ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾದಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಐವರ್ಮೆಕ್ಟಿನ್ ಔಷಧಿ

|
Google Oneindia Kannada News

ಪಣಜಿ, ಮೇ 11: ಗೋವಾದಲ್ಲಿ 18 ವರ್ಷ ಮೇಲ್ಪಟ್ಟವರ ಕೊರೊನಾವೈರಸ್ ರೋಗದ ಸ್ಥಿತಿಗತಿಯನ್ನು ಪರಿಗಣಿಸದೇ ಪ್ರತಿಯೊಬ್ಬರಿಗೂ "ಐವರ್ಮೆಕ್ಟಿನ್" ಔಷಧಿಯನ್ನು ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.

ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೊರೊನಾವೈರಸ್ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದಿಂದ "ಐವರ್ಮೆಕ್ಟಿನ್" ಔಷಧಿ ನೀಡಲಾಗುತ್ತಿದೆ ಎಂದರು. ಆದರೆ ಇದೇ "ಐವರ್ಮೆಕ್ಟಿನ್" ಔಷಧಿಗೆ ಯುಎಸ್ ಆಹಾರ ಮತ್ತು ಔಷಧೀಯ ಪ್ರಾಧಿಕಾರವು ಅನುಮೋದನೆ ನೀಡಲು ನಿರಾಕರಿಸಿತ್ತು.

ಆಗಸ್ಟ್ ಆರಂಭಕ್ಕೆ ಭಾರತದಲ್ಲಿ ಕೊರೊನಾಗೆ 10 ಲಕ್ಷ ಮಂದಿ ಬಲಿ: ದಿ ಲ್ಯಾನ್ಸೆಟ್ ವರದಿಆಗಸ್ಟ್ ಆರಂಭಕ್ಕೆ ಭಾರತದಲ್ಲಿ ಕೊರೊನಾಗೆ 10 ಲಕ್ಷ ಮಂದಿ ಬಲಿ: ದಿ ಲ್ಯಾನ್ಸೆಟ್ ವರದಿ

ಐದು ದಿನಗಳ ಅವಧಿಯವರೆಗೂ "ಐವರ್ಮೆಕ್ಟಿನ್" ಔಷಧಿಯನ್ನು ನೀಡಲಾಗುತ್ತದೆ. ಈ ಔಷಧಿಯು ಕೊರೊನಾವೈರಸ್ ಸೋಂಕಿತರ ಮರಣ ಪ್ರಮಾಣವನ್ನು ತಗ್ಗಿಸುವುದರ ಜೊತೆಗೆ ಕೊವಿಡ್-19 ಸೋಂಕು ನಿವಾರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದೆ ಎಂದು ಇಂಗ್ಲೆಂಡ್, ಇಟಲಿ, ಸ್ಪೇನ್ ಮತ್ತು ಜಪಾನ್ ರಾಷ್ಟ್ರಗಳ ತಜ್ಞರ ತಂಡ ಅಭಿಪ್ರಾಯಪಟ್ಟಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸ್ಪಷ್ಟಪಡಿಸಿದ್ದಾರೆ.

Goa Govt Treat Coronavirus Patients With A Ivermectin Drug; Which Disapproved By US Regulator

ರೋಗ ನಿರೋಧಕ ಚಿಕಿತ್ಸೆಗೆ ಕ್ರಮ:

ಗೋವಾದಲ್ಲಿ ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡಲು ಅಗತ್ಯವಿರುವ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಯನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲು ಈಗಾಗಲೇ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ. ಈ ಚಿಕಿತ್ಸೆಯು COVID-19 ಸೋಂಕನ್ನು ತಡೆಯುವುದಿಲ್ಲ. ಆದರೆ ಈ ರೀತಿಯ ಚಿಕಿತ್ಸೆಯಿಂದಾಗಿ ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

"ಐವರ್ಮೆಕ್ಟಿನ್" ಔಷಧಿ ಎಲ್ಲಿ ಲಭ್ಯ?:

"ಐವರ್ಮೆಕ್ಟಿನ್ 12 ಮಿಲಿ ಗ್ರಾಂ ಔಷಧಿಯು ಎಲ್ಲ ಜಿಲ್ಲೆ, ಉಪ ಜಿಲ್ಲೆ, ಪಿಎಚ್‌ಸಿ, ಸಿಎಚ್‌ಸಿ, ಉಪ ಆರೋಗ್ಯ ಕೇಂದ್ರಗಳು, ಗ್ರಾಮೀಣ ಔಷಧಾಲಯಗಳಲ್ಲಿ ಲಭ್ಯವಾಗಲಿದೆ. ಕೊರೊನಾವೈರಸ್ ಸೋಂಕಿನ ಯಾವುದೇ ಲಕ್ಷಣವನ್ನು ಲೆಕ್ಕಿಸದೇ ಚಿಕಿತ್ಸೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ರಾಣೆ ಹೇಳಿದ್ದಾರೆ.

ಗೋವಾದಲ್ಲಿ ಕೊರೊನಾವೈರಸ್ ಪ್ರಕರಣ:

ರಾಜ್ಯದಲ್ಲಿ ಒಂದೇ ದಿನ 2,804 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 1,21,650ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 50 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 1,729ಕ್ಕೆ ಏರಿಕೆಯಾಗಿದೆ.

English summary
Goa Govt Treat Coronavirus Patients With A Ivermectin Drug; Which Disapproved By US Regulator.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X