ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನಕೋಣದಲ್ಲಿ ಕಿಡಿ ಹಚ್ಚಿಸಿತು ಪೂನಂ ಪಾಂಡೆ ಅರೆಬೆತ್ತಲೆ ವಿಡಿಯೋ ಚಿತ್ರೀಕರಣ

|
Google Oneindia Kannada News

ಕಾರವಾರ, ನವೆಂಬರ್ 04: ಇತ್ತೀಚೆಗೆ ಗೋವಾದ ಕಾನಕೋಣದ ಚಾಪೋಲಿ ಡ್ಯಾಮ್ ಬಳಿ ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ ಅವರ ವಿಡಿಯೋವೊಂದನ್ನು ಶೂಟ್ ಮಾಡಲಾಗಿದ್ದು, ಇದು ರಾಜಕೀಯ ತಿರುವು ಪಡೆದುಕೊಂಡು ವಿವಾದಕ್ಕೀಡಾಗಿದೆ. ಗೋವಾ ಪೊಲೀಸರು ಬುಧವಾರ ಪೂನಂ ಪಾಂಡೆ ವಿರುದ್ಧ ಎಫ್ ಐಆರ್ ಅನ್ನೂ ದಾಖಲಿಸಿದ್ದಾರೆ.

ತನ್ನ ಮಾದಕ ವಿಡಿಯೋ, ಫೋಟೊಶೂಟ್ ಗಳಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಪೂನಂ ಪಾಂಡೆ ತಿಂಗಳ ಹಿಂದೆ ಗೋವಾದ ಕಾನಕೋಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾನಕೋಣದ ವಿವಿಧ ಬೀಚ್ ಗಳಲ್ಲಿ ತಿರುಗಾಡಿ ಫೋಟೊ ಶೂಟ್ ನಡೆಸಿರುವ ಅವರು, ಫೋಟೊಗಳನ್ನು ಟ್ವಿಟರ್ ನಲ್ಲಿ ಕೂಡ ಹಂಚಿಕೊಂಡಿದ್ದಾರೆ. ಈ ನಡುವೆ ಚಾಪೋಲಿ ಡ್ಯಾಮ್ ಬಳಿ ವಿಡಿಯೋವೊಂದರ ಚಿತ್ರೀಕರಣದಲ್ಲಿ ಕೂಡ ಭಾಗಿಯಾಗಿದ್ದಾರೆ. ಮುಂದೆ ನೋಡಿ...

 ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ

ಈ ವಿಡಿಯೋದಲ್ಲಿ ಪೂನಂ ಪಾಂಡೆ ಅರೆಬೆತ್ತಲೆಯಾಗಿದ್ದು, ಒಂದು ನಿಮಿಷದ ಪೂನಂ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ ಸದ್ಯ ಗೋವಾ ಸರ್ಕಾರದ ವಿರುದ್ಧದ ಸ್ಥಳೀಯರು ಹಾಗೂ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.

ಚಳಿಗಾಲದಲ್ಲಿ ಇಂಟರ್ನೆಟ್ಟಿಗೆ ಬೆಂಕಿ ಹಚ್ಚಿದ ಪೂನಂ ಪಾಂಡೆಚಳಿಗಾಲದಲ್ಲಿ ಇಂಟರ್ನೆಟ್ಟಿಗೆ ಬೆಂಕಿ ಹಚ್ಚಿದ ಪೂನಂ ಪಾಂಡೆ

ಕಾನಕೋಣದ ನಿರ್ಬಂಧಿತ ಪ್ರದೇಶವಾಗಿರುವ ಹಾಗೂ ಸರ್ಕಾರಿ ಆಸ್ತಿಯಾಗಿರುವ ಚಾಪೋಲಿ ಅಣೆಕಟ್ಟಿನ ಬಳಿ ವಿಡಿಯೋವನ್ನು ಚಿತ್ರೀಕರಿಸಲಾಗಿರುವ ಕುರಿತು ಗೋವಾ ಫಾರ್ವರ್ಡ್ ಪಾರ್ಟಿ ಪೊಲೀಸ್ ದೂರನ್ನು ಕೂಡ ದಾಖಲಿಸಿದೆ.

"ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಉತ್ತೇಜನವಾಗುತ್ತದೆ"

ಈ ವಿಡಿಯೋ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಉತ್ತೇಜನ ನೀಡುವಂತಿದ್ದು, ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕಾನಕೋಣಕ್ಕೆ ಅಪಮಾನವಾಗಿದೆ. ಈ ವಿಡಿಯೋವನ್ನು ಸರ್ಕಾರಿ ಆಸ್ತಿಯಲ್ಲಿ ಹೇಗೆ ಚಿತ್ರೀಕರಿಸಲಾಗಿದೆ ಮತ್ತು ಯಾರ ಅನುಮತಿಯೊಂದಿಗೆ ಚಿತ್ರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗೋವಾ ಫಾರ್ವರ್ಡ್ ಪಾರ್ಟಿ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.

ಪೂನಂ ಪಾಂಡೆ ವಿರುದ್ಧ ಎಫ್ ಐಆರ್ ದಾಖಲು

ಪೂನಂ ಪಾಂಡೆ ವಿರುದ್ಧ ಎಫ್ ಐಆರ್ ದಾಖಲು

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಗೋವಾದ ಎಂಟರ್‌ಟೈನ್ ‌ಮೆಂಟ್ ಸೊಸೈಟಿ ಸಾಮಾನ್ಯವಾಗಿ ಇಂಥವುಗಳಿಗೆ ಅನುಮತಿ ನೀಡುತ್ತದೆ. ಚಾಪೋಲಿ ಅಣೆಕಟ್ಟು ಸಚಿವ ಫಿಲಿಪ್ ನೆರಿ ರೊಡ್ರಿಗಸ್ ನೇತೃತ್ವದ ರಾಜ್ಯ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಕಡಲ ತೀರಗಳಿಗೆ ಹೆಸರುವಾಸಿಯಾಗಿರುವ ರಾಜ್ಯವನ್ನು ಬಿಜೆಪಿ 'ಅಶ್ಲೀಲ ತಾಣ'ವನ್ನಾಗಿ ಪರಿವರ್ತಿಸಿದೆ. ಈ ವಿಡಿಯೋಗೆ ಸಂಬಂಧಿಸಿದಂತೆ ಗೋವಾ ಚಿತ್ರಣವನ್ನು ಕೆಡಿಸುವ ಮುಖ್ಯಮಂತ್ರಿ ಸಾವಂತ್, ಜಲಸಂಪನ್ಮೂಲ ಸಚಿವ ಫಿಲಿಪ್ ನೆರಿ ಮತ್ತು ಪೂನಂ ಪಾಂಡೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಗೋವಾ ಫಾರ್ವರ್ಡ್ ಪಕ್ಷದ ಮುಖಂಡ ದುರ್ಗದಾಸ್ ಕಾಮತ್ ಒತ್ತಾಯಿಸಿದ್ದಾರೆ.

ಗೋವಾ ಪೊಲೀಸರು ಪೂನಂ ಪಾಂಡೆ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಲಾಕ್‌ ಡೌನ್ ರೂಲ್ಸ್ ಬ್ರೇಕ್: ಪೂನಂ ಪಾಂಡೆ ವಿರುದ್ಧ ಎಫ್‌ ಐ ಆರ್ಲಾಕ್‌ ಡೌನ್ ರೂಲ್ಸ್ ಬ್ರೇಕ್: ಪೂನಂ ಪಾಂಡೆ ವಿರುದ್ಧ ಎಫ್‌ ಐ ಆರ್

"ಪೋರ್ನ್ ಡೆಸ್ಟಿನೇಷನ್ ಮಾಡಲು ಹೊರಟಿದೆಯೇ?"

ಈ ಮೊದಲು ನಮ್ಮಲ್ಲಿ ಅಶ್ಲೀಲ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಓರ್ವ ಮಂತ್ರಿ ಇದ್ದರು. ಈಗ ನಮ್ಮಲ್ಲಿ ಇನ್ನೊಬ್ಬ ಮಂತ್ರಿ ಇದ್ದು, ಅವರ ಇಲಾಖೆಯು ಅಶ್ಲೀಲ ವಿಡಿಯೋ ತಯಾರಿಕೆಯಲ್ಲಿ ತೊಡಗಿದೆ. ಬಿಜೆಪಿ ನಮ್ಮ ರಾಜ್ಯವನ್ನು ಪೋರ್ನ್ ಡೆಸ್ಟಿನೇಶನ್ ಎಂದು ಪ್ರಚಾರ ಮಾಡುತ್ತಿದೆಯೇ? ಕಾಮತ್ ಕಿಡಿಕಾರಿದ್ದಾರೆ.

English summary
A video of Bollywood actress Poonam Pandey was shot near Chapoli Dam at kanakona in Goa recently. It has created controversy now
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X