ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ: ನೌಕಾಪಡೆಯ ಮಿಗ್-29 ವಿಮಾನ ಪತನ

|
Google Oneindia Kannada News

ಪಣಜಿ, ಫೆಬ್ರವರಿ 23 : ಭಾರತೀಯ ನೌಕಾಪಡೆಗೆ ಸೇರಿದ ಮಿಗ್ -29ಕೆ ವಿಮಾನ ಗೋವಾದಲ್ಲಿ ಪತನಗೊಂಡಿದೆ. ವಿಮಾನದ ಪೈಲೆಟ್ ಸುರಕ್ಷಿತವಾಗಿದ್ದಾರೆ ಎಂದು ನೌಕಾಪಡೆಯ ಪ್ರಕಟಣೆ ಹೇಳಿದೆ.

ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಪ್ರತಿನಿತ್ಯದ ತಾಲೀಮಿನಲ್ಲಿ ತೊಡಗಿದ್ದಾಗ ವಿಮಾನ ಪತನಗೊಂಡಿದೆ ಎಂದು ನೌಪಾಪಡೆಯ ಪ್ರಕಟಣೆ ಹೇಳಿದೆ. ವಿಮಾನ ಪತನಕ್ಕೆ ಕಾರಣವೇನು? ಎಂದು ತನಿಖೆ ಕೈಗೊಳ್ಳಲಾಗಿದೆ.

ನಾಲ್ಕು ವರ್ಷದಲ್ಲಿ 30 ವಿಮಾನ ಪತನ, 41 ಪೈಲೆಟ್‌ಗಳ ಸಾವುನಾಲ್ಕು ವರ್ಷದಲ್ಲಿ 30 ವಿಮಾನ ಪತನ, 41 ಪೈಲೆಟ್‌ಗಳ ಸಾವು

MiG 29K Aircraft Crashed In Goa Pilot Safe

ಮಿಗ್ -29ಕೆ ವಿಮಾನ ಪತನಗೊಂಡ ಬಳಿಕ ಪೈಲೆಟ್ ಸುರಕ್ಷಿತವಾಗಿದ್ದಾರೆ ಎಂದು ನೌಕಾಪಡೆ ಹೇಳಿದೆ. ಇದು ಮೊದಲ ಬಾರಿಯಲ್ಲ ಹಲವು ಬಾರಿ ಮಿಗ್- 29ಕೆ ವಿಮಾನ ಪತನಗೊಂಡ ಪ್ರಕರಣಗಳು ನಡೆದಿವೆ.

ಗಡಿಯಲ್ಲಿ ಆದೇಶಕ್ಕಾಗಿ ಕಾದಿರುವ ಭಾರತದ 140 ಯುದ್ಧ ವಿಮಾನಗಳುಗಡಿಯಲ್ಲಿ ಆದೇಶಕ್ಕಾಗಿ ಕಾದಿರುವ ಭಾರತದ 140 ಯುದ್ಧ ವಿಮಾನಗಳು

2019ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆಗೆ ಸೇರಿದ ಮಿಗ್-29 ಕೆ ವಿಮಾನ ಗೋವಾದಲ್ಲಿ ಅಪಘಾತಕ್ಕೀಡಾಗಿತ್ತು. ತರಬೇತಿಗಾಗಿ ಬಳಸುತ್ತಿದ್ದಾಗ ಈ ವಿಮಾನದಲ್ಲಿ ಇಬ್ಬರು ಪೈಲೆಟ್‌ಗಳಿದ್ದರು.

ಪುಲ್ವಾಮ ದಾಳಿ : ಬಾಂಬ್ ತಯಾರಿ ತರಬೇತಿ ಪಡೆದು ಕಾಶ್ಮೀರಕ್ಕೆ ಬಂದಿದ್ದರುಪುಲ್ವಾಮ ದಾಳಿ : ಬಾಂಬ್ ತಯಾರಿ ತರಬೇತಿ ಪಡೆದು ಕಾಶ್ಮೀರಕ್ಕೆ ಬಂದಿದ್ದರು

ಭಾರತೀಯ ನೌಕಾಪಡೆಯೇ ನೀಡಿದ್ದ ಮಾಹಿತಿಯಂತೆ 2015ರಿಂದ 2019ರ ತನಕ 41 ವಾಯುಪಡೆಯ ಪೈಲೆಟ್‌ಗಳು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 2019ರ ಫೆಬ್ರವರಿ 20ರಂದು ಸೂರ್ಯ ಕಿರಣ್ ವಿಮಾನ ಪತನಗೊಂಡು ಒಬ್ಬ ಪೈಲೆಟ್ ಮೃತಪಟ್ಟಿದ್ದರು.

2015-16ರಲ್ಲಿ 6, 2016-17ರಲ್ಲಿ 10, 2017-18ರಲ್ಲಿ 6, 2018-19ರಲ್ಲಿ 8 ವಿಮಾನ ಅಪಘಾತ ಪ್ರಕರಣಗಳು ನಡೆದಿವೆ. 2016-17ರಲ್ಲಿ ಹೆಚ್ಚು ಎಂದರೆ 29 ಪೈಲೆಟ್‌ಗಳು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

English summary
MiG-29K aircraft on a routine training sortie crashed in Goa. The pilot of the aircraft ejected safely and has been recovered. Probe has been ordered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X