ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಚುನಾವಣೆ; ಎನ್‌ಸಿಪಿ ಪಕ್ಷದಿಂದ ಮಹತ್ವದ ಘೋಷಣೆ

|
Google Oneindia Kannada News

ಪಣಜಿ, ಅಕ್ಟೋಬರ್ 27: " ಕಾಂಗ್ರೆಸ್ ಮತ್ತು ಬಿಜೆಪಿಯೇತರ ಆಯ್ಕೆಯನ್ನು ಗೋವಾ ಜನರಿಗೆ 2022ರ ಚುನಾವಣೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ನೀಡಲಿದೆ" ಎಂದು ಪಕ್ಷದ ನಾಯಕ, ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್ ಹೇಳಿದರು.

ಮಂಗಳವಾರ ಪಣಜಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಬಿಜೆಪಿಯೇತರ ಚುನಾವಣೋತ್ತರ ಮೈತ್ರಿಯೂ ನಡೆಯಬಹುದು. ಮಹಾರಾಷ್ಟ್ರ ಮಾದರಿಯಲ್ಲಿ ಮೈತ್ರಿ ಸರ್ಕಾರವೂ ಅಧಿಕಾರಕ್ಕೆ ಬರಬಹುದು" ಎಂದರು.

ಬಿಹಾರದಲ್ಲಿ ಎನ್‌ಸಿಪಿ ಪರ 40 ಸ್ಟಾರ್ ಪ್ರಚಾರಕರು ಕಣಕ್ಕೆ ಬಿಹಾರದಲ್ಲಿ ಎನ್‌ಸಿಪಿ ಪರ 40 ಸ್ಟಾರ್ ಪ್ರಚಾರಕರು ಕಣಕ್ಕೆ

"ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿ ಇತರ ಸಮಾನ ಮನಸ್ಕ ಪಕ್ಷಗಳು ಗೋವಾದಲ್ಲಿ ಜನರ ವಿಶ್ವಾಸಗಳಿಸಲಿದ್ದಾರೆ ಎಂಬ ಭರವಸೆ ಇದೆ. ಎನ್‌ಸಿಪಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗಾಗಿ ಕೆಲಸ ಮಾಡಲಿದೆ" ಎಂದು ತಿಳಿಸಿದರು.

ಶಿವಸೇನಾ-ಎನ್‌ಸಿಪಿ ಭೇಟಿ: ಮಹಾರಾಷ್ಟ್ರ ಸರ್ಕಾರ ಗಟ್ಟಿಯಾಗಿದೆ ಶಿವಸೇನಾ-ಎನ್‌ಸಿಪಿ ಭೇಟಿ: ಮಹಾರಾಷ್ಟ್ರ ಸರ್ಕಾರ ಗಟ್ಟಿಯಾಗಿದೆ

Goa Will Get Non Congress Non BJP Option Says Praful Patel

"ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳ ಜೊತೆ ಮೈತ್ರಿ ಆಗಬಹುದು. ಆದರೆ, ಎನ್‌ಸಿಪಿ ಪಕ್ಷ ಆಮ್ ಆದ್ಮಿ ಪಕ್ಷದ ಜೊತೆ ಹೋಗುವುದಿಲ್ಲ" ಎಂದು ಪ್ರಫುಲ್ ಪಟೇಲ್ ಸ್ಪಷ್ಟಪಡಿಸಿದರು.

ಕ್ರಿಕೆಟ್ ಶೈಲಿಯಲ್ಲೇ ನಿತಿನ್ ಗಡ್ಕರಿ ಕಾಲೆಳೆದ ಎನ್‌ಸಿಪಿಕ್ರಿಕೆಟ್ ಶೈಲಿಯಲ್ಲೇ ನಿತಿನ್ ಗಡ್ಕರಿ ಕಾಲೆಳೆದ ಎನ್‌ಸಿಪಿ

"ರಾಜ್ಯದಲ್ಲಿನ ಸಣ್ಣ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಬಯಸಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿಗಳ ಜೊತೆಯೂ ಮಾತುಕತೆ ನಡೆಸಲಾಗಿದೆ" ಎಂದು ಪ್ರಫುಲ್ ಪಟೇಲ್ ತಿಳಿಸಿದರು.

"18 ತಿಂಗಳ ಮೊದಲೇ ಗೋವಾದಲ್ಲಿ ಚುನಾವಣೆ ಸಿದ್ಧತೆಯನ್ನು ಆರಂಭಿಸಲಾಗುತ್ತಿದೆ. ಮಹಾರಾಷ್ಟ್ರದ ಹಿರಿಯ ಸಚಿವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗುತ್ತದೆ" ಎಂದು ಪಟೇಲ್ ಹೇಳಿದರು.

ಗೋವಾದಲ್ಲಿ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯ ಗೋವಾ. ಪ್ರಸ್ತುತ ಬಿಜೆಪಿ ಮೈತ್ರಿಕೂಟದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ.

English summary
NCP leader Praful Patel said that Nationalist Congress Party will offer a non-Congress non-BJP option for the people of Goa in 2022 elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X