ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆಯ ಗೋವಾದಲ್ಲಿ ನವೀಕರಿಸಿದ ಹೆಲಿಪ್ಯಾಡ್ ಉದ್ಘಾಟನೆ

|
Google Oneindia Kannada News

ಪಣಜಿ, ಸೆಪ್ಟೆಂಬರ್ 20: ಹಳೆಯ ಗೋವಾದಲ್ಲಿ ನವೀಕರಿಸಿದ ಹೆಲಿಪ್ಯಾಡ್ ಅನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಈಶಾನ್ಯ ವಲಯದ ಅಭಿವೃದ್ಧಿ ಖಾತೆ ಸಚಿವ ಜಿ ಕಿಶನ್‌ ರೆಡ್ಡಿ ಹಾಗೂ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್‌ ಸಾವಂತ್ ಅವರು ಇಂದು ಉದ್ಘಾಟಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವ ಶ್ರೀಪಾದ್ ನಾಯಕ್ ಮತ್ತು ಗೋವಾದ ಉಪ ಮುಖ್ಯಮಂತ್ರಿ ಮನೋಹರ್ ಅಜ್‌ಗಾವೋಂಕರ್‌, ಶಾಸಕರು ಹಾಗೂ ಗೋವಾ ಮತ್ತು ಭಾರತ ಸರಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು, ''ಗೋವಾ ಕೇವಲ ರಾಷ್ಟ್ರೀಯ ಪ್ರವಾಸಿ ತಾಣವಾಗಿ ಮಾತ್ರವಲ್ಲದೆ, ಪ್ರಮುಖ ಅಂತಾರಾಷ್ಟ್ರೀಯ ತಾಣವಾಗಿಯೂ ಹೆಸರುವಾಸಿಯಾಗಿದೆ ಎಂದರು. ಇಸ್ರೇಲ್ ಮಿಲಿಟರಿಯೊಂದಿಗಿನ ತಮ್ಮ ಅನುಭವಗಳನ್ನು ಉಲ್ಲೇಖಿಸಿದ ಸಚಿವರು, ಕಡ್ಡಾಯ ಮಿಲಿಟರಿ ತರಬೇತಿಯ ನಂತರ ಇಸ್ರೇಲ್ ಸೈನಿಕರು ಗೋವಾವನ್ನು ತಮ್ಮ ನೆಚ್ಚಿನ ಪ್ರವಾಸಿ ತಾಣವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಗೋವಾದ ನೈಸರ್ಗಿಕ ಸೌಂದರ್ಯ ಮತ್ತು ಇಲ್ಲಿನ ಕೈಗೆಟುಕುವ ದರಗಳಿಗೆ ಅವರು ಮಾರುಹೋಗಿದ್ದಾರೆ ಎಂದು ಉಲ್ಲೇಖಿಸಿದರು. ಪ್ರವಾಸೋದ್ಯಮ ವಲಯವು ಪ್ರಮುಖ ಉದ್ಯೋಗ ಸೃಷ್ಟಿ ಕ್ಷೇತ್ರವಾಗಿದ್ದು, ಗೋವಾದಲ್ಲಿ ಪ್ರವಾಸೋದ್ಯಮ ವಲಯವನ್ನು ಉತ್ತೇಜಿಸಲು ಮತ್ತು ಆ ಮೂಲಕ ಉದ್ಯೋಗ ಸೃಷ್ಟಿ ಹೆಚ್ಚಿಸಲು ಕೇಂದ್ರ ಸರಕಾರ ಎಲ್ಲಾ ಬೆಂಬಲವನ್ನು ನೀಡುತ್ತಿದೆ'' ಎಂದು ಸಚಿವರು ಹೇಳಿದರು.

ಗೋವಾ ವಿಮೋಚನೆಯ ಅರವತ್ತನೇ ವರ್ಷ

ಗೋವಾ ವಿಮೋಚನೆಯ ಅರವತ್ತನೇ ವರ್ಷ

''ಗೋವಾ ವಿಮೋಚನೆಯ ಅರವತ್ತನೇ ವರ್ಷದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು ಗೋವಾಕ್ಕೆ ಸಾಕಷ್ಟು ಧನಸಹಾಯವನ್ನು ನೀಡಲಿದೆ ಮತ್ತು ಗೋವಾವನ್ನು ಅಂತರರಾಷ್ಟ್ರೀಯ ನಕ್ಷೆಯಲ್ಲಿ ಅಗ್ರ ಪ್ರವಾಸಿ ತಾಣವನ್ನಾಗಿ ಮಾಡುತ್ತದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು. ಕೇಂದ್ರ ಸರಕಾರವು ಸದಾ ಗೋವಾದ ನಾಗರಿಕರ ಬೆಂಬಲಕ್ಕೆ ಇದೆ'' ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂದೇಶವನ್ನೂ ಸಚಿವರು ಗೋವಾ ಜನತೆಗೆ ತಲುಪಿಸಿದರು.

ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್‌ ಸಾವಂತ್

ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್‌ ಸಾವಂತ್

ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್‌ ಸಾವಂತ್ ಅವರು ಮಾತನಾಡಿ, ''ಈ ಹೆಲಿಪ್ಯಾಡ್ ಅನ್ನು 5 ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಿಸಲಾಗಿದೆ ಮತ್ತು ಇದನ್ನು ಸರಕಾರಿ ಮತ್ತು ಖಾಸಗಿ ವಲಯದಿಂದ ಉತ್ತಮವಾಗಿ ಬಳಕೆ ಮಾಡಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವತ್ತ ಸರಕಾರ ಗಮನ ಹರಿಸಿದೆ'' ಎಂದರು.

