ಗೋವಾ: ಮುಂದಿನ ಸಿಎಂ ಆಯ್ಕೆಯಲ್ಲಿ ಬಿಜೆಪಿ ವಿಳಂಬ ಮಾಡುತ್ತಿರುವುದಕ್ಕೆ ಮೂರು ಕಾರಣಗಳಿವು
ಪುಟ್ಟ ರಾಜ್ಯ ಗೋವಾನಲ್ಲಿ ಪ್ರಮೋದ್ ಸಾವಂತ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಬಿಜೆಪಿ ಸರಕಾರ ರಚಿಸಲು ಪ್ರಯತ್ನಿಸುತ್ತಿದೆ. ಗೋವಾ ವಿಧಾನ ಸಭೆಯ 40 ಸ್ಥಾನಗಳ ಪೈಕಿ 20 ರಲ್ಲಿ ಜಯ ಸಾಧಿಸಿರುವ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಗೋವಾ ಫಲಿತಾಂಶಗಳು ಪ್ರಕಟಗೊಂಡ ನಂತರ ತನ್ನ ಪ್ರಮುಖ ಮಿತ್ರಪಕ್ಷವಾಗಿರುವ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿಯ ಬೆಂಬಲವನ್ನೂ ಪಡೆದುಕೊಂಡಿದೆ. ಇದಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಜಯಭೇರಿ ಬಾರಿಸಿರುವ ಮೂವರು ಪಕ್ಷೇತರ ಶಾಸಕರು ಸಹ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.
ವಿಧಾನಸಭೆಯಲ್ಲಿ ಬಹುಮತಕ್ಕೆ ಸ್ಥಾನದ ಕೊರತೆಯಿಂದಾಗಿ ಅರ್ಧದಾರಿಯಲ್ಲೇ ಉಳಿದಿರುವ ಮುಖ್ಯಮಂತ್ರಿ ಆಯ್ಕೆಪ್ರಕ್ರಿಯೆಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಇನ್ನೂ ಪೂರ್ಣಗೊಳಿಸಿಲ್ಲ. ಸದ್ಯ ಹಂಗಾಮಿ ಸಿಎಂ ಆಗಿರುವ ಪ್ರಮೋದ್ ಸಾವಂತ್ ಅವರು ಮತ್ತೊಮ್ಮೆ ಆ ಸ್ಥಾನಕ್ಕೆ ತಮ್ಮ ಹೆಸರು ಹೇಳಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಆದಾಗ್ಯೂ, ಕೆಲವು ಅಡಚಣೆಗಳಿವೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸುತ್ತವೆ. ಬಿಜೆಪಿಗೆ ಸಿಎಂ ಅನ್ನು ಆಯ್ಕೆ ಮಾಡುವ ಸಂದಿಗ್ಧತೆ ಎದುರಾಗಿದೆ. ಸಿಎಂ ಸ್ಥಾನಕ್ಕೆ ಹೆಸರು ಅಂತಿಮಗೊಳಿಸಲು ವಿಳಂಬವಾಗಲು ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಕರಾವಳಿ ರಾಜದ್ಯಲ್ಲಿ ಬಿಜೆಪಿ ಸರ್ಕಾರ ರಚಿಸಲ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆಯಾದರೂ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಅನ್ನೋದು ಸಸ್ಪೆನ್ಸ್ ಆಗಿ ಉಳಿದಿದೆ. ಮೂಲಗಳ ಪ್ರಕಾರ ಸಾವಂತ್ ಪಕ್ಷದ ವರಿಷ್ಠರ ವಿಶ್ವಾಸ ಕಳೆದುಕೊಂಡಿದ್ದಾರೆ. ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗುವ ಸಂಕ್ವೆಲಿಮ್ ಕ್ಷೇತ್ರದಲ್ಲಿ ಸಾವಂತ್ ಕೇವಲ 666 ವೋಟುಗಳಿಂದ ಗೆಲುವು ಸಾಧಿಸಿದ್ದಾರೆ.
ಅದಾಗ್ಯೂ "ಕೇಂದ್ರ ಸರ್ಕಾರ ನಾಯಕತ್ವದ ಅಂತಿಮ ಹೆಸರನ್ನು ನಿರ್ಧರಿಸಲು ಸಾಧ್ಯವಾಗಿದೆ. ಅದನ್ನು ಶೀಘ್ರವೇ ಪ್ರಕಟಿಸಬೇಕು. ನಾಲ್ಕೂ ರಾಜ್ಯಗಳ ಸಿಎಂಗಳ ಹೆಸರು ಏಕಕಾಲಕ್ಕೆ ಘೋಷಣೆಯಾಗಲಿದೆ. ಗೋವಾ ಸಿಎಂ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಇದು ಪ್ರಮುಖ ವಿಳಂಬವಾಗಿದೆ" ಎಂದು ಬಿಜೆಪಿಯ ಉನ್ನತ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

ಕಾರಣ ಎರಡು: ರಾಣೆ ಅಥವಾ ಸಾವಂತ್?
ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ಗೋವಾದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಒತ್ತಡ ಸಿಎಂ ಘೋಷಣೆಯಾಗದಕ್ಕೆ ಎರಡನೆ ಕಾರಣ. ವಿಶ್ವಜಿತ್ ರಾಣೆ ಅವರನ್ನು ಮುಂದಿನ ಸಿಎಂ ಮಾಡಬೇಕು ಎಂದು ಪಕ್ಷದ ವಲಯಗಳಲ್ಲಿ ಚರ್ಚೆಯಾಗುತ್ತಿದೆ. ಜನರು ಅವರಿಗೆ ಜಯಕಾರ ಹಾಕುತ್ತಾ ಅವರನ್ನೇ ಮುಖ್ಯಮಂತ್ರಿ ಅಂತ ಘೋಷಿಸಬೇಕೆಂದು ಪಕ್ಷದ ವರಿಷ್ಠರನ್ನು ಆಗ್ರಹಿಸುತ್ತಿದ್ದಾರೆ. ರಾಣೆ ಅವರು ದೆಹಲಿಯ ಕೆಲವು ಪ್ರಮುಖ ನಾಯಕರಿಗೆ ಇಷ್ಟವಾಗಿದ್ದಾರೆ. ಅವರು ಪ್ರಬಲ ಸ್ಪರ್ಧಿಯಾಗಿದ್ದು, ಅವರ ನಡುವಿನ ಜಗಳವೇ ನಿರ್ಧಾರಕ್ಕೆ ವಿಳಂಬವಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ನಾಯಕರೊಬ್ಬರು ಹೇಳುತ್ತಾರೆ.
ಮಾರ್ಚ್ 9 ರಂದು ರಾಣೆ ಅವರು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಮತ್ತು ಇತರ ಕೆಲವು ನಾಯಕರೊಂದಿಗೆ ಹೋರಾಟದ ಫೋಟೋವನ್ನು ಹಾಕಿದ್ದರು. ಕೂಡಲೇ ಅವರು ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು. ಇದು ಬಿಜೆಪಿ ಹೈಕಮಾಂಡ್ವರೆಗೆ ಸುದ್ದಿಯಾಗಿತ್ತು. ನೀವು ಸಿಎಂ ರೇಸ್ನಲ್ಲಿದ್ದೀರಾ ಎಂದು ಸುದ್ದಿಗಾರರ ಪ್ರಶ್ನೆಗೆ ರಾಣೆ ಅವರು 'ನಗುತ್ತಾ ಕಾದು ನೋಡೋಣ' ಎಂದು ಹೇಳಿದ್ದಾರೆ. ರಾಣೆ ಜೊತೆ ಕೆಲವು ಬಿಜೆಪಿ ನಾಯಕರು ರೇಸ್ನಲ್ಲಿದ್ದಾರೆ.
ಇತ್ತ "ನಾವು ಪ್ರಮೋದ್ ಸಾವಂತ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿ ಚುನಾವಣೆಗೆ ಹೋಗಿದ್ದೆವು. ಅವರು ಉತ್ತಮ ಆಡಳಿತ ನಡೆಸಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಅವರು ಸ್ಪಷ್ಟ ಆಯ್ಕೆಯಾಗಿದ್ದಾರೆ" ಎಂದು ಸಾವಂತ್ ಗುಂಪಿನ ನಾಯಕರೊಬ್ಬರು ಹೇಳುತ್ತಾರೆ.
ಅಂತಿಮ ನಿರ್ಧಾರವನ್ನು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ. ನಮಗೆ ಯಾವುದೇ ಆತುರವಿಲ್ಲ. ನಾವು ಉತ್ತಮವಾಗಿ ಗೆದ್ದಿದ್ದೇವೆ ಮತ್ತು ಮುಂದಿನ ಐದು ವರ್ಷಗಳ ಕಾಲ ನಾವು ಸ್ಥಿರ ಮತ್ತು ಉತ್ತಮ ಸರ್ಕಾರವನ್ನು ನೀಡುತ್ತೇವೆ. ಸಿಎಂ ಆಯ್ಕೆಗೆ ನಾವು ಕಾಯಬೇಕು' ಎಂದು ಬಿಜೆಪಿಯ ಗೋವಾ ಡೆಸ್ಕ್ ಉಸ್ತುವಾರಿ ಸಿ.ಟಿ.ರವಿ ಹೇಳಿದರು.
ಕಾರಣ ಮೂರು: ಜ್ಯೋತಿಷ್ಯ
ವಿಳಂಬಕ್ಕೆ ಕಾರಣವಾಗುವ ಮೂರನೇ ಕಾರಣ ಜ್ಯೋತಿಷ್ಯದ ಮೇಲೆ ಅವಲಂಬಿತವಾಗಿದೆ. "ಮಾರ್ಚ್ 10 ಮತ್ತು 17 ರ ನಡುವೆ ಯಾವುದೇ ಶುಭ ದಿನಗಳಿಲ್ಲ. ಆದ್ದರಿಂದ ಪ್ರಮಾಣ ವಚನವು ನಡೆಯಬೇಕಿದ್ದರೂ, ಅದು ಅದರ ನಂತರವೇ" ಎಂದು ಸಿಎಂಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.