ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಗೋವಾದಲ್ಲಿ ಟ್ಯಾಕ್ಸಿ ಬೈಕ್‌ನಲ್ಲಿ ರಾಹುಲ್‌ ಗಾಂಧಿ ಸಂಚಾರ

|
Google Oneindia Kannada News

ಪಣಜಿ, ಅಕ್ಟೋಬರ್‌ 30: ಗೋವಾದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಲೇ ಎಲ್ಲಾ ಪಕ್ಷಗಳು ತಯಾರಿಯನ್ನು ನಡೆಸುತ್ತಿದ್ದಾರೆ. ಈ ನಡುವೆ ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗೋವಾಕ್ಕೆ ಭೇಟಿ ನೀಡಿದ್ದಾರೆ.

ಶನಿವಾರ ಕೇರಳದ ವಯನಾಡಿನ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಗೋವಾದಲ್ಲಿ ಪೈಲಟ್‌ ಟ್ಯಾಕ್ಸಿ ಬೈಕ್‌ನಲ್ಲಿ ಸಹಸವಾರರಾಗಿ ಸಂಚಾರ ಮಾಡಿದ್ದಾರೆ. ಸುಮಾರು ಐದು ಕಿಲೋ ಮೀಟರ್‌ವರೆಗೆ ಬೈಕ್‌ನಲ್ಲಿ ಸಂಚಾರ ಮಾಡಿದ್ದಾರೆ. ಅಜಾದ್‌ ಮೈದಾನ್‌ನಿಂದ ರಾಜ್ಯ ರಾಜಧಾನಿ ಪಣಜಿವರೆಗೆ ಬೈಕ್‌ನಲ್ಲಿ ರಾಹುಲ್‌ ಗಾಂಧಿ ಸಂಚಾರ ಮಾಡಿದ್ದಾರೆ. ಹಾಗೆಯೇ ಪುಟ್‌ಬಾಲ್‌ ಅನ್ನು ಕೂಡಾ ಆಟವಾಡಿದ್ದಾರೆ.

 'ಬಿಜೆಪಿ ವಿರುದ್ಧ ಹೋರಾಡದಿದ್ದರೆ, ದೇಶವನ್ನೇ ಮಾರುತ್ತಾರೆ': ಗೋವಾದಲ್ಲಿ ಮಮತಾ 'ಬಿಜೆಪಿ ವಿರುದ್ಧ ಹೋರಾಡದಿದ್ದರೆ, ದೇಶವನ್ನೇ ಮಾರುತ್ತಾರೆ': ಗೋವಾದಲ್ಲಿ ಮಮತಾ

ಚುನಾವಣೆಯ ಕಾರ್ಯತಂತ್ರ ಗೋವಾದಲ್ಲಿ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್‌ ಗಾಂಧಿ ಗೋವಾ ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಗೋವಾದಲ್ಲಿ ಮೀನುಗಾರರನ್ನು ಉದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಿದರು. ಪಣಜಿ-ಮಾರ್ಗೋವಾ ಹೆದ್ದಾರಿಯಲ್ಲಿರುವ ಬಾಂಬೋಲಿಮ್ ಗ್ರಾಮದ ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ಊಟ ಮಾಡಿದರು. ಬಳಿಕ ರಾಹುಲ್‌ ಗಾಂಧಿಯವರು ರೆಸಾರ್ಟ್ ತಲುಪಲು ಲಿಫ್ಟ್‌ ಪಡೆದುಕೊಂಡರು. ಬಳಿಕ ರಾಜ್ಯದ ಗಣಿ ಉದ್ಯಮದವನ್ನು ಅವಲಂಬಿಸಿರುವ ಜನರನ್ನು ಭೇಟಿ ಮಾಡಿದರು.

 Rahul Gandhi takes a pillion ride on motorcycle, plays football in Goa

ರಾಜ್ಯದ ಗಣಿ ಉದ್ಯಮದವನ್ನು ಅವಲಂಬಿಸಿರುವ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, "ರಾಜ್ಯವನ್ನು ಕಲ್ಲಿದ್ದಲು ಕೇಂದ್ರವನ್ನಾಗಿ ಮಾಡಲು ನಾವು ಬಿಡುವುದಿಲ್ಲ. ನಾವು ಗೋವಾವನ್ನು ಮಾಲಿನ್ಯದ ರಾಜ್ಯವನ್ನಾಗಿಸಲು ಬಿಡುವುದಿಲ್ಲ. ಗೋವಾದ ಪ್ರಮುಖ ವಿಷಯವೆಂದರೆ ಪರಿಸರ. ನಾವು ಯಾವುದೇ ಬೆಲೆ ತೆತ್ತಾದರೂ ರಕ್ಷಿಸಬೇಕು," ಎಂದು ತಿಳಿಸಿದ್ದಾರೆ.

