ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 30ರವರೆಗೆ ಲಾಕ್ ಡೌನ್ ಮುಂದುವರೆಸಿ ಎಂದ ಗೋವಾ ಸರ್ಕಾರ

|
Google Oneindia Kannada News

ಪಣಜಿ, ಏಪ್ರಿಲ್ 08: ಭಾರತದಲ್ಲಿ ಲಾಕ್ ಡೌನ್‌ ಮುಂದುವರೆಸುವಂತೆ ಅನೇಕ ರಾಜ್ಯಗಳು ಕೇಂದ್ರಕ್ಕೆ ಮನವಿ ಮಾಡಿವೆ. ಗೋವಾ ಸರ್ಕಾರ ಕೂಡ ಈ ತಿಂಗಳ ಕೊನೆಯವರೆಗೆ ಲಾಕ್‌ಡೌನ್‌ ಮಾಡಿ ಎಂದು ತಿಳಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರು ವಾರಗಳ ಕಾಲ ಅಂದರೆ ಏಪ್ರಿಲ್ 14ರ ವರೆಗೆ ಲಾಕ್‌ಡೌನ್ ಘೋಷಣೆ ಮಾಡಿದ್ದರು. ಆದರೆ, ಭಾರತದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಲಾಕ್ ಡೌನ್ ಮುಂದುವರೆಕ್ಕೆ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಹಲವು ರಾಜ್ಯಗಳು ಲಾಕ್‌ಡೌನ್ ಮುಂದುವರೆಸುವಂತೆ ಕೇಳಿಕೊಂಡಿವೆ'.

ಕುಟುಂಬಕ್ಕೆ ಕೊರೊನಾ ಹರಡಬಾರದೆಂದು ಕಾರ್‌ನಲ್ಲೇ ವಾಸ ಮಾಡ್ತಿದ್ದಾರೆ ಈ ಡಾಕ್ಟರ್ ಕುಟುಂಬಕ್ಕೆ ಕೊರೊನಾ ಹರಡಬಾರದೆಂದು ಕಾರ್‌ನಲ್ಲೇ ವಾಸ ಮಾಡ್ತಿದ್ದಾರೆ ಈ ಡಾಕ್ಟರ್

ಗೋವಾದಲ್ಲಿಯೂ ಪಾಸಿಟಿವ್ ಕೇಸ್‌ಗಳು ಹೆಚ್ಚಾಗದ ಹಾಗೆ ಇನ್ನಷ್ಟು ಕಟ್ಟುನಿಟ್ಟಾಗಿ ಲಾಕ್‌ಡೌನ್ ಮಾಡಲು ಗೋವಾ ಸರ್ಕಾರ ಮುಂದಾಗಿದೆ. ಈ ಕುರಿತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಭೆ ನಡೆಸಿದ್ದಾರೆ. ಪರಿಸ್ಥಿತಿ ಕಡಿಮೆ ಆಗುವವರೆಗೆ ಸೆಕ್ಷನ್ 144 ಜಾರಿ ಮಾಡಲು ನಿರ್ಧರಿಸಿದ್ದಾರೆ.

Goa Government To Recommend Extension Of Lockdown

ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಗೋವಾದಲ್ಲಿ ಪಾಸಿಟಿವ್ ಕೇಸ್‌ಗಳು ಕಡಿಮೆ ಇದೆ. 7 ಜನರಿಗೆ ಸೋಂಕು ಇರುವುದು ದೃಢವಾಗಿದೆ. ಏಳು ಕೇಸ್‌ಗಳು ಇದ್ದರೂ, ಅದು ಹೆಚ್ಚಾಗಬಾರದು ಎಂದು ಗೋವಾ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ.

English summary
Goa government recommend to central government extension of lockdown till April 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X