• search
 • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋವಾ; ಬಿಜೆಪಿಗೆ ತಲೆನೋವಾದ ಕ್ರಿಶ್ಚಿಯನ್ ಶಾಸಕರ ರಾಜೀನಾಮೆ!

|
Google Oneindia Kannada News

ಪಣಜಿ, ಜನವರಿ 11; ಗೋವಾ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಕ್ರಿಶ್ಚಿಯನ್ ಸಮುದಾಯದ ಶಾಸಕರ ರಾಜೀನಾಮೆ ತಲೆನೋವಾಗಿದೆ. ಫೆಬ್ರವರಿ 14ರಂದು 40 ಸದಸ್ಯ ಬಲದ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟದಲ್ಲಿ ಸಚಿವರಾಗಿದ್ದ ಮೈಕಲ್ ಲೋಬೋ ಸೋಮವಾರ ಸಚಿವ, ಶಾಸಕಸ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಕೊಟ್ಟಿದ್ದಾರೆ.

ಗೋವಾ ಚುನಾವಣೆ; ಒಂದೇ ದಿನ ಇಬ್ಬರು ಬಿಜೆಪಿ ಶಾಸಕರ ರಾಜೀನಾಮೆ ಗೋವಾ ಚುನಾವಣೆ; ಒಂದೇ ದಿನ ಇಬ್ಬರು ಬಿಜೆಪಿ ಶಾಸಕರ ರಾಜೀನಾಮೆ

ಬಿಜೆಪಿ ಮೂಲಗಳ ಪ್ರಕಾರ ಚುನಾವಣೆಯಲ್ಲಿ ಪತ್ನಿಗೆ ಟಿಕೆಟ್ ಕೊಡಿಸಲು ಮೈಕಲ್ ಲೋಬೋ ಪ್ರಯತ್ನ ನಡೆಸಿದ್ದರು. ಆದರೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆಯೇ ಪಕ್ಷ ತೊರೆದಿದ್ದಾರೆ.

ಗೋವಾ ಚುನಾವಣೆ; ಟಿಎಂಸಿ ಜೊತೆ ಮೈತ್ರಿ ಇಲ್ಲ ಎಂದ ಕಾಂಗ್ರೆಸ್!ಗೋವಾ ಚುನಾವಣೆ; ಟಿಎಂಸಿ ಜೊತೆ ಮೈತ್ರಿ ಇಲ್ಲ ಎಂದ ಕಾಂಗ್ರೆಸ್!

ಮೈಕಲ್ ಲೋಬೋ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಹಬ್ಬಿವೆ. ಆದರೆ ಪಕ್ಷ ಪತ್ನಿಗೆ ಟಿಕೆಟ್ ನೀಡುವ ಭರವಸೆ ಕೊಟ್ಟಿದೆಯೇ? ಎಂಬುದು ಇನ್ನೂ ಗುಟ್ಟಾಗಿ ಉಳಿದಿದೆ. ಗೋವಾದಲ್ಲಿ ಮೊದಲ ಬಾರಿ ಚುನಾವಣಾ ಕಣಕ್ಕಿಳಿಯುತ್ತಿರುವ ಟಿಎಂಸಿ ಮೈಕಲ್ ಲೋಬೋ ಸೆಳೆಯಲು ಪ್ರಯತ್ನ ನಡೆಸಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಸಮೀಕ್ಷೆ; ಗೋವಾ ಚುನಾವಣೆಯಲ್ಲಿ ಎಎಪಿಗೆ ಪ್ರತಿಪಕ್ಷ ಸ್ಥಾನ! ಸಮೀಕ್ಷೆ; ಗೋವಾ ಚುನಾವಣೆಯಲ್ಲಿ ಎಎಪಿಗೆ ಪ್ರತಿಪಕ್ಷ ಸ್ಥಾನ!

ಕಲಂಘಾಟ್ ಕ್ಷೇತ್ರದ ಶಾಸಕರಾಗಿದ್ದ ಮೈಕಲ್ ಲೋಬೋ ಉತ್ತರ ಗೋವಾದ ಪ್ರಭಾವಿ ನಾಯಕ. 5 ರಿಂದ 6 ಕ್ಷೇತ್ರಗಳಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದಾರೆ. "ಬಿಜೆಪಿ ಜನ ಸಾಮಾನ್ಯರ ಪಕ್ಷವಾಗಿ ಉಳಿದಿಲ್ಲ. ತಳಮಟ್ಟದ ಕಾರ್ಯಕರ್ತರನ್ನು ಸಹ ಕಡೆಗಣಿಸಲಾಗುತ್ತಿದೆ" ಎಂದು ಲೋಬೋ ಆರೋಪ ಮಾಡಿದ್ದಾರೆ.

