬೊ ಶ್ರೀಮಂತ ಅಭ್ಯರ್ಥಿ ಗೋವಾ ಚುನಾವಣೆ; ಮಿಚೆಲ್ ಲೋಬೊ ಶ್ರೀಮಂತ ಅಭ್ಯರ್ಥಿ

ಭಾನುವಾರ ಬಿಡುಗಡೆಗೊಂಡ ಗೋವಾ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಅಂಶಗಳ ಬಗ್ಗೆ ಅವರು ಮಾತನಾಡಿದರು. "ಸರ್ಕಾರಿ ಉದ್ಯೋಗ ಹಂಚಿಕೆಯಲ್ಲಿನ ಹಗರಣಗಳನ್ನು ಮುಕ್ತವಾಗಿಸಲು ಸಿಬ್ಬಂದಿ ಆಯ್ಕೆ ಆಯೋಗವನ್ನು ರಚನೆ ಮಾಡಲಾಗುತ್ತದೆ" ಎಂದು ಹೇಳಿದರು.

ಗೋವಾ ಚುನಾವಣೆ; ಅಂತಿಮವಾಗಿ ಕಣದಲ್ಲಿ 301 ಅಭ್ಯರ್ಥಿಗಳು ಗೋವಾ ಚುನಾವಣೆ; ಅಂತಿಮವಾಗಿ ಕಣದಲ್ಲಿ 301 ಅಭ್ಯರ್ಥಿಗಳು

Rs 500 Crore For Employment Generation If Congress Come To Power In Goa Says Priyanka Gandhi

"ಉದ್ಯೋಗ ಸೃಷ್ಟಿಗೆ ಸರ್ಕಾರದ ನಿಧಿಯಿಂದ 500 ಕೋಟಿ ರೂ. ಮೀಸಲಿಡಲಾಗುವುದು. ನ್ಯಾಯ್ ಯೋಜನೆಯಡಿ ದುರ್ಬಲ ವರ್ಗಗಳ ಕುಟುಂಬಗಳಿಗೆ ತಿಂಗಳಿಗೆ 6,000 ರೂ. ನೀಡಲಾಗುವುದು. ಈ ಕ್ರಮದಿಂದ ಕುಟುಂಬಗಳ ಆರ್ಥಿಕತೆಗೆ ಸಹಾಯವಾಗಲಿದೆ" ಎಂದರು.

ಸಮೀಕ್ಷೆ; ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 17 ರಿಂದ 21 ಸೀಟು ಸಮೀಕ್ಷೆ; ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 17 ರಿಂದ 21 ಸೀಟು

"ರಾಜ್ಯದ ಪಣಜಿ ಮತ್ತು ಮಾರ್ಗೋವ್‌ನಲ್ಲಿ ಉದ್ಯೋಗಕ್ಕೆ ತೆರಳುವ ಮಹಿಳೆಯರಿಗಾಗಿ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುತ್ತದೆ. ಮಹಿಳಾ ಪೊಲೀಸ್ ಠಾಣೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ" ಈ ಕುರಿತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೂ ಭರವಸೆ ನೀಡಲಾಗಿದೆ ಎಂದು ತಿಳಿಸಿದರು.

"ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ 80 ರೂ.ಗಿಂತ ಹೆಚ್ಚಾಗಲು ಬಿಡುವುದಿಲ್ಲ. ಉಳಿದ ಮೊತ್ತವನ್ನು ಪಕ್ಷದ ಸರ್ಕಾರವು ಸಬ್ಸಿಡಿ ಮೂಲಕ ನೀಡುತ್ತದೆ" ಎಂದು ಪ್ರಿಯಾಂಕಾ ವಾದ್ರಾ ಭರವಸೆ ನೀಡಿದರು.

