ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಬೀಚಿನಲ್ಲಿ ಮದ್ಯ ಸೇವನೆಗೆ ನಿಷೇಧ, ಪ್ರವಾಸಿಗರಿಂದ ಸ್ವಾಗತ!

|
Google Oneindia Kannada News

ಪಣಜಿ, ಫೆಬ್ರವರಿ 03: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುವವರಿಗೆ ಜೈಲು ಶಿಕ್ಷೆ ಸೇರಿದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರುವ ಮನೋಹರ್ ಪಾರಿಕ್ಕರ್ ಸರ್ಕಾರದ ಕ್ರಮವನ್ನು ಪ್ರವಾಸಿಗರು ಸ್ವಾಗತಿಸಿದ್ದಾರೆ.

ಗೋವಾದಲ್ಲಿ ರಸ್ತೆ ಬದಿಯಲ್ಲಿ ಕುಳಿತು ಬಿಯರ್ ಕುಡಿದರೆ ನೇರ ಜೈಲಿಗೆ ಸೇರಬೇಕಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುವುದು ಕಂಡು ಬಂದಲ್ಲಿ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಲಾಗಿದೆ. ಐಪಿಸಿ ಸೆಕ್ಷನ್ 34ರ ಅನ್ವಯ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

ಮೂಗಲ್ಲಿ ನಳಿಗೆ ಸಿಕ್ಕಿಸಿಕೊಂಡೇ 'How's the Josh?' ಎಂದ ಪರಿಕ್ಕರ್! ಮೂಗಲ್ಲಿ ನಳಿಗೆ ಸಿಕ್ಕಿಸಿಕೊಂಡೇ 'How's the Josh?' ಎಂದ ಪರಿಕ್ಕರ್!

ಗೋವಾ ಪ್ರವಾಸಿ ತಾಣ (ರಕ್ಷಣೆ ಮತ್ತು ನಿರ್ವಹಣೆ) ಕಾಯ್ದೆ, 2001ರ ತಿದ್ದುಪಡಿ ಪ್ರಕಾರ ಬೀಚ್​ಗಳು ಸೇರಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವಂತಿಲ್ಲ. ಮದ್ಯದ ಬಾಟಲಿಗಳನ್ನು ಒಡೆದು ಹಾಕುವಂತಿಲ್ಲ.ಈ ಕಾಯ್ದೆಯನ್ನು ಜಾರಿಗೊಳಿಸಿರುವ ಗೋವಾ ಸರ್ಕಾರ, ಸಾರ್ವಜನಿಕ ಸ್ಥಲದಲ್ಲಿ ಮದ್ಯಪಾನ ಮಾಡುತ್ತಾ ಸಿಕ್ಕಿಬಿದ್ದರೆ 2 ಸಾವಿರ ರೂಪಾಯಿ ದಂಡ, ಜೈಲುಶಿಕ್ಷೆ ವಿಧಿಸಲಿದೆ.

Goa: Tourists give thumbs-up to law banning drinking, cooking in public places

ಪ್ರವಾಸಿಗರು ಒಂದು ವೇಳೆ ಗುಂಪು ಗುಂಪಾಗಿ ಮದ್ಯಪಾನ ಮಾಡುವುದು ಕಂಡುಬಂದರೆ ಆ ತಂಡಕ್ಕೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಗೋವಾ ವಿಧಾನಸಭೆ ಇತ್ತೀಚೆಗೆ ಅನುಮೋದಿಸಿರುವ ಗೋವಾ ಪ್ರವಾಸಿ ತಾಣ (ರಕ್ಷಣೆ ಮತ್ತು ನಿರ್ವಹಣೆ) ಕಾಯ್ದೆ, 2001ರ ತಿದ್ದುಪಡಿ ಪ್ರಕಾರ ಬೀಚ್​ಗಳು ಸೇರಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವಂತಿಲ್ಲ. ಮದ್ಯದ ಬಾಟಲಿಗಳನ್ನು ಒಡೆದು ಹಾಕುವಂತಿಲ್ಲ.

ನೆಲಮಾಳಿಗೆಯಲ್ಲಿದ್ದ ಗೋವಾ ಮದ್ಯದ ಬಾಟಲಿಗಳನ್ನು ಹೊರತೆಗೆದ ಬೆಂಗಳೂರು ಅಬಕಾರಿ ಅಧಿಕಾರಿಗಳು ನೆಲಮಾಳಿಗೆಯಲ್ಲಿದ್ದ ಗೋವಾ ಮದ್ಯದ ಬಾಟಲಿಗಳನ್ನು ಹೊರತೆಗೆದ ಬೆಂಗಳೂರು ಅಬಕಾರಿ ಅಧಿಕಾರಿಗಳು

ಮುಂಬೈನ ನಿವಾಸಿ ಸುಭಾಷ್ ಕಪೂರ್ ಅವರು ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಅಡುಗೆ ಮಾಡುವುದನ್ನು ನಿಷೇಧಿಸಿರುವುದು ಸ್ವಾಗತಾರ್ಹ, ಇದನ್ನು ದೇಶದೆಲ್ಲೆಡೆ ವಿಸ್ತರಿಸಬೇಕು. ಕೆಲ ವರ್ಷಗಳ ಹಿಂದೆಯೇ ಇದನ್ನು ಅನುಷ್ಠಾನಗೊಳಿಸಬೇಕಿತ್ತು. ಇದರಿಂದ ಗೋವಾ ಬೀಚ್ ಹಾಗೂ ನಗರ ಸ್ವಚ್ಛವಾಗಿರುತ್ತದೆ ಎಂದಿದ್ದಾರೆ.

ಲಂಡನ್ನಿನ ದಂಪತಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಇದು ತುಂಬಾ ಉತ್ತಮ ನಿರ್ಧಾರ, ಮದ್ಯ ಸೇವಿಸಬೇಕಾದರೆ ಮನೆ, ಹೋಟೆಲ್ ರೂಮ್ ಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆ ಜತೆಗೆ ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ನಗರವನ್ನು ಹಾಳುಗೆಡವುದು ತಪ್ಪುತ್ತದೆ ಎಂದಿದ್ದಾರೆ.

ಸ್ಥಳೀಯರಾದ ಅಮಿತ್ ತೋಮರ್ ಅವರು ಪ್ರತಿಕ್ರಿಯಿಸಿ, ಈ ರೀತಿ ಕಠಿಣ ನಿಯಮಗಳಿಂದ ಪ್ರವಾಸೋದ್ಯಮಕ್ಕೆ ಹಾನಿಯಾಗುತ್ತದೆ. ಪುಂಡಾಟಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದರೆ ಸಾಕಿತ್ತು ಎಂದಿದ್ದಾರೆ.

English summary
Scores of visitors in Goa, which is considered to be the country's most popular tourist destination, hailed the decision taken by the state assembly recently to ban drinking and cooking in the open on beaches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X