ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದಾಯಿ; ಕರ್ನಾಟಕದ ವಿರುದ್ಧ ಸುಪ್ರೀಂಗೆ ಗೋವಾ ಅರ್ಜಿ

|
Google Oneindia Kannada News

ಪಣಜಿ, ಅಕ್ಟೋಬರ್ 06: ಮಹದಾಯಿ ವಿವಾದದಲ್ಲಿ ಗೋವಾ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಕರ್ನಾಟಕ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಗೋವಾ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಕುರಿತು ಹೇಳಿಕೆ ನೀಡಿದ್ದಾರೆ. "ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ" ಹೇಳಿದ್ದಾರೆ.

ಮಹದಾಯಿ : ಕಾಮಗಾರಿ ಆರಂಭಿಸದಂತೆ ಸುಪ್ರೀಂ ಸೂಚನೆಮಹದಾಯಿ : ಕಾಮಗಾರಿ ಆರಂಭಿಸದಂತೆ ಸುಪ್ರೀಂ ಸೂಚನೆ

"2002 ರಿಂದ 2020ರ ತನಕ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಮಹದಾಯಿ ವಿವಾದವಿದೆ. 2006-07ರಲ್ಲಿ ಕಾಂಗ್ರೆಸ್ ಸರ್ಕಾರ ಅಣೆಕಟ್ಟು ಕಟ್ಟಲು ಅನುಮತಿ ನೀಡಿತು" ಎಂದು ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದಾರೆ.

ಕರ್ನಾಟಕಕ್ಕೆ ಕೇಂದ್ರದ ಉಡುಗೊರೆ; ಮಹದಾಯಿ ಯೋಜನೆ ಅಧಿಸೂಚನೆ ಪ್ರಕಟ ಕರ್ನಾಟಕಕ್ಕೆ ಕೇಂದ್ರದ ಉಡುಗೊರೆ; ಮಹದಾಯಿ ಯೋಜನೆ ಅಧಿಸೂಚನೆ ಪ್ರಕಟ

Mahadayi Goa To File Contempt Petition Against Karnataka

"ಕರ್ನಾಟಕ ಸರ್ಕಾರ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ ಎಂದು ಹೇಳಿದೆ. ನೀರು ವ್ಯರ್ಥವಾಗುತ್ತಿಲ್ಲ ಎಂದು ನಾನು ಅವರ ಮನವೊಲಿಸಿದ್ದೇನೆ. ನದಿ ನೀರನ್ನು ತಿರುಗಿಸಿರುವ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ" ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

ಮಹದಾಯಿ; ಅಧಿಸೂಚನೆ ಹೊರಡಿಸಲು ಸುಪ್ರೀಂ ನಿರ್ದೇಶನಮಹದಾಯಿ; ಅಧಿಸೂಚನೆ ಹೊರಡಿಸಲು ಸುಪ್ರೀಂ ನಿರ್ದೇಶನ

ಮಹದಾಯಿ ನ್ಯಾಯಾಧೀಕರಣ ಮೂರು ರಾಜ್ಯಗಳಿಗೆ ನದಿ ನೀರನ್ನು ಹಂಚಿಕೆ ಮಾಡಿದೆ. ಆದರೆ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.

ಪ್ರಸ್ತುತ ಕರ್ನಾಟಕ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೆ, ಗೋವಾ ಸರ್ಕಾರ ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿದೆ.

English summary
Chief Minister of Goa Pramod Sawant said that we are filing a contempt petition against Karnataka for the diversion of Mahadayi water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X