ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋರಾಟದಲ್ಲಿ ಗೆದ್ದ ಗೋವಾ: ಕೊರೊನಾ ಮುಕ್ತ ರಾಜ್ಯ

|
Google Oneindia Kannada News

ಪಣಜಿ, ಏಪ್ರಿಲ್ 21: ಕೊರೊನಾ ವಿರುದ್ಧದ ಹೋರಾಟವನ್ನು ಗೋವಾ ಯಶಸ್ವಿಯಾಗಿ ಮಾಡಿದೆ. ಪರಿಣಾಮ ಗೋವಾ ಈಗ ಕೊರೊನಾ ಮುಕ್ತ ರಾಜ್ಯ ಎಂದು ಕರೆಸಿಕೊಂಡಿದೆ.

ಗೋವಾದಲ್ಲಿ ಏಳು ಕೊರೊನಾ ವೈರಸ್‌ ಪ್ರಕರಣಗಳು ದೃಢವಾಗಿತ್ತು. ಅದರಲ್ಲಿ ಏಳನೇ ವ್ಯಕ್ತಿಯ ವರದಿ ಬಂದಿದ್ದು, ಕೊರೊನಾ ನೆಗಿಟಿವ್ ಎನ್ನುವುದು ತಿಳಿದುಬಂದಿದೆ. ಏಪ್ರಿಲ್ 16ರ ವೇಳೆಗೆ ಆರು ಮಂದಿಗೆ ನೆಗೆಟಿವ್ ಎಂದು ವರದಿ ಬಂದಿದ್ದು, ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಗಿತ್ತು. ಈಗ ಕೊನೆಯ ವ್ಯಕ್ತಿ ಸಹ ಗುಣಮುಖವಾಗಿದ್ದಾರೆ.

ಗೋವಾದಲ್ಲಿ ಇಲ್ಲ ಕೊರೊನಾ ಭೀತಿ: ರಾಜ್ಯದ ಸರ್ಕಾರಿ ಕಚೇರಿಗಳೆಲ್ಲ ಓಪನ್! ಗೋವಾದಲ್ಲಿ ಇಲ್ಲ ಕೊರೊನಾ ಭೀತಿ: ರಾಜ್ಯದ ಸರ್ಕಾರಿ ಕಚೇರಿಗಳೆಲ್ಲ ಓಪನ್!

ಗೋವಾದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂದೆ ಇದ್ದವರು ನೋಡಲ್ ಅಧಿಕಾರಿ ಎಡ್ವಿನ್ ಗೋಮ್ಸ್. ಇವರು ಗೋವಾ ಮೆಡಿಕಲ್ ಕಾಲೇಜಿನ ಔಷಧ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಕೊರೊನಾ ತಡೆಗೆ ಶ್ರಮಪಟ್ಟ ಎಡ್ವಿನ್ ಗೋಮ್ಸ್ ಗೋವಾ ಸರ್ಕಾರ ಧನ್ಯವಾದ ತಿಳಿಸಿದೆ.

No Single Coronavirus Cases In Goa

ಎಡ್ವಿನ್ ಗೋಮ್ಸ್ ಅವರ ಕೆಲಸವನ್ನು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೊಗಳಿದ್ದಾರೆ. ಗೋವಾದಲ್ಲಿ ಕೊರೊನಾ ಹೆಚ್ಚಾಗಿ ಹರಡದಿರುವ ಹಾಗೆ ಶ್ರಮವಹಿಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ದೇಶದ ಲಾಕ್‌ಡೌನ್ ನಡುವೆ, ಈಗಾಗಲೇ ಗೋವಾದಲ್ಲಿ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಏಪ್ರಿಲ್ 13 ರಿಂದ ಸರ್ಕಾರಿ ಇಲಾಖೆಗಳು ಯಥಾಸ್ಥಿತಿಯಲ್ಲಿ ಕೆಲಸ ಆರಂಭಿಸಲಿವೆ. ಶೇ.50ರಷ್ಟು ಸಿಬ್ಬಂದಿಯನ್ನು ಬಳಸಿಕೊಂಡು ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಕಾರ್ಯಗಳನ್ನು ಮುಂದುವರಿಸುತ್ತಿದೆ.

English summary
No single Coronavirus cases in Goa. all 7 people are tested negative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X