ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ ನೋಂದಣಿಗೆ ಎಚ್ ಐವಿ ಪರೀಕ್ಷೆ ಕಡ್ಡಾಯಕ್ಕೆ ಗೋವಾ ಸರಕಾರ ಚಿಂತನೆ

|
Google Oneindia Kannada News

ಪಣಜಿ, ಜುಲೈ 9: ಮದುವೆ ನೋಂದಣಿಗೂ ಮುನ್ನ ಎಚ್ ಐವಿ ಪರೀಕ್ಷೆ ಕಡ್ಡಾಯಗೊಳಿಸುವ ಬಗ್ಗೆ ಗೋವಾ ಸರಕಾರ ಚಿಂತನೆ ನಡೆಸಿದೆ ಎಂದು ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ. ಸದ್ಯಕ್ಕೆ ಕಡ್ಡಾಯ ಅಲ್ಲದ ಎಚ್ ಐವಿ ಪರೀಕ್ಷೆಯನ್ನು ಇನ್ನು ಮುಂದೆ ವಿವಾಹ ನೋಂದಣಿಗೆ ಕಡ್ಡಾಯ ಮಾಡುವ ಬಗ್ಗೆ ಆಲೋಚನೆ ಇದೆ ಎಂದು ಅವರು ಹೇಳಿದ್ದಾರೆ.

ರಾಣೆ ಅವರು ಕಾನೂನು ಸಚಿವರೂ ಹೌದು. ಕಾನೂನು ಇಲಾಖೆಯಿಂದ ಶೀಘ್ರದಲ್ಲಿ ಇದಕ್ಕೆ ಸಮ್ಮತಿ ದೊರೆತರೆ ವಿಧಾನಸಭೆಯಲ್ಲಿ ಮುಂಗಾರು ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ಜುಲೈ ಹದಿನೈದನೇ ತಾರೀಕು ಗೋವಾ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭ ಆಗಲಿದೆ.

 HIV test may mandatory in Goa before marriage registration

ಹದಿಮೂರು ವರ್ಷಗಳ ಹಿಂದೆ ಆರೋಗ್ಯ ಸಚಿವರಾಗಿದ್ದ ದಯಾನಂದ್ ನರ್ವೇಕರ್ ಅವರು ಇದೇ ರೀತಿಯ ಪ್ರಸ್ತಾವವನ್ನು ಇಟ್ಟಿದ್ದರು. ಮದುವೆಗೆ ಮುನ್ನ ಎಚ್ ಐವಿ ಪರೀಕ್ಷೆ ಕಡ್ಡಾಯ ಮಾಡಬೇಕು ಎಂದು ಗೋವಾ ಸಂಪುಟದ ಎದುರು ಪ್ರಸ್ತಾವ ಇಟ್ಟಿದ್ದರು. ಆದರೆ ಆಗ ಆ ಪ್ರಸ್ತಾವಕ್ಕೆ ಮನ್ನಣೆ ದೊರೆಯಲಿಲ್ಲ. ಈ ಬಾರಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

English summary
HIV test may mandatory in Goa before marriage registration. Goa health minister Vishwajit Rane gives hint and likely to present law in assembly monsoon session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X