ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಕ್ಕರ್ ನಿಧನಾನಂತರ ಗೋವಾ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ

|
Google Oneindia Kannada News

ಪಣಜಿ, ಮಾರ್ಚ್ 18: ಮನೋಹರ್ ಪರಿಕ್ಕರ್ ಅವರು ನಿಧನರಾಗಿ ಇನ್ನೂ ಆಂತ್ಯಕ್ರಿಯೆ ಮುಗಿದಿಲ್ಲ. ಆದರೆ ಅದಾಗಲೇ ಗೋವಾ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ.

ಮನೋಹರ್ ಪರಿಕ್ಕರ್ ನಂತರ ಗೋವಾದ ಮುಂದಿನ ಮುಖ್ಯಮಂತ್ರಿ ಯಾರು? ಮನೋಹರ್ ಪರಿಕ್ಕರ್ ನಂತರ ಗೋವಾದ ಮುಂದಿನ ಮುಖ್ಯಮಂತ್ರಿ ಯಾರು?

ಗೋವಾದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಇಂದು 3 ರಿಂದ 5 ಗಂಟೆಯ ಒಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮುಖಂಡ ವಿನಯ್ ತೆಂಡುಲ್ಕರ್ ಹೇಳಿದ್ದಾರೆ.

ಮನೋಹರ್ ನಿಧನದ ನಂತರವೂ ಗೋವಾ ಬಿಜೆಪಿ ಸರ್ಕಾರ ಸ್ಥಿರಮನೋಹರ್ ನಿಧನದ ನಂತರವೂ ಗೋವಾ ಬಿಜೆಪಿ ಸರ್ಕಾರ ಸ್ಥಿರ

ಆದರೆ ಅತ್ತ ಕಾಂಗ್ರೆಸ್, ಬಿಜೆಪಿ ಸರ್ಕಾರ ಕ್ಕೆ ಬಹುಮತವಿಲ್ಲ ಎಂದು ಆರೋಪಿಸಿ, ಗೋವಾ ಗವರ್ನರ್ ಮೃದುಲಾ ಸಿನ್ಹಾ ಅವರನ್ನು ಭೇಟಿ ಮಾಡಿ ಕಾಮಗ್ರೆಸ್ಸಿಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವಂತೆ ಕೇಳಿವೆ.

Goa politics after Manohar Parrikar death, BJP in search of successor!

ಭಾನುವಾರ ರಾತ್ರಿಯೇ ಬಿಜೆಪಿ ಮತ್ತು ಮಿತ್ರಪಕ್ಷಗಳೊಂದಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಭೆ ನಡೆಸಿದ್ದರು. 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗೋವಾದಲ್ಲಿ ಬಿಜೆಪಿ 13 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ 14 ಸ್ಥಾನ ಹೊಂದಿ ಅತೀ ದೊಡ್ಡ ಪಕ್ಷವಾಗಿಯಲ್ಲಿ ಪ್ರಸ್ತುತ 37 ಸದಸ್ಯ ಬಲ ಇರುವುದರಿಂದ ಮ್ಯಾಜಿಕ್ ನಂಬರ್ 19. ಬಿಜೆಪಿಯು, ಗೋವಾ ಫಾರ್ವಡ್ ಎಂಜಿಪಿ ಮುಂತಾದ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಆ ಮೂಲಕ 21 ಸ್ಥಾನಗಳನ್ನು ಪಡೆದು ಬಹುಮತ ಸಾಧಿಸಿದ್ದು, ಬಿಜೆಪಿ ಸರ್ಕಾರ ಬೀಳುವ ಸಾಧ್ಯತೆ ಕಡಿಮೆ. ಆದರೆ ಬಿಜೆಪಿ ಮಿತ್ರಪಕ್ಷಗಳು ಬಂಡಾಯ ಎದ್ದರೆ ಆ ಲಾಭವನ್ನು ಕಾಂಗ್ರೆಸ್ ಪಡೆಯಬಹುದು.

English summary
The Goa BJP chief, Vinay Tendulkar has said that his party will arrive at a decision on Manohar Parrikar's successor by 3 pm today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X