ಇನ್ನು ಮುಂದಿನ ಚುನಾವಣೆಯ ನಿಟ್ಟಿನಲ್ಲಿ ಗೋವಾದಲ್ಲಿ "ಕಾಂಗ್ರೆಸ್‌ನ ಪ್ರಣಾಳಿಕೆಯು ಬರೀ ಭರವಸೆ ಅಲ್ಲ. ಅದು ಗ್ಯಾರಂಟಿ," ಎಂದು ಕೂಡಾ ಆಶ್ವಾಸನೆ ನೀಡಿದ್ದಾರೆ. "ನಮ್ಮ ಪಕ್ಷದ ಪ್ರಣಾಳಿಕೆಯು ಬಹಳ ಪಾರದರ್ಶಕವಾಗಿರಲಿದೆ. ನಾವು ಛತ್ತೀಸ್‌ಗಢದಲ್ಲಿ ಚುನಾವಣೆಯಲ್ಲಿ ಹೋರಾಡಿಸಿದ್ದೇವೆ. ಅಲ್ಲಿ ನಾವು ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಅದನ್ನು ನಾವು ಮಾಡಿ ತೋರಿಸಿದ್ದೇವೆ. ನೀವು ಪಂಜಾಬ್‌ ಹಾಗೂ ಕರ್ನಾಟಕದಲ್ಲಿ ನಾವು ಏನು ಮಾಡಿದ್ದೇವೆ ಎಂದು ಕೂಡಾ ಬೇರೆಯವರಲ್ಲಿ ಕೇಳಿ ತಿಳಿದು ಕೊಳ್ಳಬಹುದು. ನಮ್ಮ ಪ್ರಣಾಳಿಕೆಯಲ್ಲಿ ಏನು ಇರುತ್ತದೆ, ಅದನ್ನು ನಾವು ಮಾಡಿ ತೋರಿಸುತ್ತೇವೆ. ಅದು ಬರೀ ಭರವಸೆ ಆಗಿ ಉಳಿಯುವುದಿಲ್ಲ," ಎಂದರು.

ಗೋವಾದಲ್ಲಿ ಹೇಗಿದೆ ಕಾಂಗ್ರೆಸ್‌ನ ಸ್ಥಿತಿ?

ಶುಕ್ರವಾರ ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಮತಾ ಬ್ಯಾನರ್ಜಿ ಭೇಟಿ ನೀಡಿದ್ದಾರೆ. ಗೋವಾ ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ಭಾರೀ ಸಂಚಲನ ಮೂಡಿದೆ. ಕಾಂಗ್ರೆಸ್‌ನ ಹಲವಾರು ನಾಯಕರುಗಳು ತೃಣಮೂಲ ಕಾಂಗ್ರೆಸ್‌ ಅನ್ನು ಸೇರ್ಪಡೆ ಆಗುತ್ತಿದ್ದು, ಈ ಕಾಂಗ್ರೆಸ್‌ ನಾಯಕರ ನಡೆಯು ಕೈ ಪಕ್ಷದ ಹೈಕಮಾಂಡ್‌ಗೆ ತಲೆನೋವನ್ನು ಉಂಟು ಮಾಡಿದೆ.

ಅಕ್ಟೋಬರ್‌ 24 ರಂದು ಗೋವಾದಲ್ಲಿ ಸುಮಾರು 300 ಜನರು ತೃಣಮೂಲ ಕಾಂಗ್ರೆಸ್‌ ಅನ್ನು ಸೇರ್ಪಡೆಗೊಂಡಿದ್ದಾರೆ. ಪಣಜಿ, ನಾವೆಲಿಮ್ ಮತ್ತು ಸಾಂಗೇಮ್‌ನಲ್ಲಿ ಕಾರ್ಯಕ್ರಮಗಳು ನಡೆದಿದ್ದು 300 ರಷ್ಟು ಜನರು ತೃಣಮೂಲ ಕಾಂಗ್ರೆಸ್‌ ಜೊತೆಯಾಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 'ಯಾವುದೇ ಭರವಸೆ ಇಲ್ಲ..': ರಾಜೀನಾಮೆ ಪತ್ರದಲ್ಲಿ ಸೋನಿಯಾಗೆ ಹೇಳಿದ ಗೋವಾ ಕಾಂಗ್ರೆಸ್‌ ನಾಯಕ 'ಯಾವುದೇ ಭರವಸೆ ಇಲ್ಲ..': ರಾಜೀನಾಮೆ ಪತ್ರದಲ್ಲಿ ಸೋನಿಯಾಗೆ ಹೇಳಿದ ಗೋವಾ ಕಾಂಗ್ರೆಸ್‌ ನಾಯಕ

ಶನಿವಾರ ನವೆಲಿಮ್‌ನಲ್ಲಿ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ ಲುಯಿಜಿನ್ಹೊ ಫಲೈರೊ ಸಮ್ಮುಖದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಕಾನ್ಸಿಕಾವೊ ಪೀಕ್ಸೊಟ್ ಮತ್ತು 170 ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದಂತೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬ್ಲಾಕ್ ಮಟ್ಟದ ನಾಯಕತ್ವವು ಗೋವಾ ಟಿಎಂಸಿ ಅನ್ನು ಸೇರ್ಪಡೆಗೊಂಡಿದೆ," ಎಂದು ಕೂಡಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಹೊಗಳಿದ್ದ ಅನುಭವಿ ಗೋವಾ ಕಾಂಗ್ರೆಸ್‌ ನಾಯಕ, ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೆರೊ ಈಗಾಗಲೇ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದು, ಪ್ರಸ್ತುತ ಟಿಎಂಸಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Rahul Gandhi takes a pillion ride on motorcycle, plays football.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X