ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ಚಿತ್ರ:ಮೂಗಿಗೆ ನಳಿಕೆ ಹಾಕಿಯೇ ಕೆಲಸದಲ್ಲಿ ತಲ್ಲೀನ ಪರಿಕ್ಕರ್

|
Google Oneindia Kannada News

ಪಣಜಿ, ಡಿಸೆಂಬರ್ 17: ಅನಾರೋಗ್ಯದಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಅಕ್ಟೋಬರ್ ತಿಂಗಳಿನಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಮೇಲೆ ಸಾರ್ವಜನಿಕವಾಗಿ ಕಾಣಿಸಿಕೊಂಡೇ ಇರಲಿಲ್ಲ.

ಆದರೆ ನ್ಯಾಸೋ ಗ್ಯಾಸ್ಟ್ರಿಕ್ ಟ್ಯೂಬ್ ತೊಟ್ಟು ಅವರು ಕೆಲಸದಲ್ಲಿ ನಿರತರಾಗಿರುವ ಚಿತ್ರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 63 ವರ್ಷ ವಯಸ್ಸಿನ ಪರಿಕ್ಕರ್ ಸೇತುವೆ ಪರಿಶೀಲಿಸಲು ಬಂದ ಸಂದರ್ಭದಲ್ಲಿ ವೈದ್ಯರು ಅವರನ್ನು ಹಿಡಿದೇ ನಿಂತಿರುವುದನ್ನು ಈ ಚಿತ್ರದಲ್ಲಿ ಕಾಣಬಹುದು! ಇದಕ್ಕೂ ಮುನ್ನ ಗೋವಾ ಬಜೆಟ್ ಮಂಡನೆಗೂ ಅವರು ಆಸ್ಪತ್ರೆಯಿಂದ ನೇರವಾಗಿ ವಿಧಾನಸಭೆಗೆ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು.

Rare Photo: Manohar Parrikar Inspects Work On Goa Bridges

ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಹೇಗಿದೆ? ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಹೇಗಿದೆ?

ಮಾಂಡೋವಿ ನದಿಯ ಸೇತುವೆಯನ್ನು ಅಧಿಕಾರಿಗಳೊಂದಿಗೆ ಅವರು ವೀಕ್ಷಿಸುವ ಮೂಲಕ, ಅನಾರೋಗ್ಯದ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದರು. ಪ್ಯಾಂಕ್ರಿಯಾಸ್ ಗೆ ಸಂಬಂಧಿಸಿದ ಅನಾರೋಗ್ಯದ ಮೂಲಕ ಬಳಲುತ್ತಿದ್ದ ಮನೋಹರ್ ಪರಿಕ್ಕರ್ ಅವರು ಮೊದಲು ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಕೆಲದಿನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದು ಅಕ್ಟೋಬರ್ 14 ರಂದು ಡಿಸ್ಚಾರ್ಜ್ ಆಗಿದ್ದರು.

ಪಣಜಿಯಿಂದ ಗೋವಾದ ಇತರ ಪ್ರದೇಶಗಳಿಗೆ ಸಂಪರ್ಕ ನೀಡಬಲ್ಲ, ಬಹುಮಹತ್ವಾಕಾಂಕ್ಷಿ ಯೋಜನೆಯ ಮೇಲ್ವಿಚಾರಣೆಯನ್ನು ಭಾನುವಾರ ಪರಿಕ್ಕರ್ ಮಾಡಿದರು.

'ಗೋವಾ ಮುಖ್ಯಮಂತ್ರಿಯನ್ನು ಬದಲಿಸುವ ಪ್ರಶ್ನೆಯೇ ಇಲ್ಲ''ಗೋವಾ ಮುಖ್ಯಮಂತ್ರಿಯನ್ನು ಬದಲಿಸುವ ಪ್ರಶ್ನೆಯೇ ಇಲ್ಲ'

ಅನಾರೋಗ್ಯದಿಂದ ಬಳಲುತ್ತಿರುವ ಮನೋಹರ್ ಪರಿಕ್ಕರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ವಿಪಕ್ಷಗಳಿಂದ ಸಾಕಷ್ಟು ಒತ್ತಡವಿದ್ದರೂ, ಗೋವಾದಲ್ಲಿ ಪರಿಕ್ಕರ್ ಗಿರುವ ಜನಬೆಂಬಲವನ್ನರಿತಿರುವ ಬಿಜೆಪಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಯೋಚನೆ ಮಾಡಿಲ್ಲ.

English summary
Ailing Goa Chief Minister Manohar Parrikar today inspected an under-construction bridge on Mandovi River, the first time he has been seen in public since returning to the state on October 14 post hospitalisation in Delhi's AIIMS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X