• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೂಗಲ್ಲಿ ನಳಿಗೆ ಸಿಕ್ಕಿಸಿಕೊಂಡೇ 'How's the Josh?' ಎಂದ ಪರಿಕ್ಕರ್!

|

ಪಣಜಿ, ಜನವರಿ 28: ಭಯೋತ್ಪಾದಕರ ಅಟ್ಟಹಾಸಕ್ಕೆ ಅವರದೇ ಭಾಷೆಯಲ್ಲಿ ಉತ್ತರ ನೀಡುವ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುತ್ತೇವೆಂಬ ಖಡಕ್ ಸಂದೇಶ ನೀಡುವ, ನಮ್ಮೊಳಗೆ ಸುಪ್ತವಾಗಿರುವ ದೇಶಭಕ್ತನಿಗೆ 'ಜೋಷ್' ನೀಡುವ 'ಉರಿ' ಚಿತ್ರ ಸೂಪರ್ ಹಿಟ್ ಆಗಿದ್ದಾಗಿದೆ.

ಈ ಚಿತ್ರದ 'How's the Josh?' ಅಂತೂ ಟ್ರೆಂಡಿಂಗ್ ಡೈಲಾಗ್ ಆಗಿ, ಪೇಲವ ಮನಸ್ಸಲ್ಲಿ ಹುರುಪಿನ ಆಶಾಕಿರಣ ಬಿತ್ತುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಈ ಚಿತ್ರವನ್ನು ಹಲವು ನಾಯಕರೇ ಕೊಂಡಾಡಿದ್ದಾರೆ. ನಾಯಕ ವಿಕಿ ಕೌಶಾಲ್ ನಟನೆಗೆ ಸಲಾಂ ಅಂದಿದ್ದಾರೆ.

ವೈರಲ್ ಚಿತ್ರ:ಮೂಗಿಗೆ ನಳಿಕೆ ಹಾಕಿಯೇ ಕೆಲಸದಲ್ಲಿ ತಲ್ಲೀನ ಪರಿಕ್ಕರ್

ಇದೀಗ ಅನಾರೋಗ್ಯದ ನಡುವೆಯೂ ತಮ್ಮ ಮೆದು ದನಿಯಲ್ಲೇ 'How's the Josh?' ಎಂದು ಕೇಳುತ್ತ, ಬತ್ತದ ಉತ್ಸಾಹದ ಸೆಲೆ ಎನ್ನಿಸಿದವರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್. ಜೊತೆಗೆ ಈ ಚಿತ್ರವನ್ನು ಬೆಂಗಳೂರಿನಲ್ಲಿ ವೀಕ್ಷಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಹ 'How's the Josh?' ಎನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ!

'How's the Josh?'

ಪಣಜಿಯಲ್ಲಿ ತಮ್ಮ ಕನಸಿನ ಯೋಜನೆಯಾದ ಮಾಂಡೋವಿ ನದಿಗೆ ಕಟ್ಟಲಾದ 'ಅಟಲ್ ಸೇತು' ವನ್ನು ಉದ್ಘಾಟಿಸಿದ ನಂತರ, ಪರಿಕ್ಕರ್ 'How's the Josh?' ಎಂದು ಜನರಲ್ಲಿ ಕೇಳಿದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ 63 ವರ್ಷ ವಯಸ್ಸಿನ ಪರಿಕ್ಕರ್, ನ್ಯಾಸೋ ಗ್ಯಾಸ್ಟ್ರಿಕ್ ಟ್ಯೂಬ್ ತೊಟ್ಟು ಸೇತುವೆಯನ್ನು ಉದ್ಘಾಟಿಸಿದ ನಂತರ ಅವರು ಜನರೊಂದಿಗೆ ಮಾತನಾಡುತ್ತಿದ್ದರು. ಅನಾರೋಗ್ಯದ ಕಾರಣ ದೇಹಕ್ಕೆ ಆವರಿಸಿರುವ ನಿಶ್ಶಕ್ತಿ ಎದ್ದು ಕಾಣುತ್ತಿತ್ತಾದರೂ, ಕಣ್ಣಲ್ಲಿ ಜೀವನ ಪ್ರೀತಿ ಬತ್ತಿರಲಿಲ್ಲ. ಧ್ವನಿ ಜೋರಾಗಿ ಕೇಳಿಸದಿದ್ದರೂ, ಅದರಲ್ಲಿದ್ದ ಹುರುಪು ಮರೆಯಾಗಿರಲಿಲ್ಲ.

