ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸು ಕೊಲ್ಲುವ ಹುಲಿಗೆ ಏಕೆ ಶಿಕ್ಷೆ ಇಲ್ಲ?: ಗೋವಾ ಶಾಸಕನ ಪ್ರಶ್ನೆ

|
Google Oneindia Kannada News

ಪಣಜಿ, ಫೆಬ್ರವರಿ 6: 'ಹಸುವನ್ನು ತಿನ್ನುವ ಹುಲಿಗಳಿಗೂ ಶಿಕ್ಷೆ ವಿಧಿಸಬೇಕು' ಎಂದು ಗೋವಾದ ಎನ್‌ಸಿಪಿ ಶಾಸಕ ಚರ್ಚಿಲ್ ಅಲೆಮಾವೊ ವಿಚಿತ್ರ ವಾದ ಮುಂದಿಟ್ಟಿದ್ದಾರೆ.

ಮನುಷ್ಯರು ಗೋವನ್ನು ತಿಂದರೆ ಶಿಕ್ಷೆ ವಿಧಿಸಲಾಗುತ್ತದೆ. ಹಾಗಾದರೆ ಗೋವನ್ನು ತಿನ್ನುವ ಹುಲಿಗಳಿಗೆ ಏನು ಶಿಕ್ಷೆ ನೀಡಲಾಗುತ್ತದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಜನರ ಗುಂಪಿನ ಮೇಲೆ ಹುಲಿ ದಾಳಿ, ಮೂವರಿಗೆ ಗಾಯ: ವೈರಲ್ ವಿಡಿಯೋಜನರ ಗುಂಪಿನ ಮೇಲೆ ಹುಲಿ ದಾಳಿ, ಮೂವರಿಗೆ ಗಾಯ: ವೈರಲ್ ವಿಡಿಯೋ

ಹುಲಿಗಳನ್ನು ಕೊಂದು ಹಾಕಿದ ಘಟನೆ ಬಗ್ಗೆ ಗೋವಾ ವಿಧಾನಸಭೆಯಲ್ಲಿ ಬುಧವಾರ ತೀವ್ರ ಚರ್ಚೆ ನಡೆಯಿತು. ಈ ವೇಳೆ, ಗೋಹತ್ಯೆ ಮಾಡುವ ಮನುಷ್ಯರಿಗೆ ಶಿಕ್ಷೆ ನೀಡುವಂತೆ, ಹುಲಿಗಳಿಗೂ ಶಿಕ್ಷೆ ವಿಧಿಸಬೇಕು ಎಂದು ಅಲೆಮಾವೊ ಹೇಳಿದರು.

Goa NCP MLA Churchill Alemao Tigers Must Be Punished For Eating Cows

ಗೋವಾದ ಮಹದಾಯಿ ವನ್ಯಜೀವಿ ಸಂರಕ್ಷಣಾ ವಲಯದಲ್ಲಿ ಐವರು ಸ್ಥಳೀಯರು ಒಂದು ಹೆಣ್ಣು ಹುಲಿ ಮತ್ತು ಅದರ ಮೂರು ಮರಿಗಳನ್ನು ಕೊಂದು ಹಾಕಿದ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ವಿಚಾರವನ್ನು ಗೋವಾ ವಿರೋಧಪಕ್ಷದ ನಾಯಕ ದಿಗಂಬರ ಕಾಮತ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಗಮನ ಸೆಳೆಯುವ ನಿರ್ಣಯಕ್ಕೆ ಒತ್ತಾಯಿಸಿದರು.

ವನ್ಯಜೀವಿಗಳ ವಿಚಾರದಲ್ಲಿ ಹುಲಿಗಳ ಸಂರಕ್ಷಣೆ ಬಹಳ ಮುಖ್ಯ. ಆದರೆ ಮನುಷ್ಯರ ವಿಚಾರಕ್ಕೆ ಬಂದಾಗ ಗೋವುಗಳು ಬಹಳ ಮುಖ್ಯ. ಇಡೀ ಘಟನೆಯಲ್ಲಿ ಮನುಷ್ಯರ ಜೀವನದ ಆಯಾಮವನ್ನು ನಿರ್ಲಕ್ಷಿಸಬಾರದು ಎಂದು ಎಂದು ಅಲೆಮಾವೊ ಹೇಳಿದರು.

ಕರಡಿಗೆ ಬೆದರಿ ಓಡಿದ ಹುಲಿಗಳು: ವೈರಲ್ ವಿಡಿಯೋಕರಡಿಗೆ ಬೆದರಿ ಓಡಿದ ಹುಲಿಗಳು: ವೈರಲ್ ವಿಡಿಯೋ

ಗಮನಸೆಳೆಯುವ ನಿರ್ಣಯ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ತಮ್ಮ ಬದುಕಿಗೆ ಆಧಾರವಾಗಿದ್ದ ಹಸುವನ್ನು ಕೊಂದ ಕಾರಣಕ್ಕೆ ರೈತರು ಹುಲಿಗಳನ್ನು ಸಾಯಿಸಿದ್ದಾರೆ. ವನ್ಯಜೀವಿ ದಾಳಿಯಿಂದ ತಮ್ಮ ಹಸು ಕಳೆದುಕೊಂಡ ರೈತರಿಗೆ ಮೂರು ನಾಲ್ಕು ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಅಲೆಮಾವೊ ಅವರ ಹೇಳಿಕೆ ವ್ಯಾಪಕ ವೈರಲ್ ಆಗಿದೆ. ಅವರ ಮಾತನ್ನು ಅನೇಕರು ಟೀಕಿಸಿದ್ದರೆ, ಇನ್ನು ಕೆಲವರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಗೋಹತ್ಯೆ ಮಾಡುವುದಕ್ಕೆ ಶಿಕ್ಷೆ ವಿಧಿಸುವುದನ್ನು ಅವರು ವ್ಯಂಗ್ಯವಾಡಿದ್ದಾರೆ ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ.

English summary
Goa NCP MLA Churchil Alemao said that, tigers should be punished for eating cows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X