ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಎಂಜಾಯ್' ಮಾಡಲೆಂದು ಗೋವಾಗೆ ಬರುವುದು ಬೇಡ: ಸಿಎಂ ಪ್ರಮೋದ್

|
Google Oneindia Kannada News

ಪಣಜಿ, ಮೇ 15: ಎಂಜಾಯ್ ಮಾಡಲೆಂದು ಗೋವಾಗೆ ಬರುವುದು ಬೇಡ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸ್ಪಷ್ಟಪಡಿಸಿದ್ದಾರೆ.

ಮಡ್ಗಾಂಗೆ ವಿಶೇಷ ರೈಲು ಬರುತ್ತಿದ್ದು ಅಲ್ಲಿಯೇ ಹಾಲ್ಟ್ ಮಾಡಲಾಗುತ್ತಿದೆ. ಇದರಿಂದ ಕಳೆದ ಒಂದು ತಿಂಗಳಿಂದ ಕಡಿಮೆಯಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.ಒಂದೊಮ್ಮೆ ಗೋವಾ ನಿವಾಸಿಗಳಲ್ಲದಿದ್ದಲ್ಲಿ ವಿಶೇಷ ರೈಲು ಹಾಗೂ ವಿಮಾನದಲ್ಲಿ ಬಂದವರು 14 ದಿನಗಳ ಕಾಲ ಕ್ವಾರಂಟೈನ್‌ ಅಲ್ಲಿ ಇರಲೇಬೇಕು ಎಂದು ಹೇಳಿದ್ದಾರೆ.

ನಿಟ್ಟುಸಿರು ಬಿಟ್ಟಿದ್ದ ಗೋವಾಗೆ ಮತ್ತೆ ಕಂಟಕ: 7 ಹೊಸ ಕೇಸ್ ಪತ್ತೆ!ನಿಟ್ಟುಸಿರು ಬಿಟ್ಟಿದ್ದ ಗೋವಾಗೆ ಮತ್ತೆ ಕಂಟಕ: 7 ಹೊಸ ಕೇಸ್ ಪತ್ತೆ!

ನವದೆಹಲಿಯಿಂದ ತಿರುವನಂತಪುರಂಗೆ ವಿಶೇಷ ರೈಲು ಸಂಚರಿಸುತ್ತಿದೆ. ಅದು ಗೋವಾದಲ್ಲಿ ನಿಲುಗಡೆ ಮಾಡದಿರಲು ತಿಳಿಸಿದ್ದಾರೆ. ಮಡ್ಗಾಂಗೆ ಬರಲು 720 ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ.

Please Dont Come To Goa To Enjoy Says Chief Minister

ಆದರೆ ಅದರಲ್ಲಿರುವವರು ಯಾರೂ ಕೂಡ ಗೋವಾದವರಲ್ಲ ಹೀಗಾಗಿ, ಮಜಾ ಮಾಡಬೇಕು, ಎಂಜಾಯ್‌ ಮಾಡಬೇಕು ಎಂದು ದಯವಿಟ್ಟು ಈ ಸಂದರ್ಭದಲ್ಲಿ ಗೋವಾಗೆ ಬರಬೇಡಿ ಎಂದಿದ್ದಾರೆ.

ಗೋವಾಗೆ ಬಂದ ತಕ್ಷಣ ಅವರನ್ನು ತಪಾಸಣೆ ಮಾಡುತ್ತಾರೆ. ಕ್ವಾರಂಟೈನ್‌ನಲ್ಲಿರಲು ತಿಳಿಸುತ್ತೇವೆ ಆದರೆ ಅವರು ನಿಜವಾಗಿಯೂ ಕ್ವಾರಂಟೈನ್‌ನಲ್ಲಿರುತ್ತಾರೆಯೇ ಎಂದು ತಿಳಿಯುವುದು ಕಷ್ಟವಾಗುತ್ತದೆ. ಹಾಗಾಗಿ ಮಡ್ಗಾಂನಲ್ಲಿ ನಿಲುಗಡೆಯೇ ಬೇಡ ಎಂದು ಹೇಳಿದ್ದಾರೆ.

ಒಂದು ತಿಂಗಳ ಬಳಿಕ 8 ಪ್ರಕರಣಗಳು ಪತ್ತೆಯಾಗಿವೆ. ಈ ಎಂಟು ಮಂದಿಯೂ ಕೂಡ ಹೊರಗಿನಿಂದ ಗೋವಾಗೆ ಬಂದವರಾಗಿದ್ದಾರೆ.

English summary
Goa Chief Minister Pramod Sawant has suggested that the Railways cancel the halt at Madgaon station for special trains being operated by it as the state records new cases of coronavirus after a gap of more than a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X