ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ ಗೋವಾ ಸರ್ಕಾರ!

|
Google Oneindia Kannada News

ಪಣಜಿ, ಫೆಬ್ರವರಿ 12 : ಸಾಲು ಸಾಲು ರಜೆ ಸಿಗುತ್ತಿದ್ದಂತೆ ಗೋವಾಕ್ಕೆ ಕುಡಿಯಲು ಬರುತ್ತಿದ್ದ ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಕಹಿ ಸುದ್ದಿಯನ್ನು ನೀಡಿದೆ. ಏಪ್ರಿಲ್‌ನಿಂದ ಗೋವಾದಲ್ಲಿ ಎಲ್ಲಾ ಬಗೆಯ ಮದ್ಯದ ಬೆಲೆಗಳು ಏರಿಕೆಯಾಗಲಿವೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬಜೆಟ್‌ನಲ್ಲಿ ಅಬಕಾರಿ ಸುಂಕ ಮತ್ತು ಮದ್ಯ ಮಾರಾಟದ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಆದಾಯವನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಗೋವಾಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಗೋವಾ

ಬಜೆಟ್‌ನಲ್ಲಿ ಅಬಕಾರಿ ಸುಂಕ ಮತ್ತು ಎಲ್ಲಾ ಬಗೆಯ ಮದ್ಯ ಮಾರಾಟದ ಮೇಲಿನ ತೆರಿಗೆಯನ್ನು ಶೇ 20 ರಿಂದ 50ಕ್ಕೆ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ 100 ಕೋಟಿಯಷ್ಟು ಆದಾಯ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

ಕುಡುಕರಿಗೆ ಆಸೆ ಹುಟ್ಟಿಸಿ ಮತ್ತೆ ತಣ್ಣೀರು ಸುರಿದ ಅಬಕಾರಿ ಸಚಿವ!ಕುಡುಕರಿಗೆ ಆಸೆ ಹುಟ್ಟಿಸಿ ಮತ್ತೆ ತಣ್ಣೀರು ಸುರಿದ ಅಬಕಾರಿ ಸಚಿವ!

Liquor No Cheaper In Goa From April 2020

ಗೋವಾಕ್ಕೆ ಆಗಮಿಸುವ ಪ್ರವಾಸಿಗರಲ್ಲಿ ಮದ್ಯ ಪ್ರಿಯರು ಹೆಚ್ಚು. ಬೇರೆ-ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಗೋವಾದಲ್ಲಿ ಮದ್ಯದ ದರ ಕಡಿಮೆ ಇತ್ತು. ಬಜೆಟ್‌ನಲ್ಲಿ ಮಾಡಲಾದ ಘೋಷಣೆ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಮದ್ಯದ ದರ ಏರಿಕೆಯಾಗಲಿದೆ.

ಶಿವಮೊಗ್ಗದ ಈ ತಾಲೂಕಿನ ದಿನಸಿ ಅಂಗಡಿಯಲ್ಲೂ 'ಮದ್ಯ'! ಶಿವಮೊಗ್ಗದ ಈ ತಾಲೂಕಿನ ದಿನಸಿ ಅಂಗಡಿಯಲ್ಲೂ 'ಮದ್ಯ'!

ಪ್ರವಾಸಿಗರು ಗೋವಾದಿಂದ ತಮ್ಮ ರಾಜ್ಯಗಳಿಗೆ ಮದ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ಪ್ರಸ್ತುತ ಒಂದು ಬಾಟಲ್ ಮದ್ಯವನ್ನು ತೆಗೆದುಕೊಂಡು ಹೋಗಲು ಅವಕಾಶವಿದೆ. ಇದನ್ನು ಎರಡು ಬಾಟಲ್‌ಗೆ ಹೆಚ್ಚಿಸುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ.

ಗೋವಾದಲ್ಲಿ ತಯಾರು ಮಾಡುವ ಮದ್ಯದ ಬಾಟಲ್‌ಗಳನ್ನು ಹೆಚ್ಚು ತೆಗೆದುಕೊಂಡು ಹೋಗಲು ಒಪ್ಪಿಗೆ ನೀಡಿದರೆ ರಾಜ್ಯ ಅಬಕಾರಿ ಇಲಾಖೆಯ ಆದಾಯವೂ ಹೆಚ್ಚಲಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಜನರು ಮದ್ಯದ ಬಾಟಲ್‌ಗಳನ್ನು ಗೋವಾದಿಂದ ಹೆಚ್ಚಾಗಿ ತೆಗೆದುಕೊಂಡು ಹೋಗುತ್ತಾರೆ.

English summary
Goa government will hike excise duties and fee on sale of liquor 20 to 50 percent for all categories. From April 1 new price will come to effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X