"2017ರ ಚುನಾವಣೆ ಬಳಿಕ ಗೋವಾದಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಬಿಜೆಪಿ ಕೆಲವು ಪ್ರಾದೇಶಿಕ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳ ಜೊತೆ ಸೇರಿ ಸರ್ಕಾರ ರಚನೆ ಮಾಡಿತು" ಎಂದರು.

"ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಶೇ 40ರಷ್ಟು ಟಿಕೆಟ್ ಮಹಿಳೆಯರಿಗೆ ನೀಡುತ್ತಿದೆ. ಮಹಿಳೆಯರನ್ನು ರಾಜಕೀಯಕ್ಕೆ ಕರೆತರಲು ನಾನು ಶ್ರಮಪಟ್ಟು ಕೆಲಸ ಮಾಡುತ್ತಿದ್ದೇನೆ" ಎಂದು ಪ್ರಿಯಾಂಕಾ ವಾದ್ರಾ ಹೇಳಿದರು.

"ಶೇ 40ರಷ್ಟು ಟಿಕೆಟ್ ನೀಡುವುದು ನಾವು ನೀಡುತ್ತಿರುವ ಸಹಕಾರವಲ್ಲ. ಶೇ 50ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಮಹಿಳೆಯರು ಸಮಾನ ಅವಕಾಶ ಕೇಳುವುದು ಅವರ ಹಕ್ಕು" ಎಂದು ಪ್ರಿಯಾಂಕಾ ಪ್ರತಿಪಾದಿಸಿದರು.

"ಇಂದು ರಾಜಕೀಯವು ದ್ವೇಷ, ಆಕ್ರೋಶದಿಂದ ತುಂಬಿದೆ. ನೀವು ಚುನಾವಣಾ ಭಾಷಣಗಳನ್ನು ಕೇಳುತ್ತೀರಿ. ಅವುಗಳಲ್ಲಿ 90 ರಷ್ಟು ನಕಾರಾತ್ಮಕ ಅಂಶಗಳಿವೆ. ಅದರಲ್ಲಿ ಯಾವುದೇ ಸಕಾರಾತ್ಮಕ ಭರವಸೆಗಳು ಕಾಣುವುದಿಲ್ಲ. ಮಹಿಳೆಯರು ರಾಜಕೀಯಕ್ಕೆ ಬಂದಾಗ ಧನಾತ್ಮಕತೆಯನ್ನು ತರಬಹುದು ಎಂದು ನಾನು ನಂಬುತ್ತೇನೆ" ಎಂದರು.

ಚುನಾವಣಾ ಪ್ರಚಾರ ಸಭೆಯ ಬಳಿಕ ಪ್ರಿಯಾಂಕಾ ವಾದ್ರಾ ಹಲವು ಕಡೆ ಮನೆ ಮನೆ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು. ಫೆಬ್ರವರಿ 14ರಂದು ಗೋವಾದಲ್ಲಿ ಚುನಾವವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಗೋವಾದ 40 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 37 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಗೋವಾ ಫಾರ್ವರ್ಡ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವ ಪಕ್ಷ ಅವರಿಗೆ 3 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.

ಟಿಎಂಟಿ, ಶೀವಸೇನೆ, ಎನ್‌ಸಿಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಯಸಿದ್ದವು. ಆದರೆ ಸೀಟು ಹಂಚಿಕೆಗೆ ಒಪ್ಪದ ಕಾಂಗ್ರೆಸ್ ಮೈತ್ರಿಕೂಟ ರಚನೆಗೆ ಒಪ್ಪಿಗೆ ಕೊಟ್ಟಿಲ್ಲ. ಗೋವಾ ಚುನಾವಣಾ ಕಣದಲ್ಲಿ ಒಟ್ಟು 301 ಅಭ್ಯರ್ಥಿಗಳಿದ್ದಾರೆ.

English summary
If Congress come to power in Goa Rs 500 crore from the government fund would be allocated for employment generation said Congress general secretary Priyanka Gandhi. Goa elections will be held on February 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X