ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರರಾಜ್ಯ ಸಂಚಾರಕ್ಕೆ ಅನುಮತಿ ಕೊಡಲ್ಲ: ಗೋವಾ ಗಟ್ಟಿ ನಿರ್ಧಾರ

|
Google Oneindia Kannada News

ಪಣಜಿ, ಜೂನ್ 1: ಸೋಮವಾರದಿಂದ ದೇಶದಲ್ಲಿ ಲಾಕ್‌ಡೌನ್‌ 5.0 ಜಾರಿಯಾಗಿದೆ. ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ ಮಾಡಿದ್ದು, ಹೆಚ್ಚಿನ ಸಡಿಲಿಕೆ ನೀಡಿದೆ. ಪ್ರಮುಖವಾಗಿ ಅಂತರರಾಜ್ಯ ಮತ್ತು ಅಂತರ ಜಿಲ್ಲೆ ಸಂಚಾರಕ್ಕೆ ಮುಕ್ತ ಅವಕಾಶ ನೀಡಿದೆ. ಯಾವುದೇ ಪಾಸ್ ಅಗತ್ಯವಿಲ್ಲದೆ ಮುಕ್ತವಾಗಿ ಸಂಚರಿಸಲು ಕೇಂದ್ರ ಅನುಮತಿ ನೀಡಿದೆ.

Recommended Video

Padarayanapura corporator Imran Pasha shares special video from quaratine centre | Oneindia Kannada

ಇದರಿಂದ ದೇಶದಲ್ಲಿ ವಾಣಿಜ್ಯ ಚಟುವಟಿಕೆ ಮತ್ತಷ್ಟು ಚುರುಕಾಗಲಿದೆ. ಪ್ರಮುಖ ನಗರಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ಸ್ವಂತ ಊರುಗಳಿಗೆ ಹೋಗಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಆದರೆ, ಗೋವಾದಲ್ಲಿ ಅಂತರರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಗೋ ಗೋ ಗೋವಾ..ಕೊಂಕಣ್ ರೈಲ್ವೆ, ವಿಮಾನ ಸಂಚಾರ ಶುರುಗೋ ಗೋ ಗೋವಾ..ಕೊಂಕಣ್ ರೈಲ್ವೆ, ವಿಮಾನ ಸಂಚಾರ ಶುರು

ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ನಿರ್ಧಾರ

ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ನಿರ್ಧಾರ

''ಕೇಂದ್ರ ಸರ್ಕಾರ ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಗೋವಾ ಸರ್ಕಾರ ಪಾಲಿಸಲಿದೆ. ಇನ್ನುಳಿದ ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಅಥವಾ ನಿಯಮಗಳನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು'' ಎಂದು ಸಿಎಂ ತಿಳಿಸಿದ್ದಾರೆ. ಆದರೆ, 'ನಾವು ಅಂತರರಾಜ್ಯ ಸಂಚಾರಕ್ಕೆ ಅನುಮತಿ ನೀಡಲ್ಲ'' ಎಂದು ಸ್ಪಷ್ಟವಾಗಿ ಗೋವಾ ಮುಖ್ಯಮಂತ್ರಿ ಎಎನ್ಐಗೆ ತಿಳಿಸಿದ್ದಾರೆ.

ಅನುಮತಿ ಕೊಟ್ಟರೆ ಸೋಂಕು ಹರಡಬಹುದು!

ಅನುಮತಿ ಕೊಟ್ಟರೆ ಸೋಂಕು ಹರಡಬಹುದು!

