• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋವಾ ಬೀಚ್‌ನಲ್ಲಿ ಅಶ್ಲೀಲ ಚಿತ್ರೀಕರಣ: ನಟಿ ಪೂನಂ ಪಾಂಡೆ ಬಂಧನ

|

ಪಣಜಿ, ನವೆಂಬರ್ 05: ಗೋವಾದ ಬೀಚ್‌ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ಗೋವಾದ ಚಾಪೋಲಿ ಡ್ಯಾಮ್‌ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಗೋವಾ ಫಾರ್ವರ್ಡ್ ಪಾರ್ಟಿಯ ಮಹಿಳಾ ಘಟಕ ನಟಿಯ ವಿರುದ್ಧ ದೂರು ದಾಖಲಿಸಿತ್ತು. ಬುಧವಾರ ಪೂನಂ ಪಾಂಡೆ ಮೇಲೆ ಎಫ್‌ಐಆರ್ ದಾಖಲಾಗಿತ್ತು.

ಕಾನಕೋಣದಲ್ಲಿ ಕಿಡಿ ಹಚ್ಚಿಸಿತು ಪೂನಂ ಪಾಂಡೆ ಅರೆಬೆತ್ತಲೆ ವಿಡಿಯೋ ಚಿತ್ರೀಕರಣ

'ನಟಿ ಪೂನಂಪಾಂಡೆ ನಟಿಸಿರುವ ಅಶ್ಲೀಲ ವಿಡಿಯೋ ಬಗ್ಗೆ ನಾವು ನಿಮ್ಮ ಗಮನಸೆಳೆಯಲು ಪ್ರಯತ್ನಿಸುತ್ತೇವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ಚಿತ್ರೀಕರಣ ಚಾಪೋಲಿ ಡ್ಯಾಮ್ ಕಾನಕೋಣದಲ್ಲಿ ನಡೆದಿದೆ. ಇದು ತನ್ನ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕಾನಕೋಣದ ಜನರಿಗೆ ಆಘಾತವನ್ನು ನೀಡಿದೆ ಎಂದು ಸಂಘವು ದೂರಿನಲ್ಲಿ ವಿವರಿಸಿದೆ.

ಪೂನಂ ಪಾಂಡೆ ಬೆತ್ತಲೆಯಾಗಿರುವ ಒಂದು ನಿಮಿಷದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಹಾಗೂ ವಿರೋಧ ಪಕ್ಷಗಳು ಗೋವಾ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ನಿರ್ಬಂಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರದ ವಿರುದ್ಧ ವಿರೋಧ ಪಕ್ಷದವರು ಟೀಕಾಪ್ರಹಾರ ನಡೆಸುತ್ತಿದ್ದಾರೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮದುವೆಯಾದ ಒಂದು ದಿನದ ನಂತರ ಪೂನಂ ಪಾಂಡೆ ತನ್ನ ಪತಿ ಸ್ಯಾಮ್ ಬಾಂಬೆ ಮೇಲೆ ಅತ್ಯಾಚಾರ ಮತ್ತು ಹಲ್ಲೆ ಆರೋಪ ಮಾಡಿದ್ದರು. ದಕ್ಷಿಣ ಗೋವಾದ ಕಾನಕೋಣ ಗ್ರಾಮದಲ್ಲಿ ಈ ಘಟನೆ ನಡೆದಿದೆ.

English summary
Actor Poonam Pandey was arrested by the Canacona police in Goa on Thursday. An FIR was lodged against her for shooting an obscene video at a beach in Goa after which protests took place demanding the resignation of the Chief Minister and the police officials who permitted the shooting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X