ಬೆಂಗಳೂರಿನಲ್ಲಿ'ಉರಿ' ನೋಡಿದ ರಕ್ಷಣಾ ಸಚಿವೆ

ಬೆಂಗಳೂರಿನ ಬೆಳ್ಳಂದೂರಿನ ಪಿವಿಆರ್ ಸಿನಿಮಾಸ್ ನಲ್ಲಿ 'ಉರಿ' ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರ ವೀಕ್ಷಿಸಿದ ನಿರ್ಮಲಾ ಸೀತಾರಾಮನ್, ಚಿತ್ರ ಮುಗಿದ ನಂತರ 'How's the Josh?' ಎಂದು ಕೇಳಿ ಸಿನಿಮಾ ವೀಕ್ಷಿಸಲು ಬಂದಿದ್ದ ಜನರಲ್ಲಿ ಮತ್ತಷ್ಟು ಜೋಷ್ ಹೆಚ್ಚಿಸಿದರು. ಈ ವಿಡಿಯೋ ಸಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತೀವ್ರ ಅನಾರೋಗ್ಯದಲ್ಲೂ ಕರ್ತವ್ಯ ಪ್ರಜ್ಞೆ: ಪರಿಕ್ಕರ್ ಚಿತ್ರಕ್ಕೆ ಉಘೇ!

ಟ್ವಿಟ್ಟರ್ ನಲ್ಲಿ ಶ್ಲಾಘನೆ

ಅವರಿಗೊಂದು ಸಲಾಂ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಅವರು ಹೈ ಜೋಶ್ ನಲ್ಲೇ ಇರುತ್ತಾರೆ. ಯಾವಾಗಲೂ ಪಾಸಿಟಿವ್ ಆಗಿರಬೇಕು ಎಂಬ ಮಂತ್ರವನ್ನು ಅವರು ಇಂದು ನೀಡಿದ್ದಾರೆ. ಅದನ್ನು ಅವರೂ ಪಾಲಿಸುತ್ತಿದ್ದಾರೆ, ಅದೇ ಮಂತ್ರವನ್ನೇ ಜೀವಿಸುತ್ತಿದ್ದಾರೆ. ಅವರು ನಮಗೆಲ್ಲ ಎಂದಿಗೂ ಸ್ಫೂರ್ತಿ ಎಂದು ರೂಪಾ ವಲೌಲಿಕರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ವಾಘಾ ಗಡಿಯಲ್ಲಿ ಗಣರಾಜ್ಯೋತ್ಸವ

'ಉರಿ' ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರ ಯಶಸ್ವಿಯಾದ ನಂತರ ವಾಘಾ ಗಡಿಯಲ್ಲಿ ಉರಿ ಚಿತ್ರದ ನಾಯಕ ವಿಕ್ಕಿ ಕೌಶಾಲ್ ಮತ್ತು ನಾಯಕಿ ಯಾಮಿ ಗೌತಮ್ ಗಣರಾಜ್ಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ 'How's the Josh?' ಎಂದು ನೆರೆದಿದ್ದ ಜನರನ್ನು ವಿಕಿ ಕೌಶಾಲ್ ಹುರುದುಭಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After Uri, the surgical strike movie becomes super hit, 'How's the josh' dialogue is trending now. Goa CM Manohar Parrikar and Defence minister Nirmala sitharaman's video, in which they are chanting 'How's the josh' becomes viral on social media now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more