ಒಂದು ವೇಳೆ ರಾಜ್ಯದಲ್ಲಿ ಅಂತರರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ಕೊಟ್ಟರೆ, ಗೋವಾದಲ್ಲಿ ಮತ್ತೆ ಸೋಂಕು ಹೆಚ್ಚಾಗಬಹುದು ಎಂಬ ಭೀತಿ ಇದೆ. ಕೊರೊನಾ ಹಾಟ್‌ಸ್ಪಾಸ್‌ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಹಾಗೂ ಕರ್ನಾಟಕದಿಂದಲೂ ಜನರು ಹೋಗುವ ನಿರೀಕ್ಷೆ ಇದ್ದು, ಮುನ್ನೆಚ್ಚರಿಕೆಯಾಗಿ ಅಂತರರಾಜ್ಯ ಸಂಚಾರಕ್ಕೆ ಗೋವಾ ತಡೆ ಹಾಕಿದೆ.

ದೆಹಲಿಯಲ್ಲಿ ಏಳು ದಿನ ಗಡಿ ಬಂದ್

ದೆಹಲಿಯಲ್ಲಿ ಏಳು ದಿನ ಗಡಿ ಬಂದ್

ಲಾಕ್‌ಡೌನ್‌ 5.0 ಹಂತದಲ್ಲಿ ಕೇಂದ್ರ ಸರ್ಕಾರ ಹಲವು ವಿನಾಯಿತಿ ನೀಡಲಾಗಿದೆ. ಆದರೆ, ಮುಂದಿನ ಏಳು ದಿನಗಳ ಕಾಲ ದೆಹಲಿಯಲ್ಲಿ ಗಡಿ ಬಂದ್ ಮಾಡುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಅಗತ್ಯ ವಸ್ತು, ತುರ್ತು ಸೇವೆಗಳ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದೆ. ಒಂದು ವಾರದ ಬಳಿಕ ಗಡಿಗಳನ್ನು ಪುನಃ ತೆರೆಯುವ ಕುರಿತು ತೀರ್ಮಾನವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಲಾಕ್‌ಡೌನ್ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಹೆಚ್ಚಿನ ಅಧಿಕಾರ ನೀಡಿದೆ.

ಗೋವಾದಲ್ಲಿ 71 ಪ್ರಕರಣ ದಾಖಲು

ಗೋವಾದಲ್ಲಿ 71 ಪ್ರಕರಣ ದಾಖಲು

ಒಂದು ಹಂತದಲ್ಲಿ ಕೊರೊನಾ ವೈರಸ್ ಪ್ರಕರಣದಿಂದ ಗೋವಾ ರಾಜ್ಯ ಮುಕ್ತವಾಗಿತ್ತು. ವರದಿಯಾಗಿದ್ದ ಎಲ್ಲ ಕೇಸ್‌ಗಳು ಚೇತರಿಸಿಕೊಂಡಿದ್ದವು. ವಿದೇಶ ಮತ್ತು ಹೊರರಾಜ್ಯಗಳಲ್ಲಿ ಸಿಲುಕಿಕೊಂಡಿದ್ದವರ ಸಂಚಾರಕ್ಕೆ ಅನುಮತಿ ನೀಡಿದ ಮೇಲೆ ಗೋವಾದಲ್ಲಿ ಕೊರೊನಾ ಕೇಸ್ ಹೆಚ್ಚಾಯಿತು. ಪ್ರಸ್ತುತ ಗೋವಾದಲ್ಲಿ 27 ಕೇಸ್ ಸಕ್ರಿಯವಾಗಿದೆ. 44 ಜನರು ಚೇತರಿಸಿಕೊಂಡಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ.

<br />ದೆಹಲಿಯಲ್ಲಿ ಲಾಕ್ ಡೌನ್‌ ವಿನಾಯಿತಿ; ರಾಜ್ಯದ ಗಡಿಗಳು ಬಂದ್
ದೆಹಲಿಯಲ್ಲಿ ಲಾಕ್ ಡೌನ್‌ ವಿನಾಯಿತಿ; ರಾಜ್ಯದ ಗಡಿಗಳು ಬಂದ್

English summary
All relaxations that have been allowed by Central govt will be allowed in Goa. but, not allowing inter state transport said Chief Minister Pramod Sawant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X