ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.6ರಂದು ‘ಪ್ರೆಸಿಡೆಂಟ್ಸ್ ಕಲರ್’ ಪಡೆಯಲಿದೆ ಭಾರತೀಯ ನೌಕಾ- ವಾಯುಪಡೆ

|
Google Oneindia Kannada News

ಪಣಜಿ, ಸೆಪ್ಟೆಂಬರ್ 4: ರಾಷ್ಟ್ರಪತಿ ರಾಮನಾಥ ಕೋವಿಂದ್ ಸೆಪ್ಟೆಂಬರ್ 6ರಂದು ಗೋವಾದ ವಾಸ್ಕೋದಲ್ಲಿರುವ ಐಎನ್‌ಎಸ್ ಹಂಸದಲ್ಲಿ ನಡೆಯಲಿರುವ ವಿದ್ಯುಕ್ತ ಕವಾಯತು ಕಾರ್ಯಕ್ರಮದಲ್ಲಿ ಭಾರತೀಯ ನೌಕಾ- ವಾಯುಪಡೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ 'ರಾಷ್ಟ್ರಪತಿ ಬಣ್ಣ'ವನ್ನು ನೀಡಲಿದ್ದಾರೆ.

'ರಾಷ್ಟ್ರಪತಿ ಬಣ್ಣ'ವು ರಾಷ್ಟ್ರಕ್ಕೆ ನೀಡಿದ ಅಸಾಧಾರಣ ಸೇವೆಯನ್ನು ಗುರುತಿಸಿ ಸೇನಾ ಘಟಕಕ್ಕೆ ನೀಡಲಾಗುವ ಅತ್ಯುನ್ನತ ಗೌರವವಾಗಿದೆ. ಸಶಸ್ತ್ರ ಪಡೆಗಳಲ್ಲಿ ಮೊದಲು 'ರಾಷ್ಟ್ರಪತಿ ಬಣ್ಣ' ಪಡೆದಿದ್ದು ಕೂಡ ನೌಕಾಪಡೆಯೇ. ಮೇ 27, 1951ರಂದು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ 'ರಾಷ್ಟ್ರಪತಿ ಬಣ್ಣ' ನೀಡಿದ್ದರು.

ಇದೀಗ 5 ದಶಕಗಳ ಬಳಿಕ ಮತ್ತೆ 'ರಾಷ್ಟ್ರಪತಿ ಬಣ್ಣ' ಪ್ರದಾನ ಮಾಡಲಾಗುತ್ತಿದೆ. ಈ ಸಂದರ್ಭವನ್ನು ಸ್ಮರಣೀಯವನ್ನಾಗಿಸಲು ಇದೇ ವೇಳೆ ಅಂಚೆ ಇಲಾಖೆಯಿಂದ ವಿಶೇಷ ದಿನದ ಲಕೋಟೆಯನ್ನು ಬಿಡುಗಡೆ ಮಾಡಲಾಗುತ್ತಿದೆ.

President Ramnath Kovind Will Award The President’s Colour To Indian Naval Aviation On September 6

ಭಾರತೀಯ ನೌಕಾ ವಾಯುಪಡೆಯು 1951ರ ಜನವರಿ 13ರಂದು ಮೊದಲ ಸೀಲ್ಯಾಂಡ್ ವಿಮಾನವನ್ನು ಸ್ವಾಧೀನಪಡಿಸಿಕೊಂಡಿತ್ತು. 1953ರ ಮೇ 11ರಂದು ಮೊದಲ ನೌಕಾ ವಾಯು ನಿಲ್ದಾಣವಾದ ಐಎನ್‌ಎಸ್ ಗರುಡವನ್ನು ಪ್ರಾರಂಭಿಸಿತ್ತು.

ಪ್ರಸ್ತುತ ಭಾರತೀಯ ನೌಕಾ ವಾಯುಪಡೆಯು ಒಂಬತ್ತು ವಾಯು ನಿಲ್ದಾಣಗಳು ಮತ್ತು ಮೂರು ನೌಕಾ ವಾಯು ವಲಯಗಳನ್ನು ಭಾರತೀಯ ಕರಾವಳಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹೊಂದಿದೆ.

ಕಳೆದ ಏಳು ದಶಕಗಳಲ್ಲಿ ನೌಕಾ- ವಾಯುಪಡೆ ಆಧುನಿಕ, ತಾಂತ್ರಿಕವಾಗಿ ಮುಂದುವರಿದ ಮತ್ತು ಅತ್ಯಂತ ಶಕ್ತಿಯುತ ಪಡೆಯಾಗಿ ರೂಪಾಂತರಗೊಂಡಿದೆ. ಪ್ರಸ್ತುತ 250ಕ್ಕೂ ಹೆಚ್ಚು ವಿಮಾನಗಳು ಕ್ಯಾರಿಯರ್- ಬಾರ್ನ್ ಫೈಟರ್‌ಗಳು, ಕಡಲ ವಿಚಕ್ಷಣ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ರಿಮೋಟ್ ಪೈಲಟ್ ವಿಮಾನಗಳನ್ನು ಒಳಗೊಂಡಿವೆ.

ನೌಕಾಪಡೆಯ ಹೋರಾಟದ ಅಂಗಕ್ಕೆ ಮಹಿಳೆಯರನ್ನು ಸೇರಿಸುವಲ್ಲಿ ಮತ್ತು ಅವರ ಪುರುಷ ಸಹವರ್ತಿಗಳೊಂದಿಗೆ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡುವಂತೆ ಮಾಡುವಲ್ಲಿ ಭಾರತೀಯ ನೌಕಾ- ವಾಯುಪಡೆ ಮುಂಚೂಣಿಯಲ್ಲಿದೆ.

English summary
President Ram Nath Kovind will award the President’s Colour to Indian Naval Aviation at a ceremonial parade on September 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X