ಮೂವರು ಶಾಸಕರ ರಾಜೀನಾಮೆ; ಮೈಕಲ್ ಲೋಬೋ ಬಿಜೆಪಿ ತೊರೆದ ಮೊದಲ ಕ್ರಿಶ್ಚಿಯನ್ ಸಮುದಾಯದ ಶಾಸಕರಲ್ಲ. ಈಗಾಗಲೇ ಅಲಿನಾ ಸಾಲ್ದಾನಾ, ಕಾರ್ಲೊಸ್ ಅಲ್ಮೇಡಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ ತಿಂಗಳು ಬಿಜೆಪಿ ಬಿಟ್ಟಿದ್ದ ಅಲಿನಾ ಸಾಲ್ದಾನಾ ಎಎಪಿ ಸೇರಿದ್ದಾರೆ. ವಾಸ್ಕೋ ಕ್ಷೇತ್ರದ ಶಾಸಕರಾಗಿದ್ದ ಕಾರ್ಲೊಸ್ ಅಲ್ಮೇಡಾ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಟಿಎಂಸಿ ಸೇರುವಂತೆ ಪ್ರಶಾಂತ್ ಕಿಶೋರ್ ಮೈಕಲ್ ಲೋಬೋ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಯೂ ಇದೆ.

ಕ್ರಿಶ್ಚಿಯನ್ ಸಮುದಾಯ; 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕ ರಾಜ್ಯ ಗೋವಾ. ರಾಜ್ಯದಲ್ಲಿ ಶೇ 27ರಷ್ಟು ಕ್ರಿಶ್ಚಿಯನ್ ಸಮುದಾಯದ ಮತಗಳಿದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ.

ರಾಜ್ಯದಲ್ಲಿ ಶೇ 8ರಷ್ಟು ಮುಸ್ಲಿಂ, ಶೇ 20ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತಗಳಿವೆ. ಕಾಂಗ್ರೆಸ್ ಪಕ್ಷ ಮುಸ್ಲಿಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತಗಳ ಮೇಲೆ ಕಣ್ಣಿಟ್ಟಿದ್ದು, ರಾಜ್ಯದಲ್ಲಿ ಅಧಿಕಾರ ಪಡೆಯುವ ನೀರಿಕ್ಷೆಯಲ್ಲಿದೆ.

ಕ್ರಿಶ್ಚಿಯನ್, ಮುಸ್ಲಿಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದ್ದರಿಂದಲೇ 2017ರ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಿತ್ತು. ಆದರೆ ಸರ್ಕಾರ ರಚನೆ ಮಾಡಲು ವಿಫಲವಾಗಿತ್ತು.

ಕಳೆದ ಚುನಾವಣೆಯಲ್ಲಿ 40 ಕ್ಷೇತ್ರಗಳ ಪೈಕಿ 37ರಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ 17ರಲ್ಲಿ ಗೆದ್ದಿತ್ತು. 36 ಸ್ಥಾನಗಳಲ್ಲಿ ಕಣಕ್ಕಿಳಿದಿದ್ದ ಬಿಜೆಪಿ 13 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಿಜೆಪಿ ಸರ್ಕಾರ ರಚನೆ ಮಾಡಿತ್ತು.

ಚುನಾವಣೆಯಲ್ಲಿ ಕಾಂಗ್ರೆಸ್ ಶೇ 28.35ರಷ್ಟು ಮತ ಪಡೆದಿತ್ತು. ಬಿಜೆಪಿ 32.48ರಷ್ಟು ಮತಗಳಿಸಿತ್ತು. ಈಗ ಕ್ರಿಶ್ಚಿಯನ್ ಸಮುದಾಯ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ದರಿಂದ ಶಾಸಕರು ಪಕ್ಷ ಬಿಟ್ಟು ಬೇರೆ ಪಕ್ಷದತ್ತ ಹೊರಟಿದ್ದಾರೆ.

Recommended Video

   Cricket ಪ್ರೇಮಿಗಳು ತಿಳಿದುಕೊಳ್ಳಬೇಕಾಗಿರೋ ವಿಷಯ | One-Day Internationals | Oneindia Kannada

   ಈ ಬಾರಿಯ ಚುನಾವಣೆ ಪೂರ್ವ ಸಮೀಕ್ಷೆಗಳು ಬಿಜೆಪಿ ಮರಳಿ ಅಧಿಕಾರ ಪಡೆಯಲಿವೆ. ಎಎಪಿ ಪ್ರತಿಪಕ್ಷ ಸ್ಥಾನಕ್ಕೆ ಬರಲಿದೆ. ಕಾಂಗ್ರೆಸ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿವೆ ಎಂದು ಹೇಳಿವೆ.

   English summary
   Christian MLAs of Goa BJP quitting party a headache for the saffron party ahead of the assembly elections in February 14.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X