'ಸ್ವದೇಶ್ ದರ್ಶನ ಕರಾವಳಿ ಸರ್ಕ್ಯೂಟ್ ಥೀಮ್‌'ನ ಭಾಗವಾಗಿ ಈ ಹೆಲಿಪ್ಯಾಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 'ಸ್ವದೇಶ್‌ ದರ್ಶನ ಯೋಜನೆ'ಯು ಥೀಮ್‌ ಆಧಾರಿತ ಪ್ರವಾಸಿ ಸರ್ಕ್ಯೂಟ್‌ಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಪ್ರವಾಸೋದ್ಯಮ ಸಚಿವಾಲಯವು ಪ್ರಾರಂಭಿಸಿದ ಯೋಜನೆಯಾಗಿದೆ. ಈ ಯೋಜನೆಯು ದೇಶದಲ್ಲಿ ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್‌ಗಳ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿದೆ.

ಮೇಕ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಾಣ

ಮೇಕ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಾಣ

'ಸ್ವಚ್ಛ ಭಾರತ ಅಭಿಯಾನ', 'ಸ್ಕಿಲ್‌ ಇಂಡಿಯಾ','ಮೇಕ್ ಇನ್ ಇಂಡಿಯಾ' ಮುಂತಾದ ಭಾರತ ಸರಕಾರದ ಇತರ ಕಾರ್ಯಕ್ರಮಗಳೊಂದಿಗೆ ಈ ಯೋಜನೆಯನ್ನು ಸಮನ್ವಯಗೊಳಿಸಿ, ಆ ಮೂಲಕ ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಪ್ರವಾಸೋದ್ಯಮ ವಲಯವನ್ನು ಪ್ರಮುಖ ಚಾಲಕಶಕ್ತಿಯಾಗಿ ಪರಿವರ್ತಿಸುವ ಆಲೋಚನೆಯೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಜೊತೆಗೆ ವಿವಿಧ ವಲಯಗಳೊಂದಿಗೆ ಪ್ರವಾಸೋದ್ಯಮ ವಲಯದ ಸಮನ್ವಯದ ಮೂಲಕ ಈ ವಲಯದ ಗರಿಷ್ಠ ಸಾಮರ್ಥ್ಯವನ್ನು ಸಾಬೀತುಪಡಿಸುವ ಗುರಿ ಹೊಂದಲಾಗಿದೆ.

ರಾಜಧಾನಿ ಪಣಜಿಯಿಂದ ಸುಮಾರು 10 ಕಿ.ಮೀ ದೂರ

ರಾಜಧಾನಿ ಪಣಜಿಯಿಂದ ಸುಮಾರು 10 ಕಿ.ಮೀ ದೂರ

ರಾಜಧಾನಿ ಪಣಜಿಯಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಹಾಗೂ ಓಲ್ಡ್ ಗೋವಾ ಚರ್ಚ್ ನಿಂದ 3 ಕಿ.ಮೀ ದೂರದ ಸರ್ವೆ ನಂ 28, 27ರಲ್ಲಿರುವ 35,596 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಈ ಹೆಲಿ ಪ್ಯಾಡ್ ನಿರ್ಮಾಣವಾಗಿದೆ. ಹೆಲಿ ಟೂರಿಸಂ ಅಭಿವೃದ್ಧಿ ಹಾಗೂ ಉತ್ತೇಜನಕ್ಕಾಗಿ ಮಾಂಡೋವಿ ನದಿ ತೀರಕ್ಕೆ ಸಮೀಪದ ಈ ಜಾಗವನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ 2021ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಪ್ರವಾಸಿಗರಿಗೆ ಈ ಹೆಲಿಪ್ಯಾಡ್ ಲಭ್ಯವಾಗುವ ಸಾಧ್ಯತೆಯಿದೆ. ಸುಮಾರು 4.9 ಕೋಟಿ ರು ವೆಚ್ಚದಲ್ಲಿ ಹೆಲಿ ಪ್ಯಾಡ್ ಸುತ್ತಮುತ್ತ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಗೇಟ್ ಸಹಿತ ಕಾಂಪೌಂಡ್ ಗೋಡೆ, ಕಾಫಿ ಹೌಸ್, ಪಾರ್ಕಿಂಗ್ ಬೇ, ಸೂಕ್ತ ಲೈಂಟಿಂಗ್ ಮುಂತಾದ ಸೌಲಭ್ಯಗಳಿವೆ. ಈ ಹೆಲಿಪ್ಯಾಡ್ ನಿರ್ವಹಣೆಗಾಗಿ ಸೂಕ್ತ ಸಂಸ್ಥೆಗಾಗಿ ಹುಡುಕಾಟ ನಡೆದಿದ್ದು ಟೆಂಡರ್ ಕರೆಯಲಾಗಿದೆ ಎಂದು ಗೋವಾ ಸರ್ಕಾರ ತಿಳಿಸಿದೆ.

English summary
Renovated Helipad at Old Goa was inaugurated today by G Kishan Reddy, Union Minister for Tourism, and Development of North eastern region and Chief minister of Goa Dr Pramod Sawant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X