ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಬಿಜೆಪಿ ಸರ್ಕಾರಕ್ಕೆ ಭಾರಿ ಹಿನ್ನಡೆ, ಮೈತ್ರಿ ಮುರಿದ ಎಂಜಿಪಿ

|
Google Oneindia Kannada News

ಪಣಜಿ, ಏಪ್ರಿಲ್ 14: ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕರ್ ಅವರ ಅಗಲಿಕೆಯ ನೋವಿನಲ್ಲೇ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ನಡೆಸಿದ ಬಿಜೆಪಿಗೆ ಈಗ ಆಘಾತಕಾರಿ ಸುದ್ದಿ ಬಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗೋವಾ ರಾಜಕೀಯ ದಿನೇ ದಿನೇ ನಾಟಕೀಯ ತಿರುವು ಪಡೆಯುತ್ತಿದ್ದು, ಬಿಜೆಪಿ ಸೇರಿದ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ(ಎಂಜಿಪಿ) ದ ನಾಯಕ, ಗೋವಾ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಮನೋಹರ್ ಅಜಗಾಂವ್ಕರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ಆದರೆ, ಈಗ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯಲು ಎಂಜಿಪಿ ಮುಂದಾಗಿರುವ ಸುದ್ದಿ ಬಂದಿದೆ.

ಗೋವಾ ರಾಜಕೀಯದಲ್ಲಿ ಮತ್ತೆ ನಾಟಕೀಯ ತಿರುವು!ಗೋವಾ ರಾಜಕೀಯದಲ್ಲಿ ಮತ್ತೆ ನಾಟಕೀಯ ತಿರುವು!

ಏಪ್ರಿಲ್ 23ರಂದು ಲೋಕಸಭೆ ಚುನಾವಣೆಗಾಗಿ ಮತದಾನ ಪ್ರಕ್ರಿಯೆಗೆ ರಾಜ್ಯ ಸಜ್ಜಾಗುತ್ತಿರುವ ವೇಳೆಯಲ್ಲೇ ಗೋವಾ ಸರ್ಕಾರದ ಬುಡ ಅಲ್ಲಾಡುತ್ತಿದೆ. ಲೋಕಸಭೆ ಚುನಾವಣೆ ಜೊತೆಗೆ ಮಪೂಸ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಎಂಜಿಪಿ ಅಧ್ಯಕ್ಷ ದೀಪಕ್ ಧಾವಳೀಕರ್ ಘೋಷಿಸಿದ್ದಾರೆ.

MGP to Withdraw Its Support to BJP-Led Coalition in Goa

ಎಂಜಿಪಿಯ ಸುದಿನ್ ಧವಾಲಿಕರ್ ಮತ್ತು ಗೋವಾ ಫಾರ್ವರ್ಡ್ ಪಕ್ಷದ ವಿಜಯ್ ಸರ್ದೇಸಾಯಿ ಇಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿತ್ತು.

ಎಂಜಿಪಿಯ ಮೂವರು ಸದಸ್ಯರಲ್ಲಿ ಇಬ್ಬರು(ಮನೋಹರ್ ಅಜಗಾಂವ್ಕರ್ ಮತ್ತು ದೀಪಕ್ ಪಾವಸ್ಕರ್) ಬಿಜೆಪಿ ಸೇರಿ, ಎಂಜಿಪಿಯನ್ನು ಬಿಜೆಪಿ ಜೊತೆ ವಿಲೀನಗೊಳಿಸಿದ್ದರು. ಆ ನಂತರ ಸುಧಿನ್ ಧವಾಲಿಕರ್ ಅವರನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಉಪಮುಖ್ಯಮಂತ್ರಿ ಹುದ್ದೆಯಿಂದ ಕೈಬಿಟ್ಟಿದ್ದರು.

ಆಯುರ್ವೇದ ವೈದ್ಯ ಪ್ರಮೋದ್ ಈಗ ಗೋವಾ ಮುಖ್ಯಮಂತ್ರಿ ಆಯುರ್ವೇದ ವೈದ್ಯ ಪ್ರಮೋದ್ ಈಗ ಗೋವಾ ಮುಖ್ಯಮಂತ್ರಿ

ಹಿರಿಯ ಮುಖಂಡ ಸುದೀನ್ ಧಾವಿಳ್ಕರ್ ಅವರನ್ನು ಸಮ್ಮಿಶ್ರ ಸರ್ಕಾರದಿಂದ ಉಚ್ಚಾಟಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಗಿದ್ದು, ಸಿಎಂ ಪ್ರಮೋದ್ ಸಾವಂತ್ ಅವರ ಬಗ್ಗೆ ಕೂಡಾ ಅಪಸ್ವರ ಕೇಳಿ ಬಂದಿದೆ.

ಸದ್ಯ ಎಂಜಿಪಿ ಶಾಸಕರು ಬಿಜೆಪಿ ಸೇರಿದ್ದಾರೆ. 40 ಸದಸ್ಯ ಬಲದ ವಿಧಾನಸಭೆಯಲ್ಲಿ 36 ಸದಸ್ಯರಿದ್ದು, ಎಂಜಿಪಿ ಶಾಸಕನ ಬೆಂಬಲ ಹಿಂತೆಗೆದುಕೊಂಡರೆ ಬಿಜೆಪಿ ಬಲ 20ಕ್ಕಿಳಿಯಲಿದೆ ಈ ಪೈಕಿ ಬಿಜೆಪಿ 14, ಗೋವಾ ಫಾರ್ವರ್ಡ್ ಫ್ರಂಟ್ 3, 3 ಪಕ್ಷೇತರರಿದ್ದಾರೆ. ಕಾಂಗ್ರೆಸ್ 14 ಶಾಸಕರನ್ನು ಹೊಂದಿದೆ.

English summary
The Maharashtrawadi Gomantak Party (MGP) on Friday, 12 April, decided to withdraw its support to Goa’s BJP-led coalition government, reported The